ಕೊಪ್ಪಳ : ಕುಡಿದಾಗ ಜಗಳ ಆಡ್ತಾರೆ ಅನ್ನೋದನ್ನು ಸಹಜ. ಕುಡಿದಾಗ ಜಗಳ ಸಂದರ್ಭ ಕೈಯಲ್ಲಿ ಪಿಸ್ತೂಲ್ ಅಥವಾ ಬಂದೂಕು ಇದ್ರೆ ಎದುರಿನವರನ್ನು ಢಂ ಅನ್ನಿಸಿದ ಸುದ್ದಿಯೂ ಓದಿರುತ್ತೀರಿ.
ಆದರೆ ಇದು ಉಲ್ಟಾ ಕೇಸ್ ! ಈತ ಕುಡಿದಾಗ ತನ್ನ ಎದೆಯ ಸ್ವಲ್ಪ ಮೇಲ್ಭಾಗದಲ್ಲಿ ತಾನೆ ಗುಂಡು ಹೊಡಕೊಂಡಿದ್ದಾನೆ.
ಈತನೆ ಆನಂದ ಪೊಲೀಸ್ ಪಾಟೀಲ್. ಈ ಘಟನೆ ಕುಕನೂರು ತಾಲೂಕಿನ ಚಿಕ್ಕ ಬಿಡನಾಳನ ತೋಟದ ಮನೆಯಲ್ಲಿ ರವಿವಾರ ರಾತ್ರಿ ನಡೆದಿದೆ. ಆಘಾತಕಾರಿ ಅಂಶ ಅಂದ್ರೆ ಈತನ ಹತ್ತಿರ ಇರುವ ನಾಡ ಬಂದೂಕಿಗೆ ಅನುಮತಿಯೆ ಇಲ್ಲ.
ಗುಂಡು ಹಾಕಿ ಗುಂಡು ಹೊಡಕೊಂಡ ಆನಂದ ಗಂಭೀರ ಗಾಯದಿಂದ ಈಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಲಬುರ್ಗಿ ಕಡೆಯವರು ಎನ್ನಲಾಗುತ್ತಿರುವ ಆನಂದ್ ಕೌಟುಂಬಿಕವಾಗಿ ಹೆಂಡತಿ, ತಾಯಿ ಮತ್ತು ತಂದೆಯಿಂದ ಸಂಫೂರ್ಣ ದೂರವಾಗಿ ಚಿಕ್ಕಬಿಡನಾಳನ ತೋಟದ ಮನೆಯಲ್ಲಿ ವಾಸವಿದ್ದಾನೆ.
ನಾಡ ಬಂದೂಕಿಗೆ ಸೈಕಲ್ ನ ಚಾರ ತುಂಬಿ ತನ್ನ ಎದೆಗೆ ಹಾರಿಸಿಕೊಂಡಿದ್ದಾನೆ. ಆದರೆ ಈತನಿಗೆ ಅಕ್ರಮ ಶಸ್ತಾಸ್ತ್ರ ಕೊಟ್ಟಿದ್ದು ಯಾರು ? ಅಥವಾ ಈತನೆ ಖರೀದಿಸಿ ತಂದಿದ್ದಾನಾ ? ಖರೀದಿಸಿದ್ದರೆ ಅದು ಖರೀದಿ ಆಗಿದ್ದು ಎಲ್ಲಿ ? ಈತನಂತೆ ಜಿಲ್ಲೆಯ ಎಷ್ಟುಜನರ ಬಳಿ ಹೀಗೆ ಅಕ್ರಮ ಪಿಸ್ತೂಲ್ ಅಥವಾ ಬಂದೂಕು ಇರಬಹುದು ಎಂಬ ಅನುಮಾನಗಳು ಈಗ ಹುಟ್ಟಿವೆ.
ಆನಂದ ಪೊಲೀಸ್ ಪಾಟೀಲ್ ಯಾವುದೇ ಶಸ್ತ್ರಾಸ್ತ್ರ ಅನುಮತಿ ಪಡೆದಿಲ್ಲ ಎಂದು ಕುಕನೂರು ತಹಶಿಲ್ದಾರರು ಖಚಿತ ಪಡಿಸಿದ್ದು ಹಾಗಾಗಿ ಇದು ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡ ಪ್ರಕರಣ ಮತ್ತು ಗುಂಡು ಹೊಡಕೊಂಡ ಪ್ರಕರಣ ಎಂಬುದು ಖಚಿತವಾಗಿದೆ.
ಗುಂಡು ಹೊಡಕೊಂಡ ಕಾರಣ ಮತ್ತು ಈತನಿಗೆ ನಾಡ ಬಂದೂಕು ಸಿಕ್ಕಿದ್ದು ಎಲ್ಲಿ ? ಯಾರಿಂದ ? ಎಂಬುದು ವಿಚಾರಣೆಯಿಂದ ಗೊತ್ತಾಗಬೇಕಿದೆ.