ಕೊಪ್ಪಳ : ಅಣ್ಣನೊಬ್ಬ ತನ್ನ ಅಪ್ರಾಪ್ತ ತಂಗಿಯನ್ನು ಮದುವೆಯಾಗ್ತೀನಿ ಅಂತ ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿಸಿದ ಘಟನೆ ಜರುಗಿದೆ.
ತಂಗಿ ಆಸ್ಪತ್ರೆಯಲ್ಲಿ ಮಗು ಹೆತ್ತ ಮೇಲೆ ಅಣ್ಣನ ಕೃತ್ಯ ಬಯಲಾಗಿದ್ದು ಪೋಕ್ಸೋ ಕೇಸ್ ಅಡಿ ಅಣ್ಣ ಜೈಲು ಸೇರಿದ್ದಾನೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ FIR ಕೂಡ ಆಗಿದೆ. ಮನೆಯಲ್ಲಿ ಯಾರೂ ಇಲ್ಲದಾಗ ಅಣ್ಣ ಅಪ್ರಾಪ್ತ ತಂಗಿಗೆ - ನಿನ್ನ ಮದುವೆ ಮಾಡ್ಕೊತೀನಿ, ನಿನ್ನ ಯಾವತ್ತೂ ಕೈಬಿಡಲ್ಲ. ಚೆನ್ನಾಗಿ ನೋಡ್ಕೋತೀನಿ ಯಾರೂ ನಿನಗೆ ಏನೂ ಅನ್ನಲಾರದಂಗ ನೋಡ್ಕೋತೀನಿ ಅಂತ ಗಂಡ ಹೆಂಡತಿ ಜೊತೆ ಮಾತಾಡಿದಂತೆ ಮಾತಾಡುತ್ತಿದ್ದನಂತೆ.
ಇದೆಲ್ಲ ಸಮಾಜ ಒಪ್ಪಲ್ಲ ಅಂತ ಅಪ್ರಾಪ್ತ ತಂಗಿ ಹೇಳಿದರೂ ಕೇಳದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಇದೆ ವರ್ಷ ಫೆಬ್ರುವರಿಯಿಂದ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ನಂತರ ಅಪ್ರಾಪ್ತ ತಂಗಿ ಮನೆಯಲ್ಲಿ ಇದೆಲ್ಲ ಹೇಳೋಕೆ ಪ್ರಯತ್ನಿಸಿದಾಗ ಅಣ್ಣ ತಲೆ ಒಡಕೊಳ್ಳೋದು, ನೇಣು ಹಾಕಿಕೊಳ್ಳೊಕೆ ಹೋಗೋದು, ಮನೆಯಲ್ಲಿ ಹೇಳಿದರೆ ಸಾಯ್ತೀನಿ ಅಂತ ಹೆದರಿಸುತ್ತಿದ್ದನಂತೆ.
ಅಕ್ಟೋಬರ್ 30 ರಂದು ಅಪ್ರಾಪ್ತೆಗೆ ಬೆನ್ನು ನೋವು ಕಾಣಿಸಿಕೊಂಡಾಗ ಆವತ್ತೆ ರಾತ್ರಿ ಆಸ್ಪತ್ರೆಗೆ ಕರೆತರಲಾಗಿದೆ. ಜೊತೆಗೆ ಈ ಅಣ್ಣನೂ ಬಂದಿದ್ದಾನೆ. ಚೆಕ್ ಅಪ್ ಮಾಡಿದಾಗ ಅಪ್ರಾಪ್ತೆ ಗರ್ಭಿಣಿ ಎಂದು ಗೊತ್ತಾಗಿದೆ. ಅಂದೆ ರಾತ್ರಿ ಹೆರಿಗೆ ಆಗಿದೆ.
ನವೆಂಬರ್ 3ರಂದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿ ಅಣ್ಣ ಪೋಕ್ಸೋ ಕೇಸ್ ಅಡಿ ಜೈಲು ಸೇರಿದ್ದಾನೆ.