Advt. 
 Views   358

ಕೊಪ್ಪಳ : ಟಿಪ್ಪರ್ ಗಳ ಮಿತಿಮೀರಿದ ವೇಗಕ್ಕೆ ಓರ್ವ ಬಲಿ

Nov 06, 2025, 08:33 PM IST
ಕೊಪ್ಪಳ : ಟಿಪ್ಪರ್ ಗಳ ಮಿತಿಮೀರಿದ ವೇಗಕ್ಕೆ ಓರ್ವ ಬಲಿ

ಕೊಪ್ಪಳ : ಟಿಪ್ಪರ್ ಗಳ ರಾಕ್ಷಸ ವೇಗಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಗೌರಿ ಹುಣ್ಣಿಮೆ ನಿಮಿತ್ಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದ ಭಕ್ತ ಟಿಪ್ಪರ್ ನಿಂದಾಗಿ ಸಾವು ಕಂಡಿದ್ದಾರೆ.

ಈ ಘಟನೆ ತಾಲೂಕಿನ ಬೂದಗುಂಪಾ ಹತ್ತಿರ NH 50 ರಲ್ಲಿ ಆಗಿದ್ದು ಆಟೋಗೆ ಟಿಪ್ಪರ್ ಹಿಂದಿನಿಂದ ಡಿಕ್ಕಿ ಹೊಡೆದು ಬಸವರಾಜ ಕತ್ತಿ ಎಂಬುವವರು ಜೀವ ಕಳೆದುಕೊಂಡಿದ್ದಾರೆ. ಇವರು ಇಳಕಲ್ ನ ಗೊರೆಬಾಳನವರು.

ಗೌರಿ ಹುಣ್ಣಿಮೆ ಮುಗಿಸಿಕೊಂಡು ಸಂಬಂಧಿಕರ ಊರಾದ ಶಹಪುರದಲ್ಲಿ ಇದ್ದರು. ತಾಯಿ ಲಕ್ಷ್ಮವ್ವ ಜೊತೆ ಇಬ್ಬರು ಮಕ್ಕಳಾದ ಬಸವರಾಜ ಕತ್ತಿ ಮತ್ತು ಕೃಷ್ಣ ಕತ್ತಿ ಆಟೋದಲ್ಲಿ ವಾಪಸ್ ಊರಿಗೆ ಹೊರಟಿದ್ದರು.

ವಿಪರೀತ ವೇಗವಾಗಿ ಬಂದ ಟಿಪ್ಪರ್ ಆಟೋಗೆ ಡಿಕ್ಕಿ ಹೊಡೆದು ಆಟೋದಲ್ಲಿದ್ದ ಬಸವರಾಜ ಕತ್ತಿ ಕೆಳಗೆ ಬಿದ್ದಾಗ ಅವರ ಮೇಲೆ ಟಿಪ್ಪರ್ ಹೋಗಿ ಅವರು ಸ್ಥಳದಲ್ಲಿಯೆ ಸಾವಿಗೀಡಾಗಿದ್ದಾರೆ. ಉಳಿದವರು ಗಾಯಗೊಂಡಿದ್ದಾರೆ.

ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jul 10 2026 3:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೆಡಿಎಸ್ ಬರ ಅಧ್ಯಯನ ತಂಡಕ್ಕೆ CVC
Jul 10 2026 8:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಗ್ರಾಮಾಯಣ ಸಂಭ್ರಮ : ಅಭಿಮಾನಿಗಳೊಂದಿಗೆ ವಿನಯರಾಜಕುಮಾರ್
Jul 9 2026 4:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ
Jul 8 2026 7:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೂರಾರು ವಿದ್ಯಾರ್ಥಿಗಳ ಶಾಲೆಗೆ ಸಾಮೂಹಿಕ ಗೈರು
Jul 6 2026 8:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಸ್ರಾವನೆ ಲೋಪ : 8ನೇ ತರಗತಿಗಾಗಿ ವಿದ್ಯಾರ್ಥಿಗಳು ಪರದಾಟ
Jul 6 2026 5:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಲೆಯಾದಾತನ ಅಣ್ಣ - ಅಳಿಯ ಅರೆಸ್ಟ್
Jul 6 2026 1:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ಓರ್ವ ಸಾವು ಮೂವರು ಗಾಯ
Jul 5 2026 11:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿಗಿರಿಗಾಗಿ ಹೋರಾಟ ಜನರ ಸಮಸ್ಯೆಗೆ ಮೌನ : ಕ್ಯಾವಟರ್
Jul 4 2026 3:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಲ : ಒಂದೆ ಕುಟುಂಬದ ಮೂವರು ನೇಣಿಗೆ ಶರಣು
Jul 3 2026 12:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್




Copyright © 2026 Agni Divya. All Rights Reserved.
Designed & Developed by We Make Digitize