ಕೊಪ್ಪಳ : ಜ. 28 ರಂದು ಬೆಳಗ್ಗೆ 11 ಕ್ಕೆ ಯಲಬುರ್ಗಾದ ಶ್ರೀಧರ ಮುರಡಿ ಮಠದ ಧಾರ್ಮಿಕ ಕಾರ್ಯಕ್ರಮ ಸಂದರ್ಭ ಅಡ್ಡಪಲ್ಲಕ್ಕಿ ನಡೆಯುವಾಗ ಪಿಸ್ತೂಲಿನಿಂದ ಗುಂಡು ಹಾರಿಸಿದ್ದ ಸಿಂದಗಿಯ ಬಸನಗೌಡ ಪಾಟೀಲ್ (58) ಎಂಬ ಗುತ್ತಿಗೆದಾರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಘಟನೆ ಜ. 28 ರಂದು ನಡೆದಿದ್ದು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ FIR ಆಗಿದ್ದು ಫೆ. 20 ರಂದು. ನಂತರ ಬಸನಗೌಡ ಪಾಟೀಲ್ ನನ್ನು ಅರೆಸ್ಟ್ ಮಾಡಲಾಗಿದೆ.
ಜ.28 ರಂದು ಅಡ್ಡ ಪಲ್ಲಕ್ಕಿ ಸಂದರ್ಭದಲ್ಲಿ ಪಿಸ್ತೂಲ್ ನಿಂದ ಗುಂಡು ಹಾರಿಸಿದಂಥ ಶಬ್ದ ಕೇಳಿಸಿದ್ದು ನೋಡಿದವರು ಯಾರೂ ಇಲ್ಲ ಮತ್ತು ಆಗ ಅಲ್ಲಿ ಪಟಾಕಿ ಹಚ್ಚಿದ್ದರಿಂದ ಅದೆ ಶಬ್ದ ಇರಬಹುದು ಎಂದು ಭಾವಿಸಲಾಗಿತ್ತು.
ಆದರೆ ಫೆ. 20 ರಂದು ಪೊಲೀಸ್ ಬಾತ್ಮೀದಾರರು ವಿಡಿಯೊ ತೋರಿಸಿದ್ದು ಅದರಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲ್ ನಿಂದ ಗುಂಡು ಹಾರಿಸಿದ ದೃಶ್ಯ ನೋಡಿ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡು ಒಂದೆ ದಿನದಲ್ಲಿ ಸಿಂದಗಿ ಮೂಲದ ಹಾಲಿ ಯಲಬುರ್ಗಾದಲ್ಲಿ ವಾಸ ಇರುವ ಬಸನಗೌಡ ಪಾಟೀಲ್ ನನ್ನು ಅರೆಸ್ಟ್ ಮಾಡಿ ಒಂದು ರಿವಾಲ್ವರ್ , 5 ಬಳಸಿದ ಗುಂಡು, 6 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.