ಕೊಪ್ಪಳ : ಹುಲಿಕೆರೆ ಬಲಭಾಗದಲ್ಲಿ ಒತ್ತುವರಿ ನಡೆಯುತ್ತಿದೆ ಇದರ ಬಗ್ಗೆ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ತ ವಹಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಕೆರೆ ದಡದಲ್ಲಿ ಪ್ರತಿಭಟಿಸಿ ಧರಣಿ ನಡೆಸುತ್ತಿದ್ದಾರೆ.
ಬಿಜೆಪಿಯ ಎಂಎಲ್ ಸಿ ಹೇಮಲತಾ ನಾಯಕ, ಡಾ. ಬಸವರಾಜ ಕ್ಯಾವಟರ್ , ದೇವರಾಜ ಹಾಲಸಮುದ್ರ, ಸೋಮಣ್ಣ ಹಳ್ಳಿ , ಉಮೇಶ ಕುರುಡೇಕರ್ ಇತರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆರೆ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ನಡೆದಿದೆ ಆದರೂ ನಗರಸಭೆ ಅಧಿಕಾರಿಗಳು ಸುಮ್ಮನೆ ಇದ್ದಾರೆ. ಕೆರೆ ಬಫರ್ ಝೋನ್ ಕೂಡ ಉಳಿಸಿಲ್ಲ ಎಂದು ಹೇಮಲತಾ ನಾಯಕ ಅವರು ಆರೋಪಿಸಿದರು.
ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.