ಕೊಪ್ಪಳ : ಇಲ್ಲಿನ ವಿಶ್ವ ಚೆಸ್ ಅಕಾಡೆಮಿಯು ಡಿಸೆಂಬರ್ 14 ರಂದು ರಾಜ್ಯಮಟ್ಟದ ಚೆಸ್ ಸ್ಪರ್ಧೆ ಏರ್ಪಡಿಸಿದ್ದು ವಿಜೇತರಿಗೆ 'ವಿಶ್ವ ಚೆಸ್ ಕಪ್ - 2025' ಪ್ರದಾನ ಮಾಡಲಾಗುತ್ತದೆ.
ಸ್ಪರ್ಧೆ ಜಿಲ್ಲಾ ಯುವಜನ ಮತ್ತು ಕ್ರೀಡೆ ಇಲಾಖೆ ಹಾಗೂ ಕರ್ನಾಟಕ ಚೆಸ್ ಅಕಾಡೆಮಿ ಸಹಯೋಗದಲ್ಲಿ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 3 ಸಾವಿರ, ದ್ವಿತೀಯ ಬಹುಮಾನ ₹ 2500, ತೃತೀಯ ಬಹುಮಾನ ₹2000, 4ನೆ ಬಹುಮಾನ ₹1500, ಐದನೆ ಬಹುಮಾನ ₹ 1000 ಇರುತ್ತದೆ. ಇನ್ನುಳಿದ ಐವರು ವಿಜೇತರಿಗೆ ಮೆಡಲ್ ನೀಡಿ ಗೌರವಿಸಲಾಗುತ್ತದೆ.
ಸ್ಪರ್ಧಾಳುಗಳಿಗೆ ವಯಸ್ಸಿನ ನಿರ್ಭಂದ ಇಲ್ಲ. ಬಾಲಕ ಮತ್ತು ಬಾಲಕಿಯರಿಗೂ ಪ್ರತ್ಯೇಕ ಬಹುಮಾನಗಳಿವೆ.
ಜೊತೆಗೆ ಬೆಸ್ಟ್ ಕೊಪ್ಪಳ ಪ್ಲೇಯರ್, ಬೆಸ್ಟ್ ಫಿಮೇಲ್ ಪ್ಲೇಯರ್, ಬೆಸ್ಟ್ ವಿಶ್ವ ಚೆಸ್ ಅಕಾಡೆಮಿ ಪ್ಲೇಯರ್ ಸೇರಿದಂತೆ ನಾಲ್ಕು ಬಹುಮಾನಗಳಿವೆ.
ಹೆಚ್ಚಿನ ಮಾಹಿತಿಗಾಗಿ
ರಾಮಸ್ವರೂಪ ಕಾಂಬ್ಳೆಕರ್ 8867558702
ರಿತು ಕಾಂಬ್ಳೆಕರ್ 9113889338
ಕಾವ್ಯಾ ಕುರ್ಡೆಕರ್ 7338022730 ಗೆ ಸಂಪರ್ಕಿಸಬಹುದು.
ಈ ಬಗ್ಗೆ ವಿಶ್ವ ಚೆಸ್ ಅಕಾಡೆಮಿ ಅಧ್ಯಕ್ಷರು ರಾಮಸ್ವರೂಪ ಕಾಂಬ್ಳೆಕರ್, ಕಾರ್ಯದರ್ಶಿ ಅಂಬುಜಾ ಕಾಂಬ್ಳೆಕರ್, ಖಜಾಂಚಿ ಕಾವ್ಯ ಕುರ್ಡೆಕರ್, ಸದಸ್ಯ ವಸಂತ ಕುರ್ಡೆಕರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.