Advt. 
 Views   213

ಕೊಪ್ಪಳ : ಗುಲಾಬ್ ಷಾ ವಲಿ ದರ್ಗಾ ರಸ್ತೆ ವಿವಾದ

Feb 25, 2026, 01:06 AM IST
ಕೊಪ್ಪಳ : ಗುಲಾಬ್ ಷಾ ವಲಿ  ದರ್ಗಾ ರಸ್ತೆ ವಿವಾದ

ಕೊಪ್ಪಳ : ಹುಲಿಕೆರೆ ದಡದಲ್ಲಿ ಇರುವ ಹ. ಗುಲಾಬ್ ಷಾ ವಲಿ ದರ್ಗಾಕ್ಕೆ ಹೋಗುವ ರಸ್ತೆ ವಿವಾದ ಇಂದು ಮತ್ತೆ ಆರಂಭವಾಗಿತ್ತು.‌

ನಗರಸಭೆ ಪೌರಾಯುಕ್ತರು ಹಾಗೂ ಅಧಿಕಾರಿ ಸಿಬ್ಬಂದಿಗಳು ನಿರ್ಮಾಣ ಹಂತದ ರಸ್ತೆ ತೆರವುಗೊಳಿಸಲು ಹೋದಾಗ ದರ್ಗಾ ಬಳಿಯ ನಿವಾಸಿಗಳು , ನಗರದ ಮುಸ್ಲಿಂ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.

ದರ್ಗಾಗೆ ರಸ್ತೆ ನಿರ್ಮಿಸಲು ಕೆರೆ ಒತ್ತುವರಿ ಮಾಡಲಾಗಿದೆ ಎಂದು ಮೊನ್ನೆ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ , ಡಾ. ಬಸವರಾಜ ಕ್ಯಾವಟರ್ ಹಾಗೂ ಇತರರು ಕಾಮಗಾರಿ ಸ್ಥಳದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅಂದು ಕೆರೆ ಒತ್ತುವರಿ ಬಗ್ಗೆ ಸರ್ವೆ ನಡೆಯಲಿ ಎಂಬ ಒತ್ತಾಯ ಕೇಳಿ ಬಂದಿತ್ತು.

ಆದರೆ ಇಂದು ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿ ಹುಲಿಕೆರೆ ಸರ್ವೆ ವರದಿ ಮತ್ತು ಒತ್ತುವರಿ ತೆರವು ಆದೇಶ ಇಲ್ಲದೆ ರಸ್ತೆ ತೆರವು ಮಾಡಲು ಹೋದಾಗ ಅಲ್ಲಿನ ನಿವಾಸಿಗಳು ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ಕೆಲ ಕಾಲ ಗೊಂದಲ ಏರ್ಪಟ್ಟಿತ್ತು.

ಕೆರೆ ಒತ್ತುವರಿ ಆಗಿರುವ ಸರ್ವೆ ವರದಿ ಇಲ್ಲದ ಕಾರಣ ಜನರ ತಕರಾರಿಗೆ ಮಣಿದು ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿ ವಾಪಸ್ ತೆರಳಿದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Mar 5 2026 7:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಲ್ದೋಟಾ ಗೇಟ್ ಬಂದ್ : ಹೋರಾಟಕ್ಕೆ ಮಣಿಯುತ್ತಾ ಸರಕಾರ ?
Mar 4 2026 11:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಾರ್ಖಾನೆ ಧೂಳಿಗೆ ಬೇಸತ್ತು ದಯಾಮರಣ ಬೇಡಿಕೆ
Mar 4 2026 6:32AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೋಳಿ ನಂತರ ಕೆರೆಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ನೀರುಪಾಲು
Mar 2 2026 7:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುಸ್ಲಿಂರ 4% ಮೀಸಲಾತಿ : ಕಾಂಗ್ರೆಸ್ ವಿರುದ್ಧ ನಾಡಗೌಡ್ರು ವಾಗ್ದಾಳಿ
Mar 1 2026 8:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸ್ ದಾಳಿ
Mar 1 2026 5:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಣವೆಗಳಿಗೆ ಬೆಂಕಿ ಸಂಪೂರ್ಣ ಭಸ್ಮ
Mar 1 2026 5:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಯುದ್ದ ಸ್ಥಿತಿ : ದುಬೈನಲ್ಲಿ ಉಳಿದುಕೊಂಡಿರುವ ರಾಯರಡ್ಡಿ ಪುತ್ರಿ
Feb 28 2026 5:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
Feb 28 2026 4:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಂಸದರಿಂದ ಅಕ್ಷೇಪಾರ್ಹ ಪದ ಬಳಕೆ ನೋವುಂಟು ಮಾಡಿದೆ
Feb 27 2026 7:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಿಂದಲೇ ಜೆಡಿಎಸ್ ಮೊದಲ ಗೆಲುವು : ಸಮೀಕ್ಷೆ




Copyright © 2026 Agni Divya. All Rights Reserved.
Designed & Developed by We Make Digitize