ಕೊಪ್ಪಳ : ಗಂಗಾವತಿಯ ಬಿಜೆಪಿ ಮುಖಂಡ ವೆಂಕಟೇಶ ಕುರುಬರ ಕೊಲೆ ಪ್ರಕರಣದ ಪ್ರಮುಖ ಆರೋಪಿ ರವಿ ಮತ್ತು ಗಂಗಾಧರ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇವರಿಬ್ಬರ ಅರೆಸ್ಟ್ ನಂತರ ವೆಂಕಟೇಶ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆದವರ ಸಂಖ್ಯೆ 10ಕ್ಕೆರಿದೆ. ಗಂಗಾವತಿಯಲ್ಲಿ ಅ. 8 ರ ಮಧ್ಯರಾತ್ರಿ ವೆಂಕಟೇಶ ಕೊಲೆ ನಡೆದಿತ್ತು.
ಅಂದೆ ಬೆಳಗ್ಗೆ ವಿಜಯ, ಧನರಾಜ, ಭರತ್, ಸಲೀಂ ಈ ನಾಲ್ವರೂ ಕಂಪ್ಲಿ ಪೊಲೀಸ್ ಠಾಣೆಗೆ ಶರಣಾಗತರಾಗಿದ್ದರು. ಆರು ದಿನಗಳ ನಂತರ ಗಂಗಾವತಿಯ ಕಾರ್ತಿಕ ಗೊಂಡಬಾಳನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.
ಅ.19 ರಂದು ಬಳ್ಳಾರಿಯ ಮಹಮ್ಮದ ಅಲ್ತಾಫ್, ದಾದಾಪೀರ್, ಹಾಗೂ ಪ್ರಮುಖ ಆರೋಪಿ ರವಿ ಪತ್ನಿ ಚೈತ್ರಾರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.
ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ರವಿ ಹಾಗೂ ಗಂಗಾಧರನನ್ನು ಅ. 26 ರಂದು ಬಳ್ಳಾರಿ ಹೊರವಲಯದ ಅನಂತಪುರ ರಸ್ತೆಯಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.