ಕೊಪ್ಪಳ : ದೆಹಲಿ ಬಾಂಬ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ಮತ್ತು ತಪಾಸಣೆ ನಡೆದಿದೆ.
ಇಂದು ಮುಂದುವರೆದಿರುವ ತಪಾಸಣೆಯನ್ನು ಪೊಲೀಸ್ ಹಾಗು ಅಬಕಾರಿ ಇಲಾಖೆ ಕೈಗೊಂಡಿದೆ. ತಪಾಸಣೆ ವೇಳೆ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಪತ್ತೆಯಾಗಿದೆ.
ಸದರಿ ಗಾಂಜಾ ಕುಷ್ಟಗಿ ತಾಲೂಕಿನ ನಡವಲಕೊಪ್ಪದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ ಹತ್ತಿರದ ಶೆಡ್ ಹತ್ತಿರ ದಾಳಿ ನಡೆಸಿದ ಪೊಲೀಸರು 5 ಕೆಜಿ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಗಾಂಜಾ ತಂದಿದ್ದ ಆರೋಪಿ ರಣಜಿತ್ ಸಿಂಗ್ ಅರವಿಂದ್ ಸಿಂಗ್ ಚವ್ಹಾಣ ಪರಾರಿಯಾಗಿದ್ದು ಇತ ಕುಷ್ಟಗಿ ತಾಲೂಕು ಕಡೆಕೊಪ್ಪ ಗ್ರಾಮದವನು ಎಂದು ತಿಳಿದು ಬಂದಿದ್ದು ಇತನ ಪತ್ತೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.