Advt. 
 Views   152

ಸಿಎಂ ಸಿದ್ದರಾಮಯ್ಯ ಅವರು ಮುಂದುವರೆಯಲಿ

Nov 29, 2025, 05:42 AM IST
ಸಿಎಂ ಸಿದ್ದರಾಮಯ್ಯ ಅವರು ಮುಂದುವರೆಯಲಿ

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹುದ್ದೆಯಿಂದ ಬೇಡಿಕೆ ಮೇರೆಗೆ ಬದಲಾಯಿಸುವ ಯಾವುದೇ ಪ್ರಯತ್ನ ನಡೆದರೆ, ರಾಜ್ಯದಾದ್ಯಂತ ಕಾಂಗ್ರೆಸ್ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡ ಟಿ. ರತ್ನಾಕರ್ ಎಚ್ಚರಿಸಿದ್ದಾರೆ.

ಶನಿವಾರ ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “2023ರ ವಿಧಾನಸಭೆ ಚುನಾವಣೆಯಲ್ಲಿ ಅಹಿಂದ ವರ್ಗದ ಜನರು ಬಹುಮತದಲ್ಲಿ ಕಾಂಗ್ರೆಸ್‌ಗೆ ಮತಹಾಕಿದ ಕಾರಣವೇ ಪಕ್ಷ ಅಧಿಕಾರಕ್ಕೆ ಬಂದಿದೆ. ಆ ಮತದಾನದಿಂದಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ಸಿಎಂ ಆಗುವ ಸಮಯದಲ್ಲಿ 30 ತಿಂಗಳ ನಂತರ ಬದಲಾವಣೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿರಲಿಲ್ಲ,” ಎಂದು ಹೇಳಿದರು.

ಮುಂದುವರಿದು, “ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರನ್ನು ಬದಲಾಯಿಸಲು ಕಾಂಗ್ರೆಸ್‌ನ ಕೆಲ ಶಾಸಕರು ಮಾತ್ರ ಒತ್ತಾಯಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯರನ್ನು ಮಧ್ಯಾವಧಿಯಲ್ಲಿ ಬದಲಾಯಿಸಬಾರದು. ಅವರಿಗೆ ಪೂರ್ಣ ಐದು ವರ್ಷದ ಅವಧಿ ನೀಡಬೇಕು. ಆಗದಿದ್ದರೆ ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಸಂಘಟಿತ ಪ್ರತಿಭಟನೆ ಖಚಿತ,” ಎಂದು ರತ್ನಾಕರ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕುಷ್ಟಗಿಯ ಸುಕ್ರಾಜ ತಾಳಕೇರಿ, ಕೊಪ್ಪಳದ ನಾಗರಾಜ ಚಲ್ಲೊಳ್ಳಿ, ಕನಕಗಿರಿಯ ಸಿದ್ದಪ್ಪ ನಿರಲೂಟಿ, ನಾಗಪ್ಪ ಹುಗ್ಗಿ, ಗಂಗಾವತಿಯ ಯಮನಪ್ಪ ವಿಠಲಾಪುರ, ಹನುಮಪ್ಪ ಹನುಮಾಪುರ, ಶಿವು ಯಲಬುರ್ಗಾ ಮತ್ತಿತರರು ಹಾಜರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize