ಕೊಪ್ಪಳದ MLA MP ಇಬ್ಬರೂ ಗುತ್ತಿಗೆದಾರರಿಗೆ ಸಮಸ್ಯೆ ತಂದೊಡ್ಡುತ್ತಿದ್ದಾರೆ. ಗುತ್ತಿಗೆ ವಲಯವನ್ನೂ ಕೈವಶ ಮಾಡಿಕೊಳ್ಳುವ ಅಜೆಂಡಾ ಇರಬಹುದಾ ?
MP ರಾಜಶೇಖರ ಹಿಟ್ನಾಳ ಪ್ರೇರಣಾ ಎಂಟರ್ ಪ್ರೈಸಸ್ ಮಾಡಿದ್ರೆ MLA ರಾಘವೇಂದ್ರ ಹಿಟ್ನಾಳ ಸರಕಾರಿ ಕಾಮಗಾರಿ KRIDL - ನಿರ್ಮಿತಿ ಕೇಂದ್ರಕ್ಕೆ ಕೊಡುತ್ತಿದ್ದಾರೆ ? ಒಟ್ಟಿನಲ್ಲಿ ಗುತ್ತಿಗೆದಾರರನ್ನು ಕನ್ಫೂಸ್ ಮಾಡಿಬಿಟ್ಟಿದ್ದಾರೆ.
MP ರಾಜಶೇಖರ ಹಿಟ್ನಾಳ ತಮ್ಮದೆ ಪ್ರೇರಣಾ ಸಂಸ್ಥೆ ಅಡಿಯಲ್ಲಿ ಎಲ್ಲ ಕ್ರಷರ್ ತೆಗೆದುಕೊಂಡಿದ್ದಾರೆ. ಅಂದ್ರೆ ಕಂಕರ್ ಸೇರಿದಂತೆ 8 ವಸ್ತು ಪ್ರೇರಣಾ ಸಂಸ್ಥೆ ಮೂಲಕವೆ ಹೇಳಿದ ರೇಟ್ ಗೆ ಖರೀದಿಸಬೇಕು. ಅದಕ್ಕೆ ಅಡ್ವಾನ್ಸ್ ದುಡ್ಡು ಪೇ ಮಾಡಬೇಕು ಅಂತ ಅಲಿಖಿತ ರೂಲ್ಸ್.
ಕಂಕರ್ ಮಾರೋರು ಬೇರೆ ಖರೀದಿ ಮಾಡೋರು ಬೇರೆ. ಅದರೆ ಹಣ ಮಾತ್ರ ರಾಜಶೇಖರ ಹಿಟ್ನಾಳರ ಪ್ರೇರಣಾಗೆ. ಇದರಿಂದ GST ಬಿಲ್ ಸಮಸ್ಯೆ ಆಗುತ್ತೆ ಅಂದ್ರೆ ಅದಕ್ಕೆ MP ಕೇರ್ ಲೆಸ್. ಇದರಿಂದ ಗುತ್ತಿಗೆದಾರರು ರೊಚ್ಚಿಗೆದ್ದರು. ಸಿಎಂ ಕಾರ್ಯಕ್ರಮ ಇದ್ದಿದ್ದರಿಂದ ಪ್ರತಿಭಟನೆ ಮಾಡಬೇಡಿ ಅಂತ ಅವರನ್ನು ಸಮಾಧಾನ ಮಾಡಲಾಗಿತ್ತು.
ನಂತರ 16.10.2025 ರಂದು ನಡೆದ ಸಭೆಯಲ್ಲಿ MLA ಹೇಳಿದ್ದು ಪ್ರೇರಣಾ ಮೂಲಕ ಖರೀದಿ ವ್ಯವಸ್ಥೆ ಕಾನೂನು ಸಮಸ್ಯೆ ತರುತ್ತೆ. ಅದಕ್ಕೆ ಮೊದಲಿನಂತೆ ಗುತ್ತಿಗೆದಾರರು ನೇರ ಕ್ರಷರ್ ಗಳಿಂದ ಖರೀದಿಸಬೇಕು ಎಂದು ಹೇಳಿದ್ರು. ಸಭೆಯಲ್ಲಿದ್ದ ಕ್ತಷರ್ ಮಾಲೀಕರು ಹೂಂ ಅಂದ್ರು ಗುತ್ತಿಗೆದಾರರು ಖುಷ್ ಆದ್ರು. ವಿಚಿತ್ರ ಅಂದ್ರೆ ಆವತ್ತು ಸಭೆಯಲ್ಲಿ ಪ್ರೇರಣಾದ ರಾಜಶೇಖರ ಹಿಟ್ನಾಳ ಇರಲೆ ಇಲ್ಲ !
ಆದರೀಗ ಕ್ರಷರ್ ಮಾಲೀಕರು ಮತ್ತೆ ಪ್ರೇರಣಾ ಮೂಲಕ ಖರೀದಿ ಮಾಡಬೇಕು ಅಂತ ಹಳೆ ನಿರ್ಧಾರವನ್ನೆ ಹೇಳುತ್ತಿದ್ದಾರಂತೆ. ಇದರಿಂದ ಮತ್ತೆ ಗುತ್ತಿಗೆದಾರರಿಗೆ ಸಂಕಷ್ಟ. MLA ಮತ್ತದೆ ಮಾತು - ಮಾತಾಡಿ ಬಗೆಹರಿಸ್ತೀನಿ !
-----------------
ಗುತ್ತಿಗೆದಾರರ ಇನ್ನೊಂದು ಬೇಡಿಕೆ - ಸರಕಾರಿ ಕಾಮಗಾರಿಗಳನ್ನು ಪ್ಯಾಕೇಜ್ ಟೆಂಡರ್ ಕರೆಯಬಾರದು. ಇದರಿಂದ ಗುತ್ತಿಗೆದಾರರಿಗೆ ಟೆಂಡರ್ ತಪ್ಪುತ್ತವೆ. ಎಸ್ಸಿ ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಗುತ್ತಿಗೆ ಕಾಮಗಾರಿಯಲ್ಲಿ ಮೀಸಲು ಸಿಗದಂತಾಗುತ್ತೆ.
ಆದರೆ MLA ಮಾತ್ರ ಪ್ಯಾಕೇಜ್ ಟೆಂಡರ್ ಅಥವಾ KRIDL - ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ಅಂತ ಫಿಕ್ಸ್ ಆಗಿಬಿಟ್ಟಿದ್ದಾರೆ. ನವೆಂಬರ್ 4-5 ರಂದು ಭೂಮಿ ಪೂಜೆ ಮಾಡಿದ ಅಳವಂಡಿ ಭಾಗದ ಎಲ್ಲ 24 ಕಾಮಗಾರಿಗಳನ್ನು KRIDL - ನಿರ್ಮಿತಿ ಕೇಂದ್ರಕ್ಕೆ ಕೊಟ್ಟಿದ್ದಾರೆ.
--------------
MP ರಾಜಶೇಖರ ಹಿಟ್ನಾಳರ ಪ್ರೇರಣಾ ಸಮಸ್ಯೆ ಬಗೆಹರಿಸೊ ನಾಟಕ ಮಾಡಿದ MLA ಗುತ್ತಿಗೆದಾರರಿಗೆ ಕೆಲಸ ಇಲ್ಲದಂತೆ ಮಾಡುತ್ತಿದ್ದಾರೆ. ಗುತ್ತಿಗೆದಾರರ ವಿಷಯದಲ್ಲಿ MLA - MP ನಡೆಯೆ ವಿಚಿತ್ರವಾಗಿದೆ.
ಈಗ ಮತ್ತೆ ಗುತ್ತಿಗೆದಾರರು ರೊಚ್ಚಿಗೆದ್ದಿದ್ದಾರೆ. ನ.12 ರಂದು ಜಿಲ್ಲಾಡಳಿತ ಭವನ ಮುಂದೆ Strike ಮಾಡಿ ಮರುದಿನ ನ. 13 ರಿಂದ ಎಲ್ಲ ಸರಕಾರಿ ಟೆಂಡರ್ ಕಾಮಗಾರಿ ಟೆಂಡರ್ ಬಂದ್ ಮಾಡ್ತಾರಂತೆ. ಆ ಮೂಲಕ MLA - MP ವಿರುದ್ದ ಸೆಡ್ಡು ಹೊಡೆಯಲು ಗುತ್ತಿಗೆದಾರರ ಸಂಘ ರೆಡಿಯಾಗಿದೆ.
ನ. 12 ಒಳಗೆ ಮತ್ತೆ ಏನೇನು ಆಗುತ್ತೊ ಕಾದು ನೋಡಬೇಕು !