ಕೊಪ್ಪಳ : ಸ್ಥಳೀಯವಾಗಿ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಸರಕಾರದ ಯಾವುದೇ ಮಧ್ಯಸ್ಥಿಕೆ ಇರುವುದಿಲ್ಲ. ರಾಜ್ಯ ಸರಕಾರ ನೆಲ - ಜಲ ಮತ್ತು ಇತರೆ ಸಂಬಂಧಿತ ಅನುಮತಿ ಕೊಟ್ಟ ಮೇಲೆ ಕೇಂದ್ರ Environment clearence ಕೊಡುತ್ತೆ. ಕಾರ್ಖಾನೆ ವಿಷಯದಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ.ವಿ.ಚಂದ್ರಶೇಖರ ಹೇಳಿದರು.
ಕೊಪ್ಪಳ ಬಚಾವೋ ಆಂಂದೋಲನ ಸಮಿತಿ ಕಾರ್ಖಾನೆ ವಿಸ್ತರಣೆ, ಮತ್ತು ಹೊಸ ಕಾರ್ಖಾನೆ ಅನುಮತಿ ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿಯಲ್ಲಿ ರವಿವಾರ ಪಾಲ್ಗೊಂಡು ಸಿವಿಸಿ ಮಾತನಾಡಿದರು.
ಈ ಹಿಂದೆ ಕಾರ್ಖಾನೆ ವಿರುದ್ದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತು ಕೊಟ್ಟಂತೆ ಕೊಪ್ಪಳ ಬಗ್ಗೆ ಕಾಳಜಿಯಿಂದ ಕಾರ್ಖಾನೆ ವಿಸ್ತರಣೆ ಬಂದ್ ಮಾಡಿಸಿ. ಆಗ ನಾವು ಕೂಡ ನಿಮಗೆ ಬೆನ್ನು ತಟ್ಟಿ ನಿಮ್ಮ ಮನೆಗೆ ಬಂದು ದೀಡ ನಮಸ್ಕಾರ ಹಾಕುತ್ತೇವೆ ಎಂದು ಶಾಸಕರು ಸಂಸದರು ಸಚಿವರಿಗೆ ಕರೆ ಕೊಟ್ಟರು.
ಕೇಂದ್ರದ ಅನುಮತಿ ಬಗ್ಗೆ ಕೇಂದ್ರದ ಸಚಿವರಾದ ಕುಮಾರಣ್ಣ ಅವರಿಗೆ ಕೇಳಿದಾಗ ಈ ಬಗ್ಗೆ ಕೇಂದ್ರದ ಪಾತ್ರ ಇರುವುದಿಲ್ಲ. ರಾಜ್ಯ ಸರಕಾರ ಅನುಮತಿ ಕೊಟ್ಟ ಮೇಲೆ ಕೇಂದ್ರ ಗೈಡ್ ಲೈನ್ ಕೊಡುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.
ಈಗ ನಿಮ್ಮದೆ ಸರಕಾರ ನಿಮ್ಮವರೆ ಮುಖ್ಯಮಂತ್ರಿ ಇದ್ದಾರೆ. ವಿಸ್ತರಣೆ ಬಂದ್ ಮಾಡಿಸೋದು ನಿಮಗೆ ದೊಡ್ಡ ಕೆಲಸ ಅಲ್ಲ. ಬರಿ ಕೇಂದ್ರದತ್ತ , ಇನ್ನೊಬ್ಬರತ್ತ ಬೊಟ್ಟು ತೋರಿಸೋದು ಬಿಟ್ಟು ಬಿಡಿ ಎಂದು ಶಾಸಕರು ಸಂಸದರು ಸಚಿವರಿಗೆ ಕಿವಿಮಾತು ಹೇಳಿದರು.
ಕಳೆದ 30 ವರ್ಷಗಳಿಂದ ಕೊಪ್ಪಳ ಆಳಿದಂಥ ಜನಪ್ರತಿನಿಧಿಗಳಿಗೆ ದೂರದೃಷ್ಟಿ , ಇಚ್ಚಾಶಕ್ತಿ, ಜನರ ಬಗ್ಗೆ ಕಾಳಜಿಯ ಕೊರತೆಯಿಂದ ಮತ್ತು ಭ್ರಷ್ಟ ಅಧಿಕಾರಿಗಳಿಂದ ಕೊಪ್ಪಳಕ್ಕೆ ಇಂಥ ಪರಿಸ್ಥಿತಿ ಬಂದಿದೆ ಎಂದು ಸಿ.ವಿ. ಚಂದ್ರಶೇಖರ ಹೇಳಿದರು.
ಈ ಸಂದರ್ಭದಲ್ಲಿ ಯಲಬುರ್ಗಾ ಮುಖಂಡರಾದ ಮಲ್ಲನಗೌಡ ಕೋನನಗೌಡ, ನಗರ ಘಟಕದ ಅಧ್ಯಕ್ಷರು ಸೋಮನಗೌಡ ಹೊಗರನಾಳ ಹಾಗೂ ಮುಖಂಡರು ಉಪಸ್ಥಿತರಿದ್ದರು.