ಕೊಪ್ಪಳ : ನಗರದ 4ನೆ ವಾರ್ಡ್ ನಲ್ಲಿ ನ. 1ರಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಯಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಮಾತನಾಡಿದ SDPI ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಸಲೀಂ ಖಾದ್ರಿ - ಕನ್ನಡ ಒಂದು ಭಾಷೆಯಷ್ಟೇ ಅಲ್ಲ ಅದು ನಮ್ಮೆಲ್ಲ ಕನ್ನಡಿಗರ ಅಸ್ಮಿತೆ. ಭಾರತದಲ್ಲಿರುವ ಎಲ್ಲಾ ಭಾಷೆಗಳ ರಾಣಿ ಎಂದೇ ಹೆಮ್ಮೆಯಿಂದ ಕರೆಸಿಕೊಳ್ಳುವ ಸುಂದರ ಭಾಷೆ ನಮ್ಮ ಕನ್ನಡ. 1956ರ ನವೆಂಬರ್ 1ರಂದು ನಮ್ಮ ರಾಜ್ಯ ಉದಯ ಆಯ್ತು. ಇದರ ಸವಿನೆನಪಿಗಾಗಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಬರಲಾಗುತ್ತದೆ.
ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಎಸ್.ಡಿ.ಪಿ.ಐ ಪಕ್ಷ ಸಂಕಲ್ಪ ಮಾಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ SDPI ಪಕ್ಷದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಹಕಾರ್ಯದರ್ಶಿ ಅರ್ಷಾದ್ ಶೈಖ್, ಅಬ್ದುಲ್ ಖಾದರ್ ಪೀರ್ಜಾದೆ, ಬ್ರಾಂಚ್ ಕಮಿಟಿಯ ಕಾರ್ಯದರ್ಶಿ ತಬರೆಜ್, ಉಪಾಧ್ಯಕ್ಷರು ಇಮ್ತಿಯಾಜ್ ಖಾಜಿ, ಖಜಾಂಚಿ ತೌಸಿಫ್ ಆಲುಗಡ್ಡೆ, ಪಲ್ಟನ್ ಪಂಚ್ ಕಮಿಟಿ ಅಧ್ಯಕ್ಷರು ಜಾಫರ್ ಸಂಗಟಿ, ಕಾರ್ಯದರ್ಶಿ ಸುಲೇಮಾನ್ ಮೇಸ್ತ್ರಿ, ಗೌಸ್ ಮೋಹಿದ್ದೀನ್, ಮೆಹಬೂಬ್ ನಾಲ್ಬಂದ್, ಪಕ್ಷದ ಕಾರ್ಯಕರ್ತರು ಮತ್ತು ಶಾಲಾ ಮಕ್ಕಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.