Advt. 
 Views   276

ಕೊಪ್ಪಳ : ಶುದ್ದಗಾಳಿ ಗ್ಯಾರಂಟಿ ಬೇಕಾಗಿದೆ - ನಂದಿವೇರಿ ಸ್ವಾಮಿಜಿ

Nov 18, 2025, 06:51 AM IST
ಕೊಪ್ಪಳ : ಶುದ್ದಗಾಳಿ ಗ್ಯಾರಂಟಿ ಬೇಕಾಗಿದೆ - ನಂದಿವೇರಿ ಸ್ವಾಮಿಜಿ

ಕೊಪ್ಪಳ : ಸರಕಾರ ಗ್ಯಾರಂಟಿ ಕೊಡ್ತಾ ಇದೆ. ನಮಗೆ ಆ ಗ್ಯಾರಂಟಿಗಿಂತಲೂ ಶುದ್ದಗಾಳಿ ಗ್ಯಾರಂಟಿ ಬೇಕಾಗಿದೆ. ಶುದ್ದಗಾಳಿ ಉಳಿಬೇಕಾಗಿದೆ.‌ ಶುದ್ದಗಾಳಿ ಮೂಲಕ ನಾವು ಉಳಿಯುವ ಸನ್ನಿವೇಶ ಸರಕಾರಗಳು ಸೃಷ್ಟಿ ಮಾಡಬೇಕು. ಸರಕಾರಗಳು ಜನರಿಗೆ ಏನು ಬೇಕು ಅದನ್ನು ಕೊಡ್ರಿ ಜನ ಯಾವುದು ಬೇಡ ಅಂತಾರೆ ಅದನ್ನ ಹಿಂದಕ ತಗೋರಿ ಆ ಮೂಲಕ ಜನಹಿತ ಸರಕಾರ ಅನ್ನೊ ಹೆಸರನ್ನ ಪಡೆಯಿರಿ ಎಂದು ಕಪ್ಪತ್ತಗುಡ್ಡದ ಶ್ರೀ ನಂದಿವೇರಿ ಮಹಾಸ್ವಾಮಿಗಳು ಹೇಳಿದರು.

ಅವರು ಕೊಪ್ಪಳ ಹತ್ತಿರ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿಯಲ್ಲಿ ಮಾತನಾಡಿದರು. ಅದಕ್ಕೂ ಮುನ್ನ ಸ್ವಾಮಿಜಿಗಳು ಕಾರ್ಖಾನೆಗಳಿಂದ ಭಾದಿತ ಗ್ರಾಮಗಳಿಗೆ ಭೇಟಿ ನೀಡಿ ಜನರೊಂದಿಗೆ ಸಂವಾದ ಮಾಡಿದರು.

ನಾವು ಅಭಿವೃದ್ಧಿ ವಿರೋಧಿಗಳಲ್ಲ. ಕೊಪ್ಪಳ ಉಳಿಬೇಕು. ಕಾರ್ಖಾನೆಗಳಿಂದ ಪರಿಸರ ಹಾಳಾಗ್ತಿದೆ. ಜನ ಇಲ್ಲದಲ್ಲಿ ಕಾರ್ಖಾನೆ ಹಾಕಿ. ಇಲ್ಲಿ ಪರಿಸರ ಹಾಳಾಗಿ ಶರೀರ ಡಸ್ಟ್ ಬಿನ್ ಆಗಬಾರದು. ಇಲ್ಲಿ ಗಿಡಗಳ ಮೇಲೂ ಧೂಳು ಇದೆ.

ನಿಸರ್ಗವೆಂಬ ತಾಯಿಗೆ ಕಾರ್ಬನ್ ಎಂಬ ವಿಷ ಕೊಡಬಾರದು. ಬಂಗಾರದ ಗಣಿಗಾರಿಕೆಗೆ ಬಂಡವಾಳಶಾಹಿಗಳು ಕಪ್ಪತ್ತಗುಡ್ಡಕ್ಕೆ ಬಂದಿದ್ರು. ಜನ ಒಗ್ಗಟ್ಠಾಗಿ ಹೋರಾಡಿ ವಾಪಸ್ ಕಳಿಸಿದ್ದೇವೆ. ಇಲ್ಲಿಯೂ ಕೂಡ ಜಿಲ್ಲೆಯ ಜನ ಎದ್ದು ನಿಲ್ಲಬೇಕು ಹೋರಾಟಕ್ಕೆ ಸಿದ್ದರಾಗಿ ಎಂದ ಅವರು ಗಿಡಗಳ ಬಗ್ಗೆ ಪಾಶ್ಷಿಮಾತ್ಯ ಸಾಹಿತಿಯೊಬ್ಬರು ಬರೆದ ಕನ್ನಡ ಕವಿ ಬಿ.ಎಂ.ಶ್ರೀ ಅವರು ಅನುವಾದಿಸಿದ ಕವನ ಹಾಗೂ ಚೆನ್ನವೀರ ಕಣವಿಯವರ ಕವನ ಹೇಳಿದರು.

ಈ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಡಿ.ಹೆಚ್.ಪೂಜಾರ, ಕೆ.ಬಿ.ಗೋನಾಳ, ಬಸವರಾಜ ಶೀಲವಂತರ, ಮಂಜುನಾಥ ಗೊಂಡಬಾಳ, ಡಿ.ಎಂ. ಬಡಿಗೇರ ಇತರರು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jul 10 2026 3:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೆಡಿಎಸ್ ಬರ ಅಧ್ಯಯನ ತಂಡಕ್ಕೆ CVC
Jul 10 2026 8:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಗ್ರಾಮಾಯಣ ಸಂಭ್ರಮ : ಅಭಿಮಾನಿಗಳೊಂದಿಗೆ ವಿನಯರಾಜಕುಮಾರ್
Jul 9 2026 4:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ
Jul 8 2026 7:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೂರಾರು ವಿದ್ಯಾರ್ಥಿಗಳ ಶಾಲೆಗೆ ಸಾಮೂಹಿಕ ಗೈರು
Jul 6 2026 8:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಸ್ರಾವನೆ ಲೋಪ : 8ನೇ ತರಗತಿಗಾಗಿ ವಿದ್ಯಾರ್ಥಿಗಳು ಪರದಾಟ
Jul 6 2026 5:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಲೆಯಾದಾತನ ಅಣ್ಣ - ಅಳಿಯ ಅರೆಸ್ಟ್
Jul 6 2026 1:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ಓರ್ವ ಸಾವು ಮೂವರು ಗಾಯ
Jul 5 2026 11:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿಗಿರಿಗಾಗಿ ಹೋರಾಟ ಜನರ ಸಮಸ್ಯೆಗೆ ಮೌನ : ಕ್ಯಾವಟರ್
Jul 4 2026 3:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಲ : ಒಂದೆ ಕುಟುಂಬದ ಮೂವರು ನೇಣಿಗೆ ಶರಣು
Jul 3 2026 12:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್




Copyright © 2026 Agni Divya. All Rights Reserved.
Designed & Developed by We Make Digitize