ಕೊಪ್ಪಳದ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರ ಹೆಸರಲ್ಲಿ ವಾಟ್ಸಾಪ್ ಐಡಿ ಮಾಡಿರುವ ಖದೀಮರು ಅದಕ್ಕೆ IAS Suresh B Itnal ಅಂತ ಹೆಸರು ಇಟ್ಟಿದ್ದಾರೆ.
ಅಷ್ಟೇ ಅಲ್ಲ ಈ ಐಡಿಯಿಂದ ಹಣ ಕಳಿಸಿ ಅಂತ ಜಿಲ್ಲಾಧಿಕಾರಿ ಪರಿಚಯದವರಿಗೆ, ಅಧಿಕಾರಿ ವಲಯದ ಕೆಲವರಿಗೆ ಮೆಸೆಜ್ ಮಾಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೆದಾರರು ಸೈಬರ್ ಠಾಣೆಗೆ ದೂರು ನೀಡಿದ್ದು FIR ಕೂಡ ಆಗಿದೆ. FIR ಆಗಿದ್ದು ಡಿ. 4 ರಂದು. ಈ ವಿಷಯ ಇದೀಗ ಬೆಳಕಿಗೆ ಬಂದಿದೆ.
ಈವರೆಗೆ ಬ್ಯಾಂಕ್ ಅಕೌಂಟ್ ಲಾಕ್ ಆಗಿದೆ OTP ಹೇಳಿ, ATM ಸಮಸ್ಯೆ ಆಗಿದೆ OTP ಹೇಳಿ ಅಂತ OTP ಕಳಿಸಿ ಕರೆ ಮಾಡಿ ಅದನ್ನು ಪಡೆದು ಫ್ರಾಡ್ ಮಾಡುತ್ತಿದ್ದದ್ದು ಕೇಳಿದ್ದೇವೆ.
ಆದರೆ ಇಲ್ಲಿ ಈಗ ನೇರ ಡಿಸಿ ಹೆಸರಲ್ಲಿ ವಾಟ್ಸಾಪ್ ಮಾಡಿ ಹಣ ಕೇಳುವ ಮಟ್ಟಕ್ಕೆ ಬಂದಿದ್ದಾರಾ ? ಇದು ನಿಜಕ್ಕೂ ಸಾರ್ವಜನಿಕರಿಗೂ ಆತಂಕ ಹುಟ್ಟಿಸುವ ಸಂಗತಿಯೆ.
ಏಕೆಂದರೆ ದೊಡ್ಡವರ ಹೆಸರಿನಲ್ಲಿ ವಂಚನೆಗೆ ವಂಚಕರು ರೆಡಿ ಆದ್ರೆ ಸಾಮಾನ್ಯರು ಪರದಾಡಬೇಕಾಗುತ್ತೆ.
ಡಾ. ಸುರೇಶ ಇಟ್ನಾಳ ಅವರ ಹೆಸರಿನ ಐಡಿ ಆಗಿರೋದು
+ 84924979235 ನಂಬರ್ ನಿಂದ.
ಈ ಬಗ್ಗೆ DC ಆಫೀಸಿನ ಶಿರಸ್ತೆದಾರರಾದ ಶಿವಪುತ್ರಪ್ಪ ವಟಗಲ್ ಆರು ದಿನಗಳ ಹಿಂದೆ ಸೈಬರ್ ಪೋಲಿಸ್ ಠಾಣೆಗೆ ದೂರು ನೀಡಿರುವುದು ಬೆಳಕಿಗೆ ಬಂದಿದೆ.
ದೂರಿನ ಪ್ರಕಾರ ಒಂದು ವಾಟ್ಸಾಪ್ ನಂಬರ್ ಮಾಡಿದ್ದು ಡಿಪಿಯಲ್ಲಿ ಕೊಪ್ಪಳ DC ಯವರ ಫೋಟೋ ಇದ್ದು ಆ ವಾಟ್ಸಾಪ್ ಯಿಂದ ಹಣ ಕಳಿಸಿ ಅಂತ ಕೆಲವರಿಗೆ ಮೆಸೇಜ್ ಕಳಿಸಲಾಗಿದೆ. ಆದರೆ ಯಾರೂ ಹಣ ಕಳಿಸಿಲ್ಲ.
ಡಿಸಿ ಅವರ ಹೆಸರಿನಲ್ಲಿ ವಾಟ್ಸಪ್ ಮಾಡಿರುವ ನಂಬರ್ 11 ಅಂಕಿಗಳಿದ್ದು ಇದು ವಿದೇಶದ ನಂಬರ್ ಇರಬಹುದಾ ? ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಯಾವುದಕ್ಕೂ ಸೈಬರ್ ಪೋಲೀಸರು ಪ್ರಕರಣ ತನಿಖೆ ಮಾಡಿದಾಗ ಮಾತ್ರ ಸತ್ಯ ಗೊತ್ತಾಗಲಿದೆ.