Advt. 
 Views   625

ಕೊಪ್ಪಳ : ನವೆಂಬರ್ 12 ರಂದು ಗುತ್ತಿಗೆದಾರರ ಪ್ರತಿಭಟನೆ

Nov 09, 2025, 07:15 AM IST
ಕೊಪ್ಪಳ : ನವೆಂಬರ್ 12 ರಂದು ಗುತ್ತಿಗೆದಾರರ ಪ್ರತಿಭಟನೆ

ಕೊಪ್ಪಳ: : ಸಂಸದ ರಾಜಶೇಖರ ಹಿಟ್ನಾಳ ಮಾಲಿಕತ್ವದ ಪ್ರೇರಣಾ ಕಂಪನಿ ವಿರುದ್ದ ಸೆಡ್ಡು ಹೊಡೆದಿರುವ ಗುತ್ತಿಗೆದಾರರು ನ.12 ರಂದು ಜಿಲ್ಲಾಡಳಿತ ಭವನ ಮುಂದೆ ಧರಣಿಗೆ ಸಜ್ಜಾಗಿದ್ದಾರೆ. ಆವತ್ತು ತಮ್ಮ ಬೇಡಿಕೆ ಈಡೇರದಿದ್ದರೆ ನ.13 ರಿಂದ ಸರಕಾರಿ ಟೆಂಡರ್ ಕಾಮಗಾರಿ ಬಂದ್ ಮಾಡಲಿದ್ದಾರೆ.

ಈ ಬಗ್ಗೆ ನಿನ್ನೆ ಶನಿವಾರ ತಾಲೂಕು ಗುತ್ತಿಗೆದಾರರ ಸಂಘದ ಸಭೆ ನಡೆದಿದೆ. ಸಭೆಯಲ್ಲಿ ತಾಲೂಕು ಅಧ್ಯಕ್ಷರಾದ ಕೃಷ್ಣ ಇಟ್ಟಂಗಿ, ಜಿಲ್ಲಾಧ್ಯಕ್ಷರಾದ ಸುರೇಶ ಭೂಮರಡ್ಡಿ ಇದ್ದರು.

ಕೊಪ್ಪಳ ಜಿಲ್ಲಾ ಸ್ಟೋನ್ ಕ್ರಷರ್ ಅಸೋಸಿಯೇಷನ್ ನವರು ಪ್ರೇರಣಾ ಕನ್‌ಸ್ಟ್ರಕ್ಷನ್ ಮೂಲಕವೆ ಕಂಕರ್ ಖರೀದಿಸಬೇಕು ಎಂಬ ನೀತಿ ಮಾಡಿದ್ದನ್ನು ಖಂಡಿಸಿ ಪ್ಯಾಕೇಜ್ ಟೆಂಡರ್ ಪದ್ಧತಿ ರದ್ದುಗೊಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವ ನಿರ್ಧಾರ ಸಭೆಯಲ್ಲಿ ಆಗಿದೆ.

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಗುತ್ತೇದಾರರು ಕೊಪ್ಪಳ ಜಿಲ್ಲೆಯಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದು ಅವರನ್ನು ನಿರ್ಬಂಧಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ನವೆಂಬರ್ 12ರಂದು ಬೆಳಿಗ್ಗೆ 9.30ಕ್ಕೆ ಕೊಪ್ಪಳ ಜಿಲ್ಲಾ ಗುತ್ತೇದಾರರ ಸಂಘದಿಂದ ಪ್ರತಿಭಟನಾ ಮೆರವಣಿಗೆಗೆ ತಾಲ್ಲೂಕು ಗುತ್ತೇದಾರರು ವಾಹನಗಳೊಂದಿಗೆ ಭಾಗವಹಿಸಲಿದ್ದಾರೆ. ಅಂದು ಜಿಲ್ಲಾಡಳಿತ ಭವನ ಮುಂದೆ ಧರಣಿ ನಡೆಯಲಿದೆ. ಆವತ್ತೆ ಬೇಡಿಕೆಗಳು ಈಡೇರದಿದ್ದರೆ ನವೆಂಬರ್ 13ರಿಂದ ಎಲ್ಲಾ ಗುತ್ತೇದಾರರು, ಲ್ಯಾಂಡ್ ಆರ್ಮಿ ಹಾಗೂ ನಿರ್ಮಿತಿ ಕೇಂದ್ರದವರು ಸೇರಿ ಕಾಮಗಾರಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ದೇವಪ್ಪ ಅರಕೇರಿ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಹನುಮೇಶ ಕಡೇಮನಿ, ಹಿರಿಯ ಗುತ್ತೇದಾರರು ಬಸವರಾಜ ಪುರದ, ಮಲ್ಲಯ್ಯ ಎಲ್.ಎಂ, ಅಪ್ಜಲ್ ಪಟೇಲ್, ಇಬ್ರಾಹಿಂ ಅಡ್ಡೇವಾಲೆ, ಖಾಜಾ ಹುಸೇನ ಗದಗ, ಮಹಾದೇವಪ್ಪ, ದ್ಯಾವಣ್ಣ ಕರಿಗಾರ, ಪರಶುರಾಮ ಕಿಡದಾಳ, ಪ್ರದೀಪ್, ಕಾಲೇಶ ಲಕ್ಮಾಪೂರ, ಶ್ರೀಧರ ಬನ್ನಿಕೊಪ್ಪ, ಚಂದ್ರಶೇಖರ ಹಳ್ಳಿ, ಸುರೇಶ ತಟ್ಟಿ, ವಿರೇಶ ಮ್ಯಾಗಳಮಠ, ಮರ್ದಾನ ಅಲಿ ಮಿಠಾಯಿ, ಈರಪ್ಪ ಹುಣಸಿಮರದ, ಕನಕಮೂರ್ತಿ, ಶರಣಪ್ಪ ಬ್ಯಾಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
 



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Aug 16 2026 7:55AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಾಳಾದ ರಸ್ತೆ : ಸಚಿವರು ಶಾಸಕ ಸಂಸದರಿಗೆ ಪ್ರತಿಭಟನೆಯ ಬಿಸಿ
Aug 13 2026 7:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ 350 ಅಡಿ ತ್ರಿವರ್ಣ ಧ್ವಜದ ಮೆರವಣಿಗೆ
Aug 12 2026 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೊರ ರಾಜ್ಯಗಳಿಗೆ ನಿಗದಿ ಮಾಡಿದ ನಂತರ ನಮ್ಮ ರೈತರ ನೆನಪಾಯಿತೇ...?
Aug 11 2026 7:40PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಾಸಕರೆ ಸದನದಲ್ಲಿ ಸಮಸ್ಯೆ ಬಗ್ಗೆ ಚರ್ಚಿಸಿ : ಸಿವಿಸಿ
Aug 11 2026 6:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತುಂಗಭದ್ರಾ ಡ್ಯಾಂನಿಂದ ವಿವಿಧ ಕಾಲುವೆಗಳಿಗೆ ನೀರು
Aug 11 2026 5:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಚುನಾವಣಾ ತಯಾರಿ ಬಗ್ಗೆ SDPI ಸಂಘಟನಾ ಸಭೆ
Aug 10 2026 8:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ 7083 ಮೃತರ ಖಾತೆಗೆ ಹಣ
Aug 10 2026 5:27PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಜೈಲ್ ಭರೋ ಚಳುವಳಿ
Aug 8 2026 5:48PM | ವೈವಿಧ್ಯ | ವಿಷ್ಮಯ ಕವನ : ಪ್ರೀತಿ ಕೊಂದವಳು !
Aug 8 2026 8:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ 26 ಹುದ್ದೆಗಳಿಗೆ 3 ಸಾವಿರಕ್ಕೂ ಹೆಚ್ಚು ಅರ್ಜಿ




Copyright © 2026 Agni Divya. All Rights Reserved.
Designed & Developed by We Make Digitize