Advt. 
 Views   373

ಕೊಪ್ಪಳ : ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

Nov 07, 2025, 09:45 PM IST
ಕೊಪ್ಪಳ : ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

ಕೊಪ್ಪಳ : ಕೆಲ ತಿಂಗಳಿಂದ ಜಿಲ್ಲೆಯ ಕುಕನೂರು ತಾಲೂಕಿನ ಗಾವರಾಳ ಗ್ರಾಮದಲ್ಲಿ ರಾತ್ರಿ ವೇಳೆ ಸಂಚರಿಸುತ್ತ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಸಿಲುಕಿದೆ.

ಗ್ರಾಮದ ಹೊರವಲಯದ ಅಣ್ಣಪ್ಪ ಕಂಬಳಿ ಎಂಬುವವರ ತೋಟದ ಮನೆ ಬಳಿ ಪ್ರತಿದಿನ ರಾತ್ರಿಯೆಲ್ಲ ಅಲ್ಲಿಯೆ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಿಸಿತ್ತು.

ಇಂದು ಶನಿವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಅರಿವಳಿಕೆ ಮದ್ದು ನೀಡಿ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಗದಗ ಪ್ರಾಣಿ ಸಂಗ್ರಹಾಲಯದ ಅರಣ್ಯ ಸಿಬ್ಬಂದಿಯೂ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸೆರೆ ಸಿಕ್ಕಿರುವುದು ಹೆಣ್ಣು ಚಿರತೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.

ಗ್ರಾಮಸ್ಥರು ಕಳೆದ ಕೆಲವು ತಿಂಗಳುಗಳಿಂದ ಚಿರತೆಯ ಆತಂಕದಲ್ಲಿದ್ದರು. ಈಗ ಚಿರತೆ ಸೆರೆ ಸಿಕ್ಕಿದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Aug 16 2026 7:55AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಾಳಾದ ರಸ್ತೆ : ಸಚಿವರು ಶಾಸಕ ಸಂಸದರಿಗೆ ಪ್ರತಿಭಟನೆಯ ಬಿಸಿ
Aug 13 2026 7:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ 350 ಅಡಿ ತ್ರಿವರ್ಣ ಧ್ವಜದ ಮೆರವಣಿಗೆ
Aug 12 2026 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೊರ ರಾಜ್ಯಗಳಿಗೆ ನಿಗದಿ ಮಾಡಿದ ನಂತರ ನಮ್ಮ ರೈತರ ನೆನಪಾಯಿತೇ...?
Aug 11 2026 7:40PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಾಸಕರೆ ಸದನದಲ್ಲಿ ಸಮಸ್ಯೆ ಬಗ್ಗೆ ಚರ್ಚಿಸಿ : ಸಿವಿಸಿ
Aug 11 2026 6:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತುಂಗಭದ್ರಾ ಡ್ಯಾಂನಿಂದ ವಿವಿಧ ಕಾಲುವೆಗಳಿಗೆ ನೀರು
Aug 11 2026 5:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಚುನಾವಣಾ ತಯಾರಿ ಬಗ್ಗೆ SDPI ಸಂಘಟನಾ ಸಭೆ
Aug 10 2026 8:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ 7083 ಮೃತರ ಖಾತೆಗೆ ಹಣ
Aug 10 2026 5:27PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಜೈಲ್ ಭರೋ ಚಳುವಳಿ
Aug 8 2026 5:48PM | ವೈವಿಧ್ಯ | ವಿಷ್ಮಯ ಕವನ : ಪ್ರೀತಿ ಕೊಂದವಳು !
Aug 8 2026 8:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ 26 ಹುದ್ದೆಗಳಿಗೆ 3 ಸಾವಿರಕ್ಕೂ ಹೆಚ್ಚು ಅರ್ಜಿ




Copyright © 2026 Agni Divya. All Rights Reserved.
Designed & Developed by We Make Digitize