Advt. 
 Views   59

ತುಂಗಭದ್ರಾ ನೀರು ಕೊಡಲೇಬೇಕು ! ಕೊಡದಿದ್ದರೆ ಡ್ಯಾಂಗೆ ಮುತ್ತಿಗೆ : ಶ್ರೀರಾಮುಲು ಎಚ್ಚರಿಕೆ

Nov 13, 2025, 04:42 AM IST
ತುಂಗಭದ್ರಾ ನೀರು ಕೊಡಲೇಬೇಕು ! ಕೊಡದಿದ್ದರೆ ಡ್ಯಾಂಗೆ ಮುತ್ತಿಗೆ : ಶ್ರೀರಾಮುಲು ಎಚ್ಚರಿಕೆ

ಕೊಪ್ಪಳ : ಎಂಥದ್ದೆ ಪರಿಸ್ಥಿತಿ ಇರಲಿ ತುಂಗಭದ್ರಾ ಡ್ಯಾಂ ನಿಂದ ಎರಡನೆ ಬೆಳೆಗೆ ನೀರು ಕೊಡಲೆಬೇಕು. ಕೊಡದಿದ್ದರೆ ರೈತರ ಜೊತೆ ನಾವೆಲ್ಲ ಟಿಬಿ ಡ್ಯಾಂ ಗೆ ಮುತ್ತಿಗೆ ಹಾಕ್ತೀವಿ , ಡ್ಯಾಂ ಗೆ ಜಿಗಿಬೇಕಾಗುತ್ತೆ ಆತ್ಮಹತ್ಯೆ ಮಾಡಕೊಬೇಕಾಗುತ್ತೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.

ಅವರು ಇಂದು ಗುರುವಾರ ಮುನಿರಾಬಾದ್ ಹತ್ತಿರ ರೆಸಾರ್ಟ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‌

ಆ ಭಾಗದಲ್ಲಿ ( ದಕ್ಷಿಣ) ನಮ್ಮ ನೀರು ನಮ್ಮ ಹಕ್ಕು ಅಂತ ಹೋರಾಟ ಮಾಡ್ತೀರಿ. ಅದರಂತೆ ಇದು ನಮ್ಮ ನೀರು ನಮ್ಮ ಹಕ್ಕು. ನಾವು ಇದನ್ನು ಬಿಟ್ಟು ಕೊಡೊಕಾಗಲ್ಲ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜಲಸಂಪಲ್ಮೂಲ ಸಚಿವರಾಗಿ ಎರಡೂವರೆ ವರ್ಷ ಆಯ್ತು. ಈ ಎರಡೂವರೆ ವರ್ಷದಲ್ಲಿ ಸಿಎಂ ಆಗಬೇಕು ಅನ್ನೋದು ಬಿಟ್ರೆ ಏನೂ ಮಾಡೆ ಇಲ್ಲ. ಕುರ್ಚಿ ಕೆಡವಬೇಕು ಮುಖ್ಯಮಂತ್ರಿ ಆಗಬೇಕು ಅನ್ನೋದು ಬಿಟ್ರೆ ಬೇರೆ ಏನೂ ಮಾಡೆ ಇಲ್ಲ. ನಮ್ಮ ಭಾಗದ ರೈತರು ಅವರ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗೇಟ್ ದುರಸ್ತಿಯಲ್ಲಿ 52 ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ. ಭ್ರಷ್ಟಾಚಾರ ಮಾಡಿಲ್ಲ ಅಂದ್ರೆ ಇಷ್ಟೊತ್ತಿಗೆ ಹಣ ಕೊಡಬೇಕಿತ್ತು.‌ ಗೇಟ್ ಅಳವಡಿಕೆ ಆಗಬೇಕಿತ್ತು.‌ ಗೇಟ್ ಗಾಗಿ ಟೆಂಡರ್ ಕರೆದಿದ್ದಾರೆ ಅವರಿಗೆ ಹಣ ಕೊಟ್ಟಿಲ್ಲ ಅಂದ್ರೆ ಹೆಂಗೆ ಗೇಟ್ ಫಿಕ್ಸ್ ಮಾಡೋದು ? ಗೇಟ್ ಗಳನ್ನು ಅಳವಡಿಸುವುದು ಬಹುಶಃ ಇನ್ನೂ 8-10 ತಿಂಗಳು ಆಗಲಿಕ್ಕಿಲ್ಲ ಎಂದು ಶ್ರೀರಾಮುಲು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನಸಭೆ ಮುಖ್ಯ ಸಚೇತಕರು ದೊಡ್ಡನಗೌಡ ಪಾಟೀಲ್, ಪರಣ್ಣ ಮುನವಳ್ಳಿ , ಕೆ. ವಿರೂಪಾಕ್ಷಪ್ಪ , ಹಾಲಪ್ಪ ಆಚಾರ, ಶರಣು ತಳ್ಳಿಕೇರಿ,
ಬಸವರಾಜ ಕ್ಯಾವಟರ್, ಬಸವರಾಜ ದಡೇಸೂಗುರು,
ಸುರೇಶ ಬಾಬು ಕಂಪ್ಲಿ, ಕೆ.ಎಸ್. ದಿವಾಕರ್, ಚಂದ್ರನಾಯ್ಕ
ಜಿ.ವೀರಪ್ಪ , ಹೇಮಲತಾ ನಾಯಕ, ತಿಪ್ಪೇರುದ್ರಸ್ವಾಮಿ ಇತರರು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize