ಕೊಪ್ಪಳ : ಕಾರ್ಖಾನೆ ವಿಸ್ತರಣೆ ವಿರೋಧಿಸಿ ಅನಿರ್ದಿಷ್ಟ ಹೋರಾಟ ನಡೆಯುತ್ತಿದ್ದು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷ ವೇದಿಕೆಯ ಹೋರಾಟಗಾರರು ಫೆ. 24 ರಂದು ಕರೆ ನೀಡಿರುವ ಕೊಪ್ಪಳ - ಭಾಗ್ಯನಗರ ಬಂದ್ ದಿನ ನಡೆಯಬೇಕಿದ್ದ ಪರೀಕ್ಷೆಗಳನ್ನು ಕೊಪ್ಪಳ ವಿಶ್ವವಿದ್ಯಾಲಯ ಮುಂದೂಡಿದೆ.
ಫೆ. 24 ರಂದು ಬಂದ್ ಇರುವುದರಿಂದ ಅಂದು ನಡೆಯಬೇಕಿದ್ದ ಸ್ನಾತಕೋತ್ತರ ಪಥಮ ಸೆಮಿಸ್ಟರ್ ನ ಕನ್ನಡ , ರಾಜಕೀಯ ಶಾಸ್ತ್ರ , ಸಾಮಾಜಿಕ, ಪತ್ರಿಕೋದ್ಯಮ, ಇತಿಹಾಸ, ಅರ್ಥಶಾಸ್ತ್ರ , ವಾಣಿಜ್ಯ , ಆರ್ಚಾಲಾಜಿಕಲ್ ವಿಷಯಗಳ ಪರೀಕ್ಷೆ ಮುಂದೂಡಿದ್ದು ಈ ಪರೀಕ್ಷೆಗಳನ್ನು ಫೆ. 26 ರಂದು ನಡೆಸಲಾಗುವುದು ಎಂದು ವಿವಿ ಕುಲಸಚಿವರು (ಮೌಲ್ಯಮಾಪನ) ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.