ಕೊಪ್ಪಳ : ದೂರದಿಂದ ರೈಲು ನೋಡಲು ಬಲುಚೆಂದ. ರೈಲು ಪ್ರಯಾಣ ಬಹಳ ಆರಾಮದಾಯಕ. ಆದರೆ ರೈಲು ಬರುವಾಗ ಹಳಿ ಪಕ್ಕ ನಿಂತರೆ ಅದರ ವೇಗ ಅದರ ಶಬ್ದಕ್ಕೆ ಎಂಥ ಧೈರ್ಯವೂ ಸ್ವಲ್ಪ ಅಧೀರ ಆಗುವುದು ಖಚಿತ.
ಅಂಥ ದೈತ್ಯ ರೈಲು ವೇಗದಲ್ಲಿ ಚಲಿಸುವಾಗ ಯುವಕನೊಬ್ಬ ಹಳಿಗೆ ಗೋಣು ಇಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಬೆಳಗ್ಗೆ ಜರುಗಿದೆ.
ಘಟನೆಯು ರೈಲು ನಿಲ್ದಾಣದ ಪಶ್ಚಿಮಕ್ಕೆ ಅಂದ್ರೆ ಗದಗ ಕಡೆಯಿಂದ ಬರುವ ಮಾರ್ಗದಲ್ಲಿ ಅದೂ ರೈಲು ನಿಲ್ದಾಣಕ್ಕೆ ಎಂಟ್ರಿ ಆಗುವ ಸ್ಥಳದಲ್ಲಿ ನಡೆದಿದೆ.
ಹಳಿಗೆ ತಲೆಕೊಟ್ಟು ಜೀವ ಬಿಟ್ಟ ಯುವಕನ ಹೆಸರು ವಿನೋದ ಎಂದು ತಿಳಿದು ಬಂದಿದೆ. ವಯಸ್ಸು ಅಂದಾಜು 24. ಮೂಲತಃ ಕಂಪ್ಲಿ ಹತ್ತಿರದ ಸುಗ್ಗೆನಹಳ್ಳಿಯ ಯುವಕ ಎಂದು ತಿಳಿದು ಬಂದಿದೆ.
ಬೆಳಗ್ಗೆ ಹುಬ್ಬಳ್ಳಿಯಿಂದ ಸಿಂಧನೂರಿಗೆ ತೆರಳುವ ರೈಲಿಗೆ ತಲೆಕೊಟ್ಟು ಈ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೈಲು ಬರುವಾಗ ಹಳಿಗೆ ಕತ್ತು ಇಟ್ಟು ಮಲಗಿದ್ದು ರೈಲು ಚಲಿಸಿ ದೇಹದಿಂದ ರುಂಡ ಬೇರ್ಪಡಿಸಿದ ದುರ್ಘಟನೆ ನಡೆದಿದೆ.