Advt. 
 Views   381

ಕೊಪ್ಪಳ ಮೂಲಕ ಹುಬ್ಬಳ್ಳಿ ಬೆಂಗಳೂರಿಗೆ ಹೊಸ 6 ರೈಲುಗಳಿಗಾಗಿಗೆ ಮನವಿ

Oct 29, 2025, 08:35 AM IST
ಕೊಪ್ಪಳ ಮೂಲಕ ಹುಬ್ಬಳ್ಳಿ ಬೆಂಗಳೂರಿಗೆ ಹೊಸ 6 ರೈಲುಗಳಿಗಾಗಿಗೆ ಮನವಿ

ಕೊಪ್ಪಳ : ಕೊಪ್ಪಳ ಹೊಸಪೇಟೆ ಮೂಲಕ ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ಹೊಸದಾಗಿ ಆರು ರೈಲುಗಳನ್ನು ಓಡಿಸಲು ಮತ್ತು ಬೆಂಗಳೂರು ಹೊಸಪೇಟೆ ಬೆಂಗಳೂರು ರೈಲನ್ನು ಕುಷ್ಟಗಿವರೆಗೆ ವಿಸ್ತರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಮನವಿಯನ್ನು ರೈಲ್ಹೆ ಜನಪರ ಹೋರಾಟ ಸಮಿತಿ ಸಲ್ಲಿಸಿದೆ.

ಮಂಗಳವಾರ ಕೊಪ್ಪಳ ರೈಲು ನಿಲ್ದಾಣ ಪ್ರಬಂಧಕರ ಮೂಲಕ ಹುಬ್ಬಳ್ಳಿ ನೈರುತ್ಯ ರೈಲ್ಬೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದೆ.

ಗದಗ ವಾಡಿ ಮಾರ್ಗ ಬೇಗ ಪೂರ್ಣಗೊಳಿಸಬೇಕು.
ಹುಬ್ಬಳ್ಳಿಯಿಂದ ಕೊಪ್ಪಳ ಮೂಲಕ ಬೀದರಿಗೆ ನಿತ್ಯ ಇಂಟರ್ ಸಿಟಿ ರೈಲು ಪ್ರಾರಂಭಿಸಬೇಕು. ನಿತ್ಯ ಬೆಳಿಗ್ಗೆ 8.30 ಕ್ಕೆ ಬಳ್ಳಾರಿಯಿಂದ ಹುಬ್ಬಳ್ಳಿಗೆ. ಮಧ್ಯಾಹ್ನ 2:30ಕ್ಕೆ ಹುಬ್ಬಳ್ಳಿಯಿಂದ ಬಳ್ಳಾರಿಗೆ ಡೆಮೋ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕು.

ಯಶವಂತಪುರದಿಂದ ಗಿಣಿಗೇರಿ ಮೂಲಕ ಸಿಂಧನೂರಿಗೆ ಸಂಚರಿಸುವ ರೈಲು ಕೊಪ್ಪಳಕ್ಕೆ ಬಂದು ಹೋಗಬೇಕು.
ಸಿಂಧನೂರು ಟು ಬೆಂಗಳೂರು ಹೊಸ ಎಕ್ಸ್ ಪ್ರೆಸ್ ರೈಲು ಆರಂಭಿಸಬೇಕು.

ಈ ಮುಂಚೆ ಸಂಚರಿಸುತ್ತಿದ್ದ ಬೆಳಗಾವಿ ಟು ಮುನಗುರ ರೈಲು ಮತ್ತೆ ಆರಂಭಿಸಬೇಕು. ವಿಜಯಪುರದಿಂದ ತಿರುಪತಿಗೆ. ಗಂಗಾವತಿಯಿಂದ ಆಯೋಧ್ಯಗೆ ಹೊಸ ರೈಲು ಆರಂಭಿಸಬೇಕು. ಸೋಲ್ಲಾಪುರ ಹೊಸಪೇಟೆ ಸೋಲ್ಲಾಪುರ ಡೆಮೋ ಎಕ್ಸ್ ಪ್ರೆಸ್ ರೈಲು, ಹುಬ್ಬಳ್ಳಿ. ವಿಜಯವಾಡ. ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲುಗಳು ಮತ್ತೆ ಪ್ಯಾಸೆಂಜರ್ ರೈಲು ಆಗಬೇಕು.

ಕೊಪ್ಪಳದ ಸಿದ್ದೇಶ್ವರ ನಗರ, ಬೇಲ್ದಾರ್ ಕಾಲೋನಿ ಮತ್ತು ಹೊಸ ಲೇಔಟ್ ಆಗುತ್ತಿದ್ದು ನಿರ್ಮಾಣಗೊಳ್ಳುತ್ತಿವೆ. ಮುಖ್ಯ ರಸ್ತೆಯ ಎಂ.ಆರ್.ಎಫ್. ಟೈಯರ್ ಶೋರೂಮನ ಪಕ್ಕದ ರಸ್ತೆ ಮುಖಾಂತರ ಹೊಸ ಕೆಳ ಕಿರು ಸೇತುವೆ ನಿರ್ಮಿಸಬೇಕು. ಗೇಟ್ ನಂಬರ್ 63 ರ ಕೆಳ ಸೇತುವೆ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದು ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ. ರೈಲ್ವೆ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ.ಗಫಾರ್. ಗೌರವ ಅಧ್ಯಕ್ಷ ಅಲ್ಲಮ ಪ್ರಭು ಬೆಟ್ಟದೂರು. ಬಸವರಾಜ್ ಶೀಲವಂತರ್. ಚನ್ನಬಸಪ್ಪ ಅಪ್ಪಣವರ್. ಮಖಬೂಲ್ ರಾಯಚೂರು. ಶಿವಪ್ಪ ಹಡಪದ್. ಕೆ.ಬಿ. ಗೋನಾಳ. ಗಾಳೆಪ್ಪ ಮುಂಗೋಲಿ. ಸುಂಕಪ್ಪ ಮೀಸಿ. ಭೀಮಪ್ಪ. ಮಂಜುನಾಥ್. ದುರ್ಗಪ್ಪ. ಮುತ್ತುರಾಜ್ ಚನ್ನದಾಸರ. ಸುರೇಶ್ ಹಮ್ಮನವರ ಮುಂತಾದವರು ಇದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Oct 15 2026 3:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ಟೋಬರ್ 16 ABVP ಬೃಹತ್ ಪ್ರತಿಭಟನೆ
Oct 14 2026 3:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿ ಡಿಕ್ಕಿಯಿಂದ ಬೈಕ್ ಸವಾರ ಸಾವು
Oct 14 2026 3:20PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಂಜನಾದ್ರಿ ಬೆಟ್ಟ : ವಿದ್ಯಾದಾಸ ಬಾಬಾ ವಿರುದ್ದ FIR
Oct 13 2026 8:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಸಿಲುಕುತ್ತಿದ್ದ ರೈತ : ನೇಣಿಗೆ ಯತ್ನಿಸಿದ ರೈತ ಮಹಿಳೆ
Oct 12 2026 7:00PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜಕೀಯದ ಮೂಲಕ ಗೌಡರ ಹೊಸ ಇನ್ನಿಂಗ್ಸ್
Oct 12 2026 5:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ದಂಪತಿಗೆ ಗಂಭೀರ ಗಾಯ
Oct 11 2026 4:24PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದಸರಾ ವೇದಿಕೆಯಲ್ಲಿ ಪರಿಸರದ ಕಳಕಳಿ
Oct 9 2026 7:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದಸರಾ ಉದ್ಘಾಟಿಸಲಿದ್ದಾರೆ ಗವಿಶ್ರೀಗಳು : ಮುಸ್ಲಿಂ ಸಮುದಾಯದಿಂದ ಅಭಿನಂದನೆ
Oct 9 2026 8:22AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಜಾತಿ ನಿಂದನೆ ಪ್ರಕರಣ : ಪ್ರತಿದೂರು ದಾಖಲು
Oct 8 2026 8:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶ್ರೀ ಹುಲಿಗೆಮ್ಮ ದೇವಿ ಹುಂಡಿ ಎಣಿಕೆ: ₹47.45 ಲಕ್ಷ ಸಂಗ್ರಹ




Copyright © 2026 Agni Divya. All Rights Reserved.
Designed & Developed by We Make Digitize