Advt. 
 Views   316

ಪತ್ನಿ ಅತ್ತೆ ಮಾವಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಭೂಪ

Nov 19, 2025, 12:26 AM IST
ಪತ್ನಿ ಅತ್ತೆ ಮಾವಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಭೂಪ

ಕೊಪ್ಪಳ : ಕೋರ್ಟ ನ ಮಧ್ಯಸ್ಥಿಕೆದಾರರ ಕೇಂದ್ರದಲ್ಲಿ ದುರುಳನೊಬ್ಬ ಪತ್ನಿ ಅತ್ತೆ ಮಾವರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಇಂದು ಕೊಪ್ಪಳದಲ್ಲಿ ಜರುಗಿದೆ.

ವೈವಾಹಿಕ ಜೀವನದ ವಾಜ್ಯ ನಿಮಿತ್ಯ ಕೋರ್ಟ್ ನಲ್ಲಿ ಮಧ್ಯಸ್ಥಿಕೆದಾರರ ಕೇಂದ್ರದಲ್ಲಿ ಕೌನ್ಸಿಲಿಂಗ್ ಮುನ್ನ ಈ ಘಟನೆ ನಡೆದಿದೆ.

ಕಾರಟಗಿ ತಾಲೂಕು ಸಿದ್ದಾಪುರದ ಚಿರಂಜೀವಿ ಭೋವಿ ಎಂಬಾತನೆ ಹಳೆ ಕುಮಟಾದ ತನ್ನ ಪತ್ನಿ ರೋಜಾ , ಅತ್ತೆ ಶಾಂತಮ್ಮ , ಮಾವ ಶಂಕ್ರಪ್ಪ ಇವರಿಗೆ ಹಿಂದಿನಿಂದ ಬಂದು ಪೆಟ್ರೋಲ್ ಸುರುವಿದ್ದಾನೆ. ಬೆಂಕಿ ಹಚ್ಚಲು ಯತ್ನಿಸಿದ್ದಾನೆ.

12 ವರ್ಷದ ಹಿಂದೆ ಮದುವೆಯಾಗಿದ್ದು ಆಗಿನಿಂದ ನಿರಂತರ ಅಳಿಯ ಜಗಳ ಆಡುತ್ತಿದ್ದು ಪತ್ನಿ ಬಗ್ಗೆ ಶಂಕೆ ವ್ಯಕ್ತಪಡಿಸುವುದು ಹಲ್ಲೆ ಮಾಡುವುದು ಸೇರಿದಂತೆ ಮಾನಸಿಕ ಹಿಂಸೆ ಕೊಡುತ್ತಿದ್ದ. ಈ ಕಾರಣದಿಂದ ಪತ್ನಿ ರೋಜಾ ಡಿವೋರ್ಸ್ ಗಾಗಿ ಕೋರ್ಟ್ ಮೊರೆ ಹೋಗಿದ್ದು ಇಂದು ಮಧ್ಯಸ್ಥಿಕೆದಾರರ ಕೇಂದ್ರದಲ್ಲಿ ಕೌನ್ಸಿಲಿಂಗ್ ನಡೆದಿತ್ತು.

ಈ ಸಂದರ್ಭ ಒಳ ಬಂದಿದ್ದ ಚಿರಂಜೀವಿ ಬ್ಯಾಗಿನಲ್ಲಿ ಪೆಟ್ರೋಲ್ ಬಾಟಲಿ ಇಟ್ಟುಕೊಂಡು ಬಂದಿದ್ಧಾನೆ. ಪತ್ನಿ ಅತ್ತೆ ಮಾವರಿಗೆ ಹಿಂದಿನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವಾಗ ವಕೀಲರು ಬಚಾವ್ ಮಾಡಿದ್ದಾರೆ.

ಚಿರಂಜೀವಿಯನ್ನು ಕೊಪ್ಪಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
 



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jun 11 2026 12:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮಹಿಳೆಯ ಸುಟ್ಟು ಕೊಂದ ಆರೋಪಿ ಅರೆಸ್ಟ್
Jun 9 2026 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದಾಖಲೆಗಳೊಂದಿಗೆ ಜಿಲ್ಲಾಡಳಿತಕ್ಕೆ ದೂರು
Jun 9 2026 6:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ : ಗಾಣಿಗ ಸಂಘ ಒತ್ತಾಯ
Jun 7 2026 6:40PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನಮ್ಮ ಪಕ್ಷಕ್ಕೆ ಬನ್ನಿ : ಬಿಜೆಪಿ-ಜೆಡಿಎಸ್ ನಾಯಕರ ಆಹ್ವಾನ
Jun 7 2026 11:57AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ : ನಿಗೂಢ ಚಾಕು ದಾಳಿ: ತಂದೆ ಮಗಳು ಸಾವು
Jun 6 2026 7:46PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಚಿವ ಸ್ಥಾನಕ್ಕೆ ಹೋರಾಟ ಸಭೆಯಲ್ಲಿ ಭಿನ್ನಮತ
Jun 6 2026 8:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ಷರಾಭ್ಯಾಸ ಮಕ್ಕಳ ಉಜ್ವಲ ಭವಿಷ್ಯದ ಮೊದಲ ಹೆಜ್ಜೆ
Jun 5 2026 8:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಮೀರ್ ಪರ ಡಿಸಿಎಂ ಸ್ಥಾನಕ್ಕಾಗಿ ಆಗ್ರಹ
Jun 4 2026 8:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪೊಲೀಸ್ ಠಾಣೆ, ಪುರಸಭೆಗೆ ಕೆಆರ್‌ಎಸ್ ಪಕ್ಷ ಮನವಿ
Jun 4 2026 5:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿಕೆಶಿ ನೂತನ ಸಿಎಂ : ಕೊಪ್ಪಳದಲ್ಲಿ ಸಂಭ್ರಮದ ಕೊರತೆ !




Copyright © 2026 Agni Divya. All Rights Reserved.
Designed & Developed by We Make Digitize