Advt. 
 Views   403

ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿಯವರಿಗೆ ಹೋರಾಟಗಾರರ ಪತ್ರ

Nov 07, 2025, 06:13 AM IST
ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿಯವರಿಗೆ ಹೋರಾಟಗಾರರ ಪತ್ರ

ಕೊಪ್ಪಳ ಜನರ ಪರವಾಗಿ ಜನಪ್ರತಿನಿಧಿಗಳನ್ನು ತಮ್ಮಲ್ಲಿಗೆ ಕರೆಯಿಸಿಕೊಂಡು ಕಾರ್ಖಾನೆ ವಿಸ್ತರಣೆ ರದ್ದುಗೊಳಿಸುವ ಆದೇಶ ತರಲು ಮತ್ತೊಮ್ಮೆ ಆಜ್ಞೆ ಮಾಡಬೇಕು. ಆದೇಶ ತರದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರೆ ಎಲ್ಲ ಸರಿ ಆಗುತ್ತದೆ.

ಹೀಗೆ ಪತ್ರ ಬರೆದದ್ದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿಯವರಿಗೆ. ಬರೆದವರು ಕಾರ್ಖಾನೆ ವಿರುದ್ದ ಅನಿರ್ದಿಷ್ಟ ಧರಣಿ ಆರಂಭಿಸಿರುವ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ.

ಈ ಪತ್ರವನ್ನು ಇಂದು ಶುಕ್ರವಾರ ಸಂಜೆ ಹೋರಾಟಗಾರರು ಶ್ರೀ ಗವಿಮಠಕ್ಕೆ ತಲುಪಿಸಿದ್ದಾರೆ. ಶ್ರೀಗಳು ಮೌನ ಅನುಷ್ಠಾನದಲ್ಲಿದ್ದಾರೆ. ಹಾಗಾಗಿ ಮಠದ ಕಚೇರಿಗೆ ಪತ್ರ ತಲುಪಿಸಿದ್ದಾರೆ.

ಪತ್ರದಲ್ಲಿ ಶ್ರೀಗಳಿಗೆ ಮಾಡಿರುವ ಮನವಿ ಮಠದ ಭಕ್ತರು ಹೋರಾಟ ಸಮಿತಿಗೆ ತಿಳಿಸಿದ್ದು ಅದನ್ನ ಪತ್ರ ರೂಪದಲ್ಲಿ ಸ್ವಾಮಿಜಿಯವರಿಗೆ ತಲುಪಿಸಿದ್ದಾರೆ.

ಫೆ. 24 ರಂದು ಸಾವಿರಾರು ಜನರ ಸಮ್ಮುಖದಲ್ಲಿ ( ರಾಘವೇಂದ್ರ ಹಿಟ್ನಾಳ ಬಸವರಾಜ ರಾಯರಡ್ಡಿ ಶಿವರಾಜ ತಂಗಡಗಿ) ಮೂವರು ಜನಪ್ರತಿನಿಧಿಗಳಿಗೆ BSPL ವಿಸ್ತರಣೆ ನಿಲ್ಲಿಸುವಂತೆ ಸರಕಾರದ ಆದೇಶ ತರುವಂತೆ ಹೇಳಿದ್ದೀರಿ ಒಪ್ಪಿಕೊಂಡ ಜನಪ್ರತಿನಿಧಿಗಳು ಈ ಕೆಲಸ ಮಾಡಿಲ್ಲ ಎಂದು ಪತ್ರದಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ ಸಮಿತಿಯವರು.

ಈ ಪತ್ರಕ್ಕೆ ಅಲ್ಲಮಪ್ರಭು ಬೆಟ್ಟದೂರು, ಮ.ಬ.ಗೋನಾಳ, ಮಹಾದೇವಪ್ಪ, ಯಲ್ಲಪ್ಪ , ಬಸವರಾಜ, ದುರುಗಪ್ಪ , ಎಸ್.ಬಿ.ರಾಜೂರು, ಇತರರು ಸಹಿ ಮಾಡಿದ್ದಾರೆ.

ಸಂಜೆ ಮಠದ ಕಚೇರಿಗೆ ಪತ್ರವನ್ನು ಅಲ್ಲಮಪ್ರಭು ಬೆಟ್ಟದೂರು ನೇತೃತ್ವದಲ್ಲಿ ತಲುಪಿಸಿದ್ದಾರೆ. ಸ್ವಾಮಿಜಿಯವರು ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಜನ ಕಾಯುತ್ತಿದ್ದಾರೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize