ಕೊಪ್ಪಳ : ಬೈಕ್ ನಲ್ಲಿ ಲಾರಿ ಓವರ್ ಟೇಕ್ ಮಾಡುವಾಗ ಲಾರಿಗೆ ಸಿಲುಕಿ ಇಬ್ಬರು ಯುವಕರು ದಾರುಣವಾಗಿ ಸಾವಿಗೀಡಾದ ದುರ್ಘಟನೆ ನಿನ್ನೆ ಸಂಜೆ ಉಪ್ಪಲದಿನ್ನಿ ಹತ್ತಿರ NH ನಲ್ಲಿ ನಡೆದಿದೆ.
ಮೃತರು ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಮುಸಲಾಪೂರನ ಶ್ರೀನಿವಾಸ್ ಹಾಗೂ ಸಿದ್ದನಗೌಡ ಎಂದು ತಿಳಿದು ಬಂದಿದೆ. ಇವರಿಬ್ಬರೂ ಮುಸಲಾಪುರದಿಂದ ಹಿರೇಅರಳಿಹಳ್ಳಿಯ ಸಂಬಂಧಿಕರ ಮನೆಗೆ ಹೊರಟಾಗ ಈ ದುರ್ಘಟನೆ ಜರುಗಿದೆ.
ಸ್ಟೀಲ್ ಸಾಮಗ್ರಿ ಸಾಗಿಸುತ್ತಿದ್ದ ರಾಜಸ್ಥಾನಿನ ಲಾರಿಯನ್ನು ಓವರ್ ಟೇಕ್ ಮಾಡುವಾಗ ಬಿದ್ದು ಲಾರಿ ಕೆಳಗಡೆ ಸಿಲುಕಿ ಯುವಕರಿಬ್ಬರೂ ಸಾವಿಗೀಡಾಗಿದ್ಧಾರೆ. ಘಟನಾ ಸ್ಥಳಕ್ಕೆ ಕೊಪ್ಪಳ ರ ಎಸ್ಪಿ ಭೇಟಿ ನೀಡಿದ್ದರು.