ಕೊಪ್ಪಳ : ಹೊಲಗಳಲ್ಲಿ ನೀರಾವರಿಗಾಗಿ ಇರುವ ಕರೆಂಟ್ ಕೇಬಲ್ ಕತ್ತರಿಸಿ ಸ್ಟಾರ್ಟರ್, ಪಿವೆಂಟರ್ ಗಳನ್ನು ಕಲ್ಲಿನಿಂದ ಜಜ್ಜಿ ಕಿತ್ತು ಎಸೆದಿರುವ ಘಟನೆ ತಾಲೂಕಿನ ಭೈರಾಪುರದಲ್ಲಿ ನಡೆದಿದೆ.
ಈ ಗ್ರಾಮದ ಸುಮಾರು 10 ನೀರಾವರಿ ಪಂಪ್ ಸೆಟ್ ಗಳಿಗೆ ಈ ರೀತಿ ಮಾಡಿದ್ದು ಕಳ್ಳತನಕ್ಕೆ ಯತ್ನಿಸಿ ಹೀಗೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದ್ದು ವೈಯಕ್ತಿಕ ದ್ವೇಷಕ್ಕೂ ಹೀಗೆ ಮಾಡಿರಬಹುದು ಎಂಬ ಮಾತು ಕೇಳಿ ಬಂದಿವೆ.
ಈ ರೀತಿ ಪಂಪ್ ಸೆಟ್ ನ ಕರೆಂಟ್ ಜಾಲ ಹಾಳುಗೆಡವಿದ ಸ್ಥಳದಲ್ಲಿ ಕೆಲವೆಡೆ ಆಲ್ಕೊಹಾಲ್ ನ ಟೆಟ್ರಾಪ್ಯಾಕ್ ಗಳೂ ಕಂಡು ಬಂದಿವೆ.
ಸ್ಟಾರ್ಟರ್ ಗಳು ತುಂಬಾ ಬೆಲೆ ಬಾಳುತ್ತಿದ್ದು ಅವುಗಳನ್ನು ಕಳ್ಳತನ ಮಾಡಲು ಬಂದು ವಿಫಲವಾಗಿ ಕರೆಂಟ್ ಜಾಲವನ್ನು ಹೀಗೆ ಕತ್ತರಿಸಿ ಸ್ಟಾರ್ಟರ್ ಕಿತ್ತೆಸೆದಿರಬಹುದು ಎಂದು ಶಂಕೆ ವ್ಯಕ್ತವಾಗಿದ್ದು ಗ್ರಾಮದ ಸುತ್ತ ಕೆಲವೆಡೆ ಕೆಲ ದಿನಗಳಿಂದ ಇಂಥ ಕೃತ್ಯ ನಡೆದಿರುವ ಬಗ್ಗೆ ಕೇಳಿ ಬರುತ್ತಿವೆ.