ಕೊಪ್ಪಳ : ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿಗಳನ್ನು ನಿನ್ನೆ (ಫೆ. 18 ) ತೆರೆದು ಹುಂಡಿ ಮೊತ್ತದ ಎಣಿಕೆ ನಡೆಯಿತು.
2026 ಜನವರಿ 8 ರಿಂದ ನಿನ್ನೆ 18 ಫೆಬ್ರವರಿ 2026 ವರೆಗೆ ಅಂದ್ರೆ 42 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ ₹ 1,18,40,690 ( ಒಂದು ಕೋಟಿ 18 ಲಕ್ಷ 40 ಸಾವಿರದ 690) ರೂಪಾಯಿ ಹಾಗೂ 159 ಗ್ರಾಂ ಬಂಗಾರ, 6 ಕೆಜಿ 900 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಹುಂಡಿ ಎಣಿಕೆ ಸಂದರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಹೆಚ್. ಪ್ರಕಾಶ್ ರಾವ್, ಉಪ ಕಾರ್ಯದರ್ಶಿ ಸಣ್ಣ ಬಸವರಾಜ ಜಿರಗಾಳ, ಹಾಗೂ ಗಣ್ಯರು ಉಪಸ್ಥಿತರಿದ್ದರು.
ಪೊಲೀಸ್, ಹೋಗಾರ್ಡ್ , ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಸಮ್ಮುಖದಲ್ಲಿ ಸಿಸಿ ಟಿವಿ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.