Advt. 
 Views   281

ಕೊಪ್ಪಳ : ನಗರಸಭೆಯ 4ನೆ ವಾರ್ಡ್ ಮೀಸಲಾತಿಗೆ ಆಕ್ಷೇಪಣೆ

Nov 18, 2025, 07:05 AM IST
ಕೊಪ್ಪಳ : ನಗರಸಭೆಯ 4ನೆ ವಾರ್ಡ್ ಮೀಸಲಾತಿಗೆ ಆಕ್ಷೇಪಣೆ

ಕೊಪ್ಪಳ : ನಗರಸಭೆ 4ನೆ ವಾರ್ಡಿಗೆ ಪ್ರಕಟವಾಗಿರುವ ಪರಿಶಿಷ್ಟ ಜಾತಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕೆ ವ್ಯತಿರಿಕ್ತವಾಗಿದೆ. ರಾಜಕೀಯ ಪ್ರಾತಿನಿಧ್ಯ ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಲ್ಲಿ ಹಿಂದುಳಿದ ವರ್ಗ 'ಎ' ಅಭ್ಯರ್ಥಿಗಳು ವಂಚಿತರಾಗಿದ್ದು ಮೀಸಲಾತಿ ಬದಲಾಯಿಸುವಂತೆ ವಾರ್ಡ್ ಮುಖಂಡ ಸಲೀಂ ಗೊಂಡಬಾಳ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

ಇದೇ ಸಂದರ್ಭದಲ್ಲಿ ಇದೆ ವಿಷಯ ಕುರಿತು 4ನೇ ವಾರ್ಡ್ ಪಲ್ಟನ್ ಗಲ್ಲಿಯ ಪಂಚ ಕಮಿಟಿ, ಪೀರ್ ಪಾಷಾ ಮಸ್ಜೀದ್ ಕಮಿಟಿ ಕೂಡ ಆಕ್ಷೇಪಣೆ ಸಲ್ಲಿಸಿವೆ.

1996 ರಿಂದ ಈಗ 2025 ವರೆಗೆ ಅಂದ್ರೆ 29 ವರ್ಷದಲ್ಲಿ ಒಟ್ಟು 6 ಬಾರಿ ವಾರ್ಡ್ ಚುನಾವಣೆಗೆ ಮೀಸಲಾತಿ ಪ್ರಕಟಗೊಂಡಿದ್ದು 3 ಬಾರಿ ಪರಿಶಿಷ್ಟ ಜಾತಿ, 1 ಸಲ ಪರಿಶಿಷ್ಟ ಪಂಗಡ ಮೀಸಲು ಬಂದಿದೆ.‌ ಈಗ ಮತ್ತೆ ಪರಿಶಿಷ್ಟ ಜಾತಿ ಮೀಸಲು ಬಂದಿದೆ.

ಈ ಸಲ ನಮ್ಮ ವಾರ್ಡ್ ಗೆ ಮೀಸಲು ನಿಗದಿಯಲ್ಲಿ ಯಾವುದೇ ಮಾನದಂಡ ಪಾಲಿಸಿಲ್ಲ. ಈ ಹಿಂದಿನ ಅವಧಿಯಲ್ಲಿ ಮೀಸಲು ಇರಿಸಲಾಗಿದ್ದ ಪ್ರವರ್ಗಗಳು ಪುನರಾವರ್ತನೆ ಆಗದಂತೆ ಎಚ್ಚರ ವಹಿಸತಕ್ಕದ್ದು ಎಂದು ರಾಜ್ಯ ಪತ್ರದಲ್ಲಿ ಇದ್ದರೂ ಅದನ್ನು ಪಾಲಿಸಿಲ್ಲ ಎಂದು ಆಕ್ಷೇಪಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪಲ್ಟನ್ ಗಲ್ಲಿ ಪಂಚ ಕಮಿಟಿ ಅಧ್ಯಕ್ಷರು
ಜಾಫರ್ ಸಾಬ್ ಸಂಗಟಿ, ಪೀರಪಾಷಾ ಮಸ್ಜೀದ್ ಕಮಿಟಿ ಅಧ್ಯಕ್ಷರು ಗೈಬುಸಾಬ ಚಟ್ನಿ , ಅಂಜುಮನ್ ಕಮಿಟಿ ಅಧ್ಯಕ್ಷರು ಆಸೀಫ್ ಕರ್ಕಿಹಳ್ಳಿ , ನಗರಸಭೆ ಸದಸ್ಯ ಅಕ್ಬರ ಪಾಷಾ, ವಧುಸಾಬ್ ಕಮ್ಮಾರ, ಅಜೀಜ್ ಮಾನ್ವಿಕರ್, ಫಿರ್ದೋಸ್ ಖಾನ್, ಅನ್ವರ್ ಕವಲೂರ , ಜೀಲಾನ್ ಸಾಬ್ , ಸುಲೇಮಾನ್ ಮೇಸ್ತ್ರಿ, ಅಬ್ದುಲ್ ವಹಾಬ್ ಬೆಪಾರಿ, ಶೌಕತ್ ಬೆಪಾರಿ , ಸಲೀಮ್ ತಳಕಲ್ ಪಾಷಾ ತಳಕಲ್ ಫಜಲ್ ಖಾನ್
ಹುಸೇನ್ ಖಾನ್ ಬಾಬಾ ಕವಲೂರ ಸಾದಿಕ್ ಗೊಂಡಬಾಳ
ಅಬ್ದುಲ್ ಸಮದ್ ಖಲೀಲ್ ಪಾನ್ವಾಲೆ ರಿಜ್ವಾನ್ ಬಿಪಾರಿ
ಅಮನ್ ಬೆಪಾರಿ ಕೆ ಎಂ ಇಬ್ರಾಹಿಂ ಖಾಜಾ ಬೆಪಾರಿ ಇತರರು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Aug 16 2026 7:55AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಾಳಾದ ರಸ್ತೆ : ಸಚಿವರು ಶಾಸಕ ಸಂಸದರಿಗೆ ಪ್ರತಿಭಟನೆಯ ಬಿಸಿ
Aug 13 2026 7:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ 350 ಅಡಿ ತ್ರಿವರ್ಣ ಧ್ವಜದ ಮೆರವಣಿಗೆ
Aug 12 2026 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೊರ ರಾಜ್ಯಗಳಿಗೆ ನಿಗದಿ ಮಾಡಿದ ನಂತರ ನಮ್ಮ ರೈತರ ನೆನಪಾಯಿತೇ...?
Aug 11 2026 7:40PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಾಸಕರೆ ಸದನದಲ್ಲಿ ಸಮಸ್ಯೆ ಬಗ್ಗೆ ಚರ್ಚಿಸಿ : ಸಿವಿಸಿ
Aug 11 2026 6:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತುಂಗಭದ್ರಾ ಡ್ಯಾಂನಿಂದ ವಿವಿಧ ಕಾಲುವೆಗಳಿಗೆ ನೀರು
Aug 11 2026 5:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಚುನಾವಣಾ ತಯಾರಿ ಬಗ್ಗೆ SDPI ಸಂಘಟನಾ ಸಭೆ
Aug 10 2026 8:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ 7083 ಮೃತರ ಖಾತೆಗೆ ಹಣ
Aug 10 2026 5:27PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಜೈಲ್ ಭರೋ ಚಳುವಳಿ
Aug 8 2026 5:48PM | ವೈವಿಧ್ಯ | ವಿಷ್ಮಯ ಕವನ : ಪ್ರೀತಿ ಕೊಂದವಳು !
Aug 8 2026 8:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ 26 ಹುದ್ದೆಗಳಿಗೆ 3 ಸಾವಿರಕ್ಕೂ ಹೆಚ್ಚು ಅರ್ಜಿ




Copyright © 2026 Agni Divya. All Rights Reserved.
Designed & Developed by We Make Digitize