Advt. 
 Views   347

ಹಳೆ ದಿನಗಳ ನೆನಪು ಆ ಕಾಲದ ಕನಸು… ಈ Kite ಬ್ರದರ್ಸ್ ಗಾಳಿಪಟ !

Nov 20, 2025, 07:26 AM IST
ಹಳೆ ದಿನಗಳ ನೆನಪು  ಆ ಕಾಲದ ಕನಸು… ಈ Kite ಬ್ರದರ್ಸ್ ಗಾಳಿಪಟ !

ಕೊಪ್ಪಳ : ಬಾಲ್ಯ ಪ್ರತಿಯೊಬ್ಬರ ಬದುಕಿನಲ್ಲಿ ಸುವರ್ಣ ಯುಗ ಇದ್ದಂತೆ ಎಷ್ಟೇ ಹಣ ಕೊಟ್ಟರು ಎಷ್ಟೇ ಸಂಪತ್ತು ಇದ್ದರು ಬಾಲ್ಯ ಮತ್ತೆ ಮರಳಿ ಬರಲ್ಲ.

ಆದರೆ ಬಾಲ್ಯಕ್ಕೆ ಕರೆದುಕೊಂಡು ಹೋಗುವ ಸಿನಿಮಾ ಬಂದಿದೆ ಅದೆ Kite ಬ್ರದರ್ಸ್. ಇದು ಬರಿ ಬಾಲ್ಯಕ್ಕೆ ಕರೆದುಕೊಂಡು ಅಷ್ಟೇ ಅಲ್ಲ ನಿಮ್ಮನ್ನ ಬಾಲ್ಯದಲ್ಲಿ ತೇಲಾಡಿಸಿ ನಗಿಸಿ ಹಗುರಾಗಿಸಿ ಕೊನೆಗೆ ಕಣ್ಣಂಚಲ್ಲಿ ಹನಿ ತರಿಸುತ್ತೆ ಈ ಸಿನಿಮಾ.

ಇದರ ನಿರ್ದೇಶಕರು ವೀರೇನ್ ಸಾಗರ್ ಬಗಾಡೆ ಹಾಗೂ ಕಾರ್ಯಕಾರಿ ನಿರ್ಮಾಪಕರು ವಿನೋದ್ ಬಗಾಡೆ. ಇಬ್ಬರು ಮೂಲತಃ ಕೊಪ್ಪಳದವರು.

Kite ಅಂದ್ರೆ ಗಾಳಿಪಟ. ನಮ್ಮ ದೇಹ ನೆಲದ ಮೇಲಿದ್ದರೂ ಗಾಳಿಪಟ ನಮ್ಮ ಆಸೆ ಕನಸು ದೃಷ್ಟಿ ಎಲ್ಲವನ್ನೂ ಆಕಾಶಕ್ಕೆ ಒಯ್ಯುತ್ತೆ. ಗಾಳಿಪಟದ ದಾರ ಮಾತ್ರ ನಮ್ಮ ಕೈಯಲ್ಲಿರಬೇಕು ಅಷ್ಟೆ.

ಇದು ಇಬ್ಬರು ಗೆಳೆಯರು ಬಾಲ್ಯದ ನೆನಪುಗಳೊಂದಿಗೆ ತಾವು ಕಲಿತ, ಕುಸಿದು ಬಿದ್ದ ಶಾಲೆಯನ್ನು ಹೇಗೆ ಕಟ್ಟುತ್ತಾರೆ ಎಂಬುದು ಒಂದು ಸಣ್ಣ ಎಳೆಯಾದರೂ ಇದು ಬರಿ ಮಕ್ಕಳು ನೋಡುವ ಸಿನಿಮಾ ಅಲ್ಲ. ಮಕ್ಕಳ ಜೊತೆ ಪಾಲಕರು ಕೂಡ ನೋಡುವ ಸಿನಿಮಾ. ಏಕೆಂದರೆ ಪಾಲಕರ ಬದುಕಿನಲ್ಲಿ ಬಾಲ್ಯ ಬಂದು ಹೋಗಿರುತ್ತಲ್ಲ !

ನವೆಂಬರ್ 21ರಿಂದ ಕೊಪ್ಪಳದ ಲಕ್ಷ್ಮಿ ಚಿತ್ರಮಂದಿರದಲ್ಲಿ ಪ್ರತಿದಿನ ಸಾಯಂಕಾಲ 6ಕ್ಕೆ , ರಾತ್ರಿ 9ಕ್ಕೆ ಶೋ ಇರುತ್ತದೆ. ನೋಡಿ ಆನಂದಿಸಿರಿ.

ವಿರೇನ್ ಬಗಾಡೆ ಮತ್ತು ವಿನೋದ್ ಬಗಾಡೆ ಕೊಪ್ಪಳದ ಕುಂಬಾರ ಓಣಿ ಶಾಲೆ, ಶ್ರೀ ಗವಿಸಿದ್ದೇಶ್ವರ ಹೈಸ್ಕೂಲ್ ನಲ್ಲಿ ಓದಿ ಬೆಳೆದು ಬೆಂಗಳೂರು ತಲುಪಿ ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದಾರೆ. ಇವರಿಗೆ ಪ್ರೋತ್ಸಾಹಿಸಿ.
------------
ಗಾಳಿಯ ಮೊರೆತಕ್ಕೆ ನಗುವ ಗಾಳಿಪಟ
ಮೋಡಗಳ ನೆರಳಲ್ಲಿ ಮಗುಚುವ ಬಣ್ಣಗಳು
ದಾರ ಹಿಡಿದ ಕೈಗಳಲ್ಲಿ ಪುಳಕ
ಹಳೆ ದಿನಗಳ ನೆನಪು, ಆ ಕಾಲದ ಕನಸು…ಈ ಗಾಳಿಪಟ !



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Aug 16 2026 7:55AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಾಳಾದ ರಸ್ತೆ : ಸಚಿವರು ಶಾಸಕ ಸಂಸದರಿಗೆ ಪ್ರತಿಭಟನೆಯ ಬಿಸಿ
Aug 13 2026 7:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ 350 ಅಡಿ ತ್ರಿವರ್ಣ ಧ್ವಜದ ಮೆರವಣಿಗೆ
Aug 12 2026 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೊರ ರಾಜ್ಯಗಳಿಗೆ ನಿಗದಿ ಮಾಡಿದ ನಂತರ ನಮ್ಮ ರೈತರ ನೆನಪಾಯಿತೇ...?
Aug 11 2026 7:40PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಾಸಕರೆ ಸದನದಲ್ಲಿ ಸಮಸ್ಯೆ ಬಗ್ಗೆ ಚರ್ಚಿಸಿ : ಸಿವಿಸಿ
Aug 11 2026 6:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತುಂಗಭದ್ರಾ ಡ್ಯಾಂನಿಂದ ವಿವಿಧ ಕಾಲುವೆಗಳಿಗೆ ನೀರು
Aug 11 2026 5:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಚುನಾವಣಾ ತಯಾರಿ ಬಗ್ಗೆ SDPI ಸಂಘಟನಾ ಸಭೆ
Aug 10 2026 8:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ 7083 ಮೃತರ ಖಾತೆಗೆ ಹಣ
Aug 10 2026 5:27PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಜೈಲ್ ಭರೋ ಚಳುವಳಿ
Aug 8 2026 5:48PM | ವೈವಿಧ್ಯ | ವಿಷ್ಮಯ ಕವನ : ಪ್ರೀತಿ ಕೊಂದವಳು !
Aug 8 2026 8:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ 26 ಹುದ್ದೆಗಳಿಗೆ 3 ಸಾವಿರಕ್ಕೂ ಹೆಚ್ಚು ಅರ್ಜಿ




Copyright © 2026 Agni Divya. All Rights Reserved.
Designed & Developed by We Make Digitize