ಕೊಪ್ಪಳ ಹತ್ತಿರ ಕಾರ್ಖಾನೆ ವಿರೋಧಿಸಿ ಇಂದು ನಡೆದ ಬಂದ್ ನ ಪ್ರತಿಭಟನಾ ಸಭೆಯ ವೇದಿಕೆಯಲ್ಲಿ ಮತ್ತು ಅದಕ್ಕೂ ಮುಂಚೆ ಮೆರವಣಿಗೆಯಲ್ಲಿ ಉಡಾಫೆ ಶಾಸಕ ರಾಘವೇಂದ್ರ ಹಿಟ್ನಾಳ , ಕೇರ್ ಲೆಸ್ ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿಯವರಿಗೆ ಜನ ತರಾಟೆಗೆ ತೆಗೆದುಕೊಂಡರು.
ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿಗೆ ಭೇಟಿ ಕೊಡಲು ಈ ಮುಂಚೆ ಬೆಂಬಲಿಗರು ಸಲಹೆ ಮಾಡಿದಾಗ ಕ್ಯಾರೆ ಎನ್ನದ ರಾಘವೇಂದ್ರ ಹಿಟ್ನಾಳ ಒಮ್ಮೆಯೂ ಸದನದಲ್ಲಿ ಕಾರ್ಖಾನೆ ಬಗ್ಗೆ ಮಾತನಾಡಿಲ್ಲ. ಹೀಗಾಗಿ ಶಾಸಕರು ಕಾರ್ಖಾನೆ ಪರ ಇರಬಹುದಾ ? ಎಂಬ ಶಂಕೆ ಜನರಿಗೆ.
ತಾವು ಏನು ಮಾಡಿದರೂ ನಡೆಯುತ್ತೆ , ನಮ್ಮನ್ನು ಕೇಳೋರು ಯಾರು ? 4 ವರ್ಷ 10 ತಿಂಗಳಾದ ಮೇಲೆ ಜನರ ಹತ್ರ ಹೋದ್ರೆ ಆಯ್ತು ಓಟು ಹಾಕುತ್ತಾರೆ ಎಂಬ ಉಡಾಫೆಯ ರಾರಾ ಬ್ರದರ್ಸ್ ಇಂದು ಮೆರವಣಿಗೆ ಹಾಗೂ ವೇದಿಕೆಗೆ ಬಂದಾಗ ಜನ ತರಾಟೆಗೆ ತೆಗೆದುಕೊಂಡರು. ರೈತರ ಸಿಂಬಲ್ ಆಗಿರುವ ಹಸಿರು ಟವಲ್ ಅವರಿಬ್ಬರು ಹಾಕಿಕೊಂಡಿದ್ದಕ್ಕೆ ತೆಗೆಯಿರಿ ಅದನ್ನು ಎಂದು ಕೆಲವರು ಆಗ್ರಹಿಸಿದರು.
ಮಾಜಿ ಸಂಸದ ಸಂಗಣ್ಣ ಕರಡಿ ವೇದಿಕೆಯಲ್ಲಿ ಮಾತನಾಡುವಾಗ ಕೂಡ ಜನ ವಿರೋಧ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಹಾಗೂ ಜೆಡಿಎಸ್ ಮುಖಂಡರಾದ ಸಿ.ವಿ.ಚಂದ್ರಶೇಖರ ಹೊರತು ಪಡಿಸಿ ಎಲ್ಲ ರಾಜಕಾರಣಿಗಳ ಭಾಷಣಕ್ಕೆ ಜನ ವಿರೋಧ ವ್ಯಕ್ತಪಡಿಸಿದರು.
---------------------
" ಶಾಸಕರು ಸಂಸದರು ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಬೇಕು ಇಲ್ಲದಿದ್ದರೆ ನಿಮಗೆ ಮತ ಹಾಕುವುದಿಲ್ಲ ಎಂದು ಜನ ಹೇಳಬೇಕು ಯೋಗ್ಯರನ್ನು ಆಯ್ಕೆ ಮಾಡಿಕೊಳ್ಳಬೇಕು "
- ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ
ಜನರ ಬದುಕು ಅಪಾಯದಲ್ಲಿದೆ ಕಾರ್ಖಾನೆಗಳ ವಿಷಾನಿಲದಿಂದ ಜನ ಮಾರಕ ರೋಗಗಳಿಂದ ಬಳಲುತ್ತಿದ್ದಾರೆ ರೈತರ ಬೆಳೆ ಹಾಳಾಗುತ್ತಿದೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜನ ದಂಗೆ ಏಳುವ ಸಂದರ್ಭ ಬರಬಹುದು
- ಎ ಟಿ ರಾಮಸ್ವಾಮಿ ಮಾಜಿ ಶಾಸಕರು