Advt. 
 Views   186

ಬಸ್ ಸ್ಟಾಂಡ್ ಗಾಂಜಾ ಪತ್ತೆ ಹಚ್ಚಿದ ಡಾಗ್ ಸ್ಕ್ವಾಡ್

Nov 10, 2025, 09:11 PM IST
ಬಸ್ ಸ್ಟಾಂಡ್ ಗಾಂಜಾ ಪತ್ತೆ ಹಚ್ಚಿದ ಡಾಗ್ ಸ್ಕ್ವಾಡ್

ಕೊಪ್ಪಳ : ದೆಹಲಿ ಕೆಂಪುಕೋಟೆ ಹತ್ತಿರ ನಿನ್ನೆ ನಡೆದ ಭೀಕರ ಸ್ಫೋಟ ಹಿನ್ನೆಲೆ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿ ತಪಾಸಣೆ ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ ಕೊಪ್ಪಳ ಬಸ್ ನಿಲ್ದಾಣದಲ್ಲಿ ಪೊಲೀಸರು ಪರಿಶೀಲನೆ ಸಂದರ್ಭದಲ್ಲಿ 'ಬಿಂದು ಡಾಗ್ ಸ್ಕ್ವಾಡ್' ಗಾಂಜಾ ಪತ್ತೆ ಹಚ್ಚಿದೆ.‌

ಜಾರ್ಖಂಡ್ ನ ಆರು ಯುವಕರ ತಂಡ ಕೆಲಸಕ್ಕಾಗಿ ಯಲಬುರ್ಗಾಕ್ಕೆ ಹೊರಟಿದ್ದು ಅವರ ಬ್ಯಾಗ್ ನಲ್ಲಿ ಗಾಂಜಾ ಪತ್ತೆಯಾಗಿದೆ. ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಓಡಿ ಹೋಗಿದ್ದಾರೆ. ಅವರಿಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ. ಗಾಂಜಾ ಪ್ರಮಾಣ ತಿಳಿದು ಬಂದಿಲ್ಲ.

ದೆಹಲಿ ಘಟನೆ ನಂತರ ನಿನ್ನೆ ತಡರಾತ್ರಿಯಿಂದಲೇ ಪೊಲೀಸರು ಕಟ್ಟೆಚ್ಚರವಹಿಸಿದ್ದು ತುಂಗಭದ್ರಾ ಆಣೆಕಟ್ಟು ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. ಜಿಲ್ಲೆಯ ವಿವಿಧೆಡೆ ಪರಿಶೀಲನೆ ನಡೆದಿದೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize