Advt. 
 Views   312

ಜೀವಕ್ಕೆ ಗ್ಯಾರಂಟಿ ಬೇಡಿ ಜನ ಆಕ್ರೋಶ

Feb 24, 2026, 01:46 AM IST
ಜೀವಕ್ಕೆ ಗ್ಯಾರಂಟಿ ಬೇಡಿ ಜನ ಆಕ್ರೋಶ

ಕೊಪ್ಪಳ : ಕಾರ್ಖಾನೆ ವಿಸ್ತರಣೆ ಹಾಗೂ ತಾಲೂಕಿನ ಕಾರ್ಖಾನೆಗಳಿಂದ ಬಾಧಿತ ಗ್ರಾಮಗಳಿಗೆ ಮುಖ್ಯಮಂತ್ರಿ ಭೇಟಿ ಆಗ್ರಹಿಸಿ ನಡೆದ ಕೊಪ್ಪಳ–ಭಾಗ್ಯನಗರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬೆಳಗ್ಗೆಯಿಂದ ಅಂಗಡಿಗಳು ತೆರೆಯದೆ ವ್ಯಾಪಾರಸ್ಥರು ಬಂದ್‌ಗೆ ಸಾಥ್ ನೀಡಿದರು.

ಸಾವಿರಾರು ಜನರ ಮೆರವಣಿಗೆ
ಬಾಧಿತ ಗ್ರಾಮಗಳಿಂದ ವಿದ್ಯಾರ್ಥಿಗಳು, ಮಹಿಳೆಯರು ತೊಟ್ಟಿಲು ಹಾಗೂ ಸರ್ಕಾರದ ಶವದ ಪ್ರತಿಕೃತಿಯೊಂದಿಗೆ ಆಗಮಿಸಿದ್ದು ಹೋರಾಟ ತೀವ್ರತೆ ಪಡೆದಿರುವುದು ಸ್ಪಷ್ಟವಾಯಿತು. ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದರು.

ರದ್ದು ಆದೇಶ ಇಲ್ಲ
ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಜಿ ನೇತೃತ್ವದಲ್ಲಿ ಕಳೆದ ವರ್ಷ ನಡೆದ ಹೋರಾಟಕ್ಕೆ ಇಂದಿಗೆ ಒಂದು ವರ್ಷವಾದರೂ ಕಾರ್ಖಾನೆ ವಿಸ್ತರಣೆ ಆದೇಶ ಜಾರಿ ಆಗಿಲ್ಲ ಎಂಬ ಅಸಮಾಧಾನ ವ್ಯಕ್ತವಾಯಿತು.

ಶಾಸಕರ ವಿರುದ್ದ ಆಕ್ರೋಶ
117 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟ ಧರಣಿಯತ್ತ ಶಾಸಕ ರಾಘವೇಂದ್ರ ಹಿಟ್ನಾಳ ಗಮನ ಹರಿಸಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದ್ದರೂ, ಇಂದಿನ ಬಂದ್ ಮೆರವಣಿಗೆಯಲ್ಲಿ ಅವರ ಭಾಗವಹಿಸುವಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಯಿತು.

ಜೀವಕ್ಕೆ ಗ್ಯಾರಂಟಿ ಕೊಡಿಘೋಷಣೆ
ಗವಿಮಠ ಆವರಣದಲ್ಲಿ ಹೋರಾಟಗಾರರು “ಗ್ಯಾರಂಟಿ ಕೊಡಿ, ಜೀವಕ್ಕೆ ಗ್ಯಾರಂಟಿ ಕೊಡಿ” ಎಂದು ಘೋಷಣೆ ಕೂಗಿದರು.

ಧೂಳಿನ ಬೆಳೆಗಳ ಪ್ರದರ್ಶನ
ರೈತರು ಕಾರ್ಖಾನೆ ಧೂಳಿನಿಂದ ಹಾನಿಗೊಳಗಾದ ಬಾಳೆ, ಪೇರಲ, ದಾಳಿಂಬೆ, ಕರಿಬೇವು ಸೇರಿದಂತೆ ಬೆಳೆಗಳನ್ನು ಟ್ರಾಕ್ಟರ್‌ನಲ್ಲಿ ತಂದು ತೋರಿಸಿದರು. ವಿದ್ಯಾರ್ಥಿಗಳು ಘೋಷಣೆ ಕೂಗಿದರು.

ಎಂಟು ವರ್ಷದ ಹೋರಾಟಗಾರ
ಹರ್ಷರಾಜ ಎಂಬ ಎಂಟು ವರ್ಷದ ಬಾಲಕ ಉಸಿರಾಟದ ಮಾಸ್ಕ್ ಧರಿಸಿ ಸೈಕಲ್‌ನಲ್ಲಿ ಆಗಮಿಸಿ ಸಮಸ್ಯೆಯತ್ತ ಗಮನ ಸೆಳೆದ.

ಸರ್ಕಾರದ ಪ್ರತಿಕೃತಿ ದಹನ
ಅಶೋಕ ಸರ್ಕಲ್‌ನಲ್ಲಿ ಸರ್ಕಾರದ ಶವದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸಾಣೆಹಳ್ಳಿ ಸ್ವಾಮಿಜಿ, ಕಬೀರಾನಂದ ಸ್ವಾಮಿಜಿ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಸೇರಿದಂತೆ ಸಾವಿರಾರು ಜನ ಭಾಗವಹಿಸಿದರು. ನಗರಸಭೆ ಹತ್ತಿರ ಬಹಿರಂಗ ಸಭೆ ನಡೆಯುತ್ತಿದೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Mar 5 2026 7:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಲ್ದೋಟಾ ಗೇಟ್ ಬಂದ್ : ಹೋರಾಟಕ್ಕೆ ಮಣಿಯುತ್ತಾ ಸರಕಾರ ?
Mar 4 2026 11:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಾರ್ಖಾನೆ ಧೂಳಿಗೆ ಬೇಸತ್ತು ದಯಾಮರಣ ಬೇಡಿಕೆ
Mar 4 2026 6:32AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೋಳಿ ನಂತರ ಕೆರೆಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ನೀರುಪಾಲು
Mar 2 2026 7:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುಸ್ಲಿಂರ 4% ಮೀಸಲಾತಿ : ಕಾಂಗ್ರೆಸ್ ವಿರುದ್ಧ ನಾಡಗೌಡ್ರು ವಾಗ್ದಾಳಿ
Mar 1 2026 8:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸ್ ದಾಳಿ
Mar 1 2026 5:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಣವೆಗಳಿಗೆ ಬೆಂಕಿ ಸಂಪೂರ್ಣ ಭಸ್ಮ
Mar 1 2026 5:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಯುದ್ದ ಸ್ಥಿತಿ : ದುಬೈನಲ್ಲಿ ಉಳಿದುಕೊಂಡಿರುವ ರಾಯರಡ್ಡಿ ಪುತ್ರಿ
Feb 28 2026 5:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
Feb 28 2026 4:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಂಸದರಿಂದ ಅಕ್ಷೇಪಾರ್ಹ ಪದ ಬಳಕೆ ನೋವುಂಟು ಮಾಡಿದೆ
Feb 27 2026 7:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಿಂದಲೇ ಜೆಡಿಎಸ್ ಮೊದಲ ಗೆಲುವು : ಸಮೀಕ್ಷೆ




Copyright © 2026 Agni Divya. All Rights Reserved.
Designed & Developed by We Make Digitize