ಕೊಪ್ಪಳ : ಧಾರವಾಡದಲ್ಲಿ ಹೋರಾಟ ನಿರತ ಉದ್ಯೋಗಾಕಾಂಕ್ಷಿಗಳ ಮೇಲಿನ ಲಾಠಿಚಾರ್ಜ್ ಮತ್ತು ಬಂಧನ ಖಂಡಿಸಿ ಇಂದು ಗಣೇಶ್ ನಗರದ ಗ್ರಂಥಾಲಯದ ಮುಂದೆ ಉದ್ಯೋಗಾಕಾಂಕ್ಷಿಗಳು ಪ್ರತಿಭಟಿಸಿದರು.
ಬಂಧಿತ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ರಾಜ್ಯ ಸಂಚಾಲಕ ಸಿದ್ಧಲಿಂಗ ಬಾಗೇವಾಡಿ, ಸಹ ಸಂಚಾಲಕ ಭವಾನಿ ಶಂಕರ ಗೌಡ, ಜನಸಾಮಾನ್ಯರ ವೇದಿಕೆ ಮುಖಂಡ ಯಲ್ಲಪ್ಪ ಹೆಗಡೆ ಸೇರಿದಂತೆ 25ಕ್ಕೂ ಹೆಚ್ಚು ಜನರನ್ನು ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲಾ ಖಾಲಿ ಹುದ್ದೆಗಳನ್ನು ತುರ್ತು ಭರ್ತಿ ಮಾಡಬೇಕು,
ಕಳೆದ 10 ವರ್ಷಗಳಿಂದ ದೊಡ್ಡ ಮಟ್ಟದಲ್ಲಿ ನೇಮಕಾತಿ ಕೈಗೊಳ್ಳದೆ, ಕೇಂದ್ರ, ರಾಜ್ಯ ಸರ್ಕಾರಗಳು ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯ ಮಾಡಿವೆ.
ಪ್ರತಿಭಟನೆ ನಡೆಸಲು ಅನುಮತಿ ಪಡೆದಿಲ್ಲ ಎಂಬ ನೆಪದಲ್ಲಿ ಹೋರಾಟ ದಮನಗೊಳಿಸಲು ಸರ್ಕಾರ ಪೊಲೀಸರ ಮೂಲಕ ಪ್ರಯತ್ನಿಸಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಅಣ್ಣಪ್ಪ, ಬಸವರಾಜ, ಆನಂದ, ದೇವೇಂದ್ರ ಗೌಡ, ಹನುಮೇಶ, ಶರಣು ಗಡ್ಡಿ, ಶಾರದಾ ಮುಂತಾದವರು ಭಾಗವಹಿಸಿದ್ದರು.