ಕೊಪ್ಪಳ : ಜಿಲ್ಲೆಯಲ್ಲಿ ದುರಂತಗಳ ಸರಮಾಲೆ ಆರಂಭವಾಗಿದೆಯಾ ?
29 ವರ್ಷದ ವ್ಯಕ್ತಿ ರವಿವಾರ ರಾತ್ರಿ ತೋಟದ ಮನೆಯಲ್ಲಿ ತನಗೆ ತಾನೆ ಗುಂಡು ಹೊಡೆದುಕೊಂಡ ಘಟನೆ ಕುಕನೂರು ತಾಲೂಕು ಚಿಕ್ಕಬಿಡನಾಳನಲ್ಲಿ ಜರುಗಿತು.
ಮರುದಿನ ಸೋಮವಾರ ಕುಕನೂರು ತಾಲೂಕಿನ ಬೆಣಕಲ್ ನಲ್ಲಿ ತನ್ನ ಎರಡು ಮಕ್ಕಳನ್ನು ಸಾಯಿಸಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ದುರಂತ ನಡೆಯಿತು.
ಇಂದು ಮಂಗಳವಾರ ಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಈ ಘಟನೆ ಕುಷ್ಟಗಿ ತಾಲೂಕಿನ ಹೊಮ್ಮಿನಾಳದಲ್ಲಿ ಜರುಗಿದೆ.
ಮೃತ ವಿದ್ಯಾರ್ಥಿಗಳನ್ನು 6 ನೇ ತರಗತಿ ವಿದ್ಯಾರ್ಥಿ ಹನುಮೇಶ ( 12) , 8 ನೇ ತರಗತಿ ವಿದ್ಯಾರ್ಥಿ ಯಮನೂರಪ್ಪ (14) ಎಂದು ಗುರುತಿಸಲಾಗಿದೆ.
ಇವರ ಜಮೀನು ಹತ್ತಿರ ಇರುವ ಕೆರೆಯಲ್ಲಿ ಈ ಇಬ್ಬರೂ ಈಜಲು ಹೋದಾಗ ಒಬ್ಬರ ಕಾಲು ಕೆರೆಯಲ್ಲಿ ಸಿಲುಕಿಕೊಂಡಿದೆ. ಆಗ ಇನ್ನೊಬ್ಬಾತ ಉಳಿಸಲು ಹೋಗಿ ಆತನೂ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.