Advt. 
 Views   358

ಕಾರ್ಖಾನೆ ವಿರುದ್ದ ಧರಣಿಯಲ್ಲಿ ಹಿರಿಯ ಸಾಹಿತಿ ಪಾಟೀಲ್ ಭಾಗಿ

Nov 24, 2025, 08:26 AM IST
ಕಾರ್ಖಾನೆ ವಿರುದ್ದ ಧರಣಿಯಲ್ಲಿ ಹಿರಿಯ ಸಾಹಿತಿ ಪಾಟೀಲ್ ಭಾಗಿ

ಕೊಪ್ಪಳ : 85 ವರ್ಷದ ಸಾಹಿತಿಗಳು ಬಂದ್ರು , 45 ವರ್ಷದ ಶಾಸಕರು ಇನ್ನೂ ಬಂದಿಲ್ಲ.

ಕಾರ್ಖಾನೆಗಳ ವಿಸ್ತರಣೆ ವಿರುದ್ದ ಕೊಪ್ಪಳದಲ್ಲಿ ನಡೆದಿರುವ ಅನಿರ್ದಿಷ್ಟ ಧರಣಿ ಇಂದು ನ. 24 ರಂದು 25 ನೆ ದಿನಕ್ಕೆ ಕಾಲಿಟ್ಟಿದೆ. ಧರಣಿಯಲ್ಲಿ ನಗರದ ವಿವಿಧ ಸಂಘಟನೆಗಳ ಜನ ಭಾಗವಹಿಸುತ್ತಿದ್ದಾರೆ. 2025 ಫೆ.24 ಕಾರ್ಖಾನೆಗಳ ವಿರುದ್ದ ಹೋರಾಟಕ್ಕೆ ಗವಿಶ್ರೀಗಳು ಆಗಮಿಸಿದ್ದರಿಂದ ಕಾರ್ಖಾನೆ ಮ್ಯಾಟ್ರು ರಾಜ್ಯದ ತುಂಬ ಸುದ್ದಿಯಾಗಿ ಗಮನ ಸೆಳೆದಿದೆ.‌

ಧರಣಿ ಆರಂಭವಾದ ಮೇಲೆ ರೈತ ಸಂಘದ ರಾಜ್ಯಾಧ್ಯಕ್ಷರು, ಗದಗನ ತೋಂಟದಾರ್ಯ ಸ್ವಾಮಿಜಿ, ಕಪ್ಪತ್ತಗುಡ್ಡದ ನಂದಿವೇರಿ ಮಠದ ಸ್ವಾಮಿಜಿ, ವಿಜಯಪುರ ಜಿಲ್ಲೆ ಇಟಗಿಯ ಗುರುಶಿವಶಾಂತವೀರ ಮಹಾಸ್ವಾಮಿಜಿ, ಸಾಮಾಜಿಕ ಹೋರಾಟಗಾರರ ಚಲನಚಿತ್ರ ನಟ ಚೇತನ್ ಸೇರಿದಂತೆ ನಾಡಿನ ಅನೇಕ ಗಣ್ಯರು, ಹೋರಾಟಗಾರರು, ಸಾಹಿತಿಗಳು ಆಗಮಿಸಿ ಧರಣಿಗೆ ಬೆಂಬಲ ಸೂಚಿಸಿದ್ದಾರೆ. ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ಧರಣಿ ಆರಂಭದ ಮರುದಿನವೆ ನ.1 ರಂದು ಧರಣಿ ಸ್ಥಳದ ಪಕ್ಕ ರಸ್ತೆಯಲ್ಲಿ ಸಂಚರಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಶಿವರಾಜ ತಂಗಡಗಿ ಧರಣಿಯತ್ತ ಹೊರಳಿ ನೋಡದೆ ಹಾಗೆ ಹೋಗಿದ್ದರು. ಅವರೂ ಸಹಿತ ಮೊನ್ನೆ ನ. 17 ರಂದು ಧರಣಿ ಸ್ಥಳಕ್ಕೆ ಬಂದು ಅಹವಾಲು ಕೇಳಿ, ಮತ್ತೊಮ್ಮೆ ಸಿಎಂ ಗಮನಕ್ಕೆ ತರುವ ಮಾತು ಹೇಳಿ ಹೋದರು. ಅವರ ಜೊತೆ ಸಂಸದರು ಬಂದು ಹೋದರು.

ಆದರೆ ಕ್ಷೇತ್ರದ ಶಾಸಕರು ರಾಘವೇಂದ್ರ ಹಿಟ್ನಾಳ ಮಾತ್ರ ಧರಣಿ ಆರಂಭವಾಗಿ 25 ದಿನವಾದರೂ ಧರಣಿ ಸ್ಥಳಕ್ಕೆ ಬಾರದೆ ಇರುವುದು ಜನರ, ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಸಕರು ಈಗಾಗಲೆ ವಿಕೇಂಡ್ ನಲ್ಲಿ ಅಥವಾ ಯಾವುದಾದರೂ ಕಾಮಗಾರಿ ಭೂಮಿ ಪೂಜೆ ಇದ್ದರೆ ಕ್ಷೇತ್ರಕ್ಕೆ ಬರ್ತಾರೆ ಎನ್ನೋದು ಜನಜನಿತವಾಗಿದೆ. ಆದರೆ ಬೇರೆ ದಿನಗಳಲ್ಲಿ ಕೊಪ್ಪಳಕ್ಕೆ ಬಂದಿದ್ದ ಶಾಸಕರು ಮದುವೆಗಳು, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆಂಗಳೂರು ದಾರಿ ಹಿಡಿದಿದ್ದಾರೆ ಹೊರತು ಸೌಜನ್ಯಕ್ಕಾದರೂ ಧರಣಿ ಸ್ಥಳಕ್ಕೆ ಬಂದಿಲ್ಲ ಶಾಸಕರ ಈ ನಿಲುವು ಕಾರ್ಖಾನೆ ವಿಷಯದಲ್ಲಿ ಜನರ ಮನಸ್ಸಲ್ಲಿ ಆತಂಕ ಅನುಮಾನ ಮೂಡಿಸಿದೆ ಎಂಬ ಮಾತು ಕೇಳಿ ಬರುತ್ತಿದೆ.

ಧರಣಿಯ 25 ನೇ ದಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ 85 ವರ್ಷದ ಹಿರಿಯರು ಹೆಚ್. ಎಸ್. ಪಾಟೀಲರು ಧರಣಿಯಲ್ಲಿ ಭಾಗವಹಿಸಿದರು. ಧರಣಿಯ ವೇದಿಕೆಯಲ್ಲಿ ನಿಂತುಕೊಂಡು ಖಡಕ್ಕಾಗಿ ಮಾತನಾಡಿದರು. ಕೆಲವು ಜನಪ್ರತಿನಿಧಿಗಳು ಹಣದ ಬೆನ್ನು ಹತ್ತಿದ್ದಾರೆ. ಆರೋಗ್ಯ ಮುಖ್ಯವಲ್ಲ ಹಣ ಮುಖ್ಯವಾಗಿದೆ. ನಾವು ಆರೋಗ್ಯವಂತರಾಗಿ ಜೀವನ ನಡೆಸಿದವರು. ಈಗ ಎಂಥ ಸ್ಥಿತಿ ಬರುತ್ತಿದೆಯಲ್ಲ ಎಂದು ಖೇದ ವ್ಯಕ್ತಪಡಿಸಿ ಎಲ್ಲರೂ ಒಗ್ಗಟ್ಟಾಗಬೇಕು ಹೋರಾಟಕ್ಕೆ ಬೆಂಬಲಿಸಿ ಎಂದರು.

85 ವರ್ಷದ ಹಿರಿಯ ಸಾಹಿತಿಗಳು ಧರಣಿಗೆ ಬಂದ್ರು 45 ರ ಹರೆಯದ ಶಾಸಕರು ಯಾವಾಗ ಧರಣಿ ಸ್ಥಳಕ್ಕೆ ಬರ್ತಾರೆ ಎಂಬುದು ಈಗ ಎಲ್ಲರ ಪ್ರಶ್ನೆ. ‌



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jun 11 2026 12:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮಹಿಳೆಯ ಸುಟ್ಟು ಕೊಂದ ಆರೋಪಿ ಅರೆಸ್ಟ್
Jun 9 2026 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದಾಖಲೆಗಳೊಂದಿಗೆ ಜಿಲ್ಲಾಡಳಿತಕ್ಕೆ ದೂರು
Jun 9 2026 6:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ : ಗಾಣಿಗ ಸಂಘ ಒತ್ತಾಯ
Jun 7 2026 6:40PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನಮ್ಮ ಪಕ್ಷಕ್ಕೆ ಬನ್ನಿ : ಬಿಜೆಪಿ-ಜೆಡಿಎಸ್ ನಾಯಕರ ಆಹ್ವಾನ
Jun 7 2026 11:57AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ : ನಿಗೂಢ ಚಾಕು ದಾಳಿ: ತಂದೆ ಮಗಳು ಸಾವು
Jun 6 2026 7:46PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಚಿವ ಸ್ಥಾನಕ್ಕೆ ಹೋರಾಟ ಸಭೆಯಲ್ಲಿ ಭಿನ್ನಮತ
Jun 6 2026 8:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ಷರಾಭ್ಯಾಸ ಮಕ್ಕಳ ಉಜ್ವಲ ಭವಿಷ್ಯದ ಮೊದಲ ಹೆಜ್ಜೆ
Jun 5 2026 8:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಮೀರ್ ಪರ ಡಿಸಿಎಂ ಸ್ಥಾನಕ್ಕಾಗಿ ಆಗ್ರಹ
Jun 4 2026 8:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪೊಲೀಸ್ ಠಾಣೆ, ಪುರಸಭೆಗೆ ಕೆಆರ್‌ಎಸ್ ಪಕ್ಷ ಮನವಿ
Jun 4 2026 5:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿಕೆಶಿ ನೂತನ ಸಿಎಂ : ಕೊಪ್ಪಳದಲ್ಲಿ ಸಂಭ್ರಮದ ಕೊರತೆ !




Copyright © 2026 Agni Divya. All Rights Reserved.
Designed & Developed by We Make Digitize