ಕೊಪ್ಪಳ : ಕುಕನೂರು ತಾಲೂಕಿನ ಹಾಸ್ಟೆಲ್ ಒಂದರಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮಗು ಹೆತ್ತ ಪ್ರಕರಣ ಸಂಬಂಧ ಪೋಕ್ಸೋ ಕೇಸ್ ದಾಖಲಾಗಿದ್ದು ಯುವಕನೊಬ್ಬನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣಕ್ಕೆ ಐವರ ವಿರುದ್ದ ದೂರು ದಾಖಲಾಗಿದೆ.
ಇಂದು ಬೆಳಗ್ಗೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಸ್ವಲ್ಪ ಹೊತ್ತಿಗೆ ಹಾಸ್ಟೆಲ್ ನಲ್ಲಿಯೆ 7 ತಿಂಗಳ ಮಗುವಿಗೆ ಜನ್ಮ ನೀಡಿದ್ದಾಳೆ.
ಈ ವಿಷಯದ ನಿರ್ಲಕ್ಷ್ಯ ಆಧಾರದಲ್ಲಿ ಹಾಸ್ಟೆಲ್ ವಾರ್ಡನ್, ಶಾಲಾ ಮುಖ್ಯೋಧ್ಯಾಯ, ಕ್ಲಾಸ್ ಗುರುಗಳು, ಹಾಗೂ ಇಬ್ಬರು ವೈದ್ಯರ ವಿರುದ್ದವೂ ದೂರು ದಾಖಲಾಗಿದೆ ಎಂದು ಮಕ್ಕಳ ರಕ್ಷಣಾ ಘಟಕದ ರಾಜ್ಯ ಸಮಿತಿ ಸದಸ್ಯರಾದ ರಾಮನಗೌಡ ಹೇಳಿದರು.
ಮಗು ಹೆತ್ತ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಹಾಗೂ ಮಗುವನ್ನು ಕೊಪ್ಪಳದ ಆಸ್ಪತ್ರೆಗೆ ದಾಖಲಿಸಿದ್ದು ಬೆಳಗ್ಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದರು.
ಸಂಜೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಆಸ್ಪತ್ರೆಗೆ ಭೇಟಿ ನೀಡಿದ್ದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಾಸ್ಟೆಲ್ ನಲ್ಲಿ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ವಿದ್ಯಾರ್ಥಿನಿ ಗೈರು ಆಗಿದ್ದಳು. ಘಟನೆಯಲ್ಲಿ RBS ಅಡಿ ಆರೋಗ್ಯ ತಪಾಸಣೆ ನಡೆಸುವ ಇಬ್ಬರು ವೈದ್ಯರು ಹಾಗೂ ವಾರ್ಡನ್, ಶಾಲೆಯ ಮುಖ್ಯೋಪಾಧ್ಯಾಯರು, ವರ್ಗ ಶಿಕ್ಷಕರ ನಿರ್ಲಕ್ಷ್ಯ ಕಂಡು ಬಂದಿದೆ ಅವರ ವಿರುದ್ದ ಕ್ರಮ ಜರುಗಿಸಲಾಗುತ್ತಿದೆ ಎಂದರು.
ಹಾಸ್ಟೆಲ್ ನಲ್ಲಿ ನಡೆದಿರುವ ಈ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಆಘಾತ ವ್ಯಕ್ತವಾಗುತ್ತಿದೆ.