ಕೊಪ್ಪಳ : ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ ಇಂದು ಜರುಗಿದೆ.
ಹೆತ್ತು ಪೋಷಿಸಿ ತುತ್ತು ಕೊಟ್ಟು ಬೆಳೆಸಿದ ತಾಯಿಯೆ ತನ್ನ ಎರಡೂ ಮಕ್ಕಳನ್ನು ಕೊಂದಿದ್ದಾಳೆ. ಅಷ್ಟೇ ಅಲ್ಲ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಹೃದಯ ವಿದ್ರಾವಕ ಘಟನೆ ನಡೆದಿರೋದು ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ. ಕೊಪ್ಪಳ ಕುಕನೂರು ಹೆದ್ದಾರಿಯಲ್ಲಿ ನಿಟ್ಟಾಲಿ ಕ್ರಾಸ್ ನಿಂದ ನಾಲ್ಕು ಕಿ.ಮೀ ದೂರದಲ್ಲಿದೆ ಬೆಣಕಲ್.
ಈ ಗ್ರಾಮದ ಲಕ್ಷ್ಮವ್ವ ಎಂಬ ತಾಯಿ ತನ್ನೇರಡು ಮಕ್ಕಳಾದ ನಾಲ್ಕು ವರ್ಷದ ರಮೇಶ ಮತ್ತು ಎರಡು ವರ್ಷದ ಜಾನು ಎಂಬುವವರನ್ನು ಕುತ್ತಿಗೆಗೆ ಅರಿವೆಯಿಂದ ಬಿಗಿದು ಸಾಯಿಸಿ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೌಟುಂಬಿಕ ಕಲಹ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ತನಿಖೆಯಿಂದ ಹೆಚ್ಚಿನ ವಿವರ ತಿಳಿದು ಬರಬೇಕಿದೆ.