ಕೊಪ್ಪಳ : ನಿನ್ನೆ ಬೆಣಕಲ್ ನಲ್ಲಿ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿರುವ ಲಕ್ಷ್ಮಿ ಹಾಗೂ ಅದೇ ಗ್ರಾಮದ ಬೀರಪ್ಪ ಎಂಬುವವರ ವಿರುದ್ದ ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಲಕ್ಷ್ಮಿ ತಾಯಿ ಬಸಮ್ಮ ನೀಡಿದ ದೂರಿನಂತೆ ಕುಕನೂರು ಪೊಲೀಸ್ ಠಾಣೆಯಲ್ಲಿ FIR ಆಗಿದೆ.
ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಲಕ್ಷ್ಮಿ ಹಾಗೂ ಅದೆ ಗ್ರಾಮದ ಬೀರಪ್ಪ ನಡುವೆ ಅನೈತಿಕ ಸಂಬಂಧ ಇತ್ತು. ಇದು ಗೊತ್ತಾಗಿ ಕುಟುಂಬದಲ್ಲಿ ಬುದ್ದಿವಾದ ಹೇಳಿದರೂ ಸಂಬಂಧ ಮುಂದುವರೆದಿತ್ತು.
ಆತ್ಮಹತ್ಯೆಗೆ ಒಂದು ದಿನ ಮುಂಚೆ ಲಕ್ಷ್ಮಿ ಗೆ ಬೀರಪ್ಪನ ಸಂಗ ಬೀಡುವಂತೆ ಹೇಳಲಾಗಿತ್ತು. ಆದರೆ ಮರುದಿನ ಬೀರಪ್ಪ ನಿನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು ಬಾ ನಾನು ಕರೆದುಕೊಂಡು ಹೋಗುತ್ತೇನೆ ಇಬ್ಬರು ಸೇರಿ ಜೀವನ ಮಾಡೋಣ ಅಂತ ಒತ್ತಾಯಿಸಿದ್ದಾನೆ. ಅಲ್ಲದೆ ನೀನು ಬರದಿದ್ದರೆ ನಿನ್ನ ಸಾಯಿಸಿ ನಾನೂ ಸಾಯ್ತೀನಿ ಅಂದಿದ್ದಾನೆ ಬೀರಪ್ಪ.
ಇದು ಲಕ್ಷ್ಮಿ ಕುಟುಂಬಕ್ಕೆ ಗೊತ್ತಾಗಿ ಈ ಬಗ್ಗೆ ಬುದ್ದಿವಾದ ಹೇಳಿದರಾಯ್ತು ಅಂದುಕೊಂಡ ದಿನ ಮಧ್ಯಾಹ್ನ ಲಕ್ಷ್ಮಿ ತನ್ನಿಬ್ಬರು ಮಕ್ಕಳನ್ನು ಸಾಯಿಸಿ ತಾನು ನೇಣಿಗೆ ಶರಣಾಗಿದ್ದಾಳೆ.
ನೀನು ಬರದಿದ್ದರೆ ನಿನ್ನ ಸಾಯಿಸಿ ನಾನು ಸಾಯ್ತೀನಿ ಅಂದಿದ್ದಕ್ಕೆ ಬೀರಪ್ಪ ನನ್ನನ್ನು ಬೀಡುವುದಿಲ್ಲ ನನ್ನ ಮಕ್ಕಳು ಅನಾಥ ಆಗ್ತವೆ ಎಂದು ಹೆದರಿ ಲಕ್ಷ್ಮಿ ಮಕ್ಕಳನ್ನು ಸಾಯಿಸಿ ನೇಣಿಗೆ ಶರಣಾದರೆ ಬೀರಪ್ಪ ಜೈಲಿಗೆ ಹೋದ.
ಲಕ್ಷ್ಮಿ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.