Advt. 
 Views   281

ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?

Dec 11, 2025, 08:38 AM IST
ಕೊಪ್ಪಳ :  ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?

ಕೊಪ್ಪಳ : ಜೆಡಿಎಸ್ ಪಕ್ಷ ಕೊಪ್ಪಳ ಕ್ಷೇತ್ರದಲ್ಲಿ ಬೂತ್ ವಾರು ಸದಸ್ಯರು, ಪದಾಧಿಕಾರಿ ನೇಮಕದ ಮೂಲಕ ಬಲಿಷ್ಠವಾಗುವ
ಕಾರ್ಯ ಆರಂಭಿಸಿದೆ.

ಸಧ್ಯ ನಗರಸಭೆ ಚುನಾವಣೆ ಬರುವ ಸಾಧ್ಯತೆ ಹಿನ್ನಲೆಯಲ್ಲಿ
ಸುಮಾರು ಒಂದು ಲಕ್ಷ ಜನಸಂಖ್ಯೆಯ ಕೊಪ್ಪಳ ನಗರದಲ್ಲಿ 67 ಮತದಾನ ಕೇಂದ್ರಗಳಿದ್ದು ಅಂದಾಜು 68 ಸಾವಿರ ಮತದಾರರು ಇದ್ದಾರೆ. ನಗರದಲ್ಲಿ ಶೇ. 33 ರಷ್ಟು ಅಲ್ಪಸಂಖ್ಯಾತ ಮತದಾರರು ಇದ್ದಾರೆ.

ಜೆಡಿಎಸ್ ಈಗ ನಗರದಲ್ಲಿ 20 ಸಾವಿರ ಸದಸ್ಯತ್ವದ ಗುರಿ ಹೊಂದಿದೆ. ಅಂದರೆ ನಗರದ ಶೇ. 30 ರಷ್ಟು ಮತದಾರರನ್ನು ಜೆಡಿಎಸ್ ಪಕ್ಷದತ್ತ ಸೆಳೆಯುವ ಗುರಿಯೊಂದಿಗೆ ಇತ್ತೀಚಿಗೆ ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ, ಜೆಡಿಎಸ್ ಜಿಲ್ಲಾಧ್ಯಕ್ಷರು ಸುರೇಶ ಭೂಮರಡ್ಡಿ ನೇತೃತ್ವದಲ್ಲಿ ಸಭೆ ನಡೆದಿದೆ.

2023 ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 20 ದಿನದಲ್ಲಿ ಸಿ.ವಿ.ಚಂದ್ರಶೇಖರ 45 ಸಾವಿರ ಮತ ಪಡೆದದ್ದು ಗಮನ ಸೆಳೆದಿದೆ. ಆ ಮೂಲಕ ಕೊಪ್ಪಳ ರಾಜಕೀಯ ತಮ್ಮನ್ನು ಕಡೆಗಣಿಸುವಂತಿಲ್ಲ ಎಂಬ ಮೆಸೆಜ್ ಸಿವಿಸಿ ಕೊಟ್ಟಂತಾಗಿದೆ.

ಈಗಾಗಲೇ ನಗರಸಭೆಯ 31 ವಾರ್ಡ್ ಗಳಿಗೆ ಮೀಸಲಾತಿ ಪ್ರಕಟವಾಗಿದ್ದು ಕೆಲ ವಾರ್ಡ್ ಮೀಸಲಾತಿಗೆ ಆಕ್ಷೇಪಣೆ ಸಲ್ಲಿಕೆಯಾಗಿವೆ. ಈಗ ಅಂತಿಮ ಮೀಸಲಾತಿ ಪಟ್ಡಿ ಪ್ರಕಟವಾಗುವುದು ಬಾಕಿ ಇದೆ.

ಹಾಗಾಗಿ ಜೆಡಿಎಸ್ ನ ಈ ಸಂಘಟನಾ ನಡೆ ಕುತೂಹಲ ಕೆರಳಿಸಿದೆ. ಯುವಕರು ಮಹಿಳೆಯರು ಹೊಸ ಮತದಾರರನ್ನು ಪಕ್ಷದತ್ತ ಸೆಳೆಯುವ ಗುರಿ ಇದೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪ್ರಚಾರ ಮತ್ತು ಪಕ್ಷದ ಕಾರ್ಯಕರ್ತರ ಜೊತೆ ಸಂಪರ್ಕಕ್ಕಾಗಿ ವಾಟ್ಸಾಪ್ ಗುಂಪುಗಳು ರಚನೆಯಾಗಲಿವೆ. ಪಕ್ಷದ ಸಂಘಟನೆ ಹಾಗೂ ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ ಹೊಂದಿದವರಿಗೆ ನಗರಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಯೋಜನೆ ಜೆಡಿಎಸ್ ಹೊಂದಿದೆ ಎನ್ನಲಾಗಿದೆ.

ಜೆಡಿಎಸ್ ನ ಈ ಸಭೆಯಲ್ಲಿ ನಗರದ ಹಲವು ಜನ ಜೆಡಿಎಸ್ ಗೆ ಸೇರ್ಪಡೆಯಾದರು ಎಂದು ತಿಳಿದು ಬಂದಿದೆ.
 



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jan 17 2026 4:34AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಮಾಜಿಕ ಕಳಕಳಿಯ ಮಿಠಾಯಿ ಅಂಗಡಿಯವರಿಗೆ ಕರವೇ ಸನ್ಮಾನ
Jan 16 2026 7:05PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುಂಬೈನಲ್ಲಿ ಗೆಲುವು : ವೋಟ್ ಚೋರಿ ಅಲ್ಲ ದಿಲ್ ಚೋರಿ
Jan 14 2026 6:42AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ
Jan 14 2026 6:37AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಹೆಚ್ಚುವರಿ ಬಸ್ ಸೌಕರ್ಯಕ್ಕೆ ಜೆಡಿಎಸ್ ಮನವಿ
Jan 14 2026 6:29AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಊಟದ ತಟ್ಟೆ–ನೀರಿನ ಗ್ಲಾಸ್ ದೇಣಿಗೆ
Jan 14 2026 6:18AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮನರೆಗಾ ಹೆಸರು ಬದಲಾವಣೆ : ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ - ತೆಂಗಿನಕಾಯಿ
Jan 14 2026 5:58AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಹುಮತ ಇದ್ದರೂ ಕಾಂಗ್ರೆಸ್ ಸೋಲು: ನಾಲತ್ವಾಡ
Jan 13 2026 8:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ಚುನಾವಣೆ : ಬಿಜೆಪಿ ಜಯಭೇರಿ
Jan 13 2026 8:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ಚುನಾವಣೆ : ಬಿಜೆಪಿ ಜಯಭೇರಿ
Jan 12 2026 4:16AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಸನ್ನ ಗಡಾದ




Copyright © 2026 Agni Divya. All Rights Reserved.
Designed & Developed by We Make Digitize