ಕೊಪ್ಪಳ : ಗಂಗಾವತಿಯ ಬಿಜೆಪಿ ಮುಖಂಡ ವೆಂಕಟೇಶ ಕುರುಬರ ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ವೆಂಕಟೇಶ ಜೊತೆಗಿದ್ದ ಇಬ್ಬರು ಫ್ರೆಂಡ್ಸ್ ಕೂಡ ಕೊಲೆಯಲ್ಲಿ ಶ್ಯಾಮೀಲು ಎಂಬ ವಿಷಯ ಬಯಲಾಗಿದೆ.
ಕೊಲೆಯಲ್ಲಿ ಶ್ಯಾಮೀಲಾಗಿದ್ದ ಆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶರಣಬಸವ ಹಾಗೂ ಮಲ್ಲಿಕಾರ್ಜುನ ಎಂಬುವವರೆ ಬಂಧಿತ ಆರೋಪಿಗಳು.
ಅಕ್ಟೋಬರ್ 8 ರಂದು ಗಂಗಾವತಿ ನಗರದಲ್ಲಿ ಮಧ್ಯರಾತ್ರಿ ನಂತರ ವೆಂಕಟೇಶ ನಡು ರಸ್ತೆಯಲ್ಲಿ ಬರ್ಬರವಾಗಿ ಕೊಲೆಯಾಗಿದ್ದ.
ವೆಂಕಟೇಶಗೆ ಕ್ಲೋಸ್ ಫ್ರೆಂಡ್ಸ್ ಆಗಿದ್ದ ಶರಣಬಸವ ಹಾಗೂ ಮಲ್ಲಿಕಾರ್ಜುನ ಈ ಇಬ್ಬರೂ ವೆಂಕಟೇಶನ ಜೊತೆಗೆ ಇದ್ದುಕೊಂಡೆ ಕೊಲೆಯ ಮಾಸ್ಟರ್ ಮೈಂಡ್ ರವಿಗೆ ಮಾಹಿತಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಕೊಲೆ ನಡೆದ ನಂತರ ಒಂದು ಆಡಿಯೋ ರೆಕಾರ್ಡ್ ಹೊರ ಬಂತು. ಅದು ಕೊಲೆ ಮುಂಚೆ ರವಿ ಹಾಗೂ ವೆಂಕಟೇಶ ನಡುವೆ ನಡೆದಿದ್ದ ಕಾಲ್ ರೆಕಾರ್ಡಿಂಗ್. ಅದರಲ್ಲಿ ರವಿ ನೇರವಾಗಿ ನೀನು ಸಾಕಿದವರೆ ಬಗ್ಗೆ ಎಚ್ಚರ ಇರು ಎಂದು ಅಂದ್ರೆ ನನ್ನ ಪರ ಇರೋರು ನಿನ್ನ ಗ್ಯಾಂಗ್ ನಲ್ಲಿ ಇದ್ದಾರೆ ಎಂಬರ್ಥದಲ್ಲಿ ಹೇಳಿದ್ದ.
ಈಗ ಶರಣಬಸವ ಹಾಗೂ ಮಲ್ಲಿಕಾರ್ಜುನ ಇಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.