Advt. 
 Views   884

ಕೊಪ್ಪಳ : ಅವೈಜ್ಞಾನಿಕ ಸುತ್ತೋಲೆ ಹಿಂಪಡೆಯುವಂತೆ ಪಿಯು ಉಪನ್ಯಾಸಕರ–ಪ್ರಾಚಾರ್ಯರ ಒತ್ತಾಯ

Oct 23, 2025, 04:58 PM IST
ಕೊಪ್ಪಳ : ಅವೈಜ್ಞಾನಿಕ ಸುತ್ತೋಲೆ ಹಿಂಪಡೆಯುವಂತೆ ಪಿಯು ಉಪನ್ಯಾಸಕರ–ಪ್ರಾಚಾರ್ಯರ ಒತ್ತಾಯ

ಕೊಪ್ಪಳ : ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿ ಪರಿಶೀಲನೆ ಕುರಿತು ಶಾಲಾ ಶಿಕ್ಷಣ ಇಲಾಖೆ ಹಾಗೂ ಡಿ.ಎಸ್.ಇ.ಅರ್.ಟಿ. ಜಂಟಿಯಾಗಿ ಹೊರಡಿಸಿರುವ ಸುತ್ತೋಲೆ ಅವೈಜ್ಞಾನಿಕವಾಗಿದೆ ಎಂದು ಕೊಪ್ಪಳ ಜಿಲ್ಲೆಯ ಪಿಯು ಕಾಲೇಜುಗಳ ಉಪನ್ಯಾಸಕ ಮತ್ತು ಪ್ರಾಚಾರ್ಯರ ಸಂಘಗಳು ಆರೋಪಿಸಿವೆ.

“ಕಾಲೇಜುಗಳ ಶೈಕ್ಷಣಿಕ ಮತ್ತು ಇತರೆ ಸೌಲಭ್ಯಗಳ ಪರಿಶೀಲನೆಗೆ ನಮ್ಮದು ವಿರೋಧವಿಲ್ಲ. ಆದರೆ ಇಲಾಖೆಗೆ ಸಂಬಂಧಿಸದ ಡಯಟ್‌ ಅಧಿಕಾರಿಗಳು ಹಾಗೂ ಉಪನ್ಯಾಸಕರು ಪರಿಶೀಲನೆ ನಡೆಸುವುದು ತರವಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಈ ಸುತ್ತೋಲೆಯಿಂದ ನೌಕರರಲ್ಲಿ ಅಭದ್ರತೆ ಉಂಟಾಗಿದೆ. ಆದ್ದರಿಂದ ಇದನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಜಿಲ್ಲಾ ಉಪನಿರ್ದೇಶಕ ಜಿ.ಎಚ್. ಜಗದೀಶ ಅವರ ಮುಖಾಂತರ ಇಲಾಖೆಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ, ಕಾರ್ಯದರ್ಶಿ ಬಸವರಾಜ, ಕಜಾಂಚಿ ಟಿ.ಸಿ. ಶಾಂತಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರಗೌಡ, ಕಾರ್ಯಾಧ್ಯಕ್ಷ ಮಾರುತಿ ಲಕಮಾಪುರ, ಹಿರಿಯ ಪ್ರಾಚಾರ್ಯರು ರಾಜಶೇಖರ ಪಾಟೀಲ್, ಶಿವಾನಂದ, ಮಂಜುನಾಥ ಸ್ವಾಮಿ, ಉಪನ್ಯಾಸಕರು ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್, ರಾಚಪ್ಪ ಕೇಸರಬಾವಿ, ಕೆ.ಎಸ್. ಹುಲಿ, ಎಸ್.ವಿ. ಮೇಳಿ, ಕೆ.ಎಚ್. ಕೊಳ್ಳಣ್ಣನವರ್, ಶಿವಾನಂದ ಮೇಟಿ, ಲಲಿತಮ್ಮಾ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Sep 7 2026 9:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಿರಾಣಿ ಅಂಗಡಿಯಲ್ಲಿ ಕಳ್ಳತನ
Sep 6 2026 7:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೇತ್ರದಾನ ಮಹತ್ವ ಸಾರಿದ ಜಾಗೃತಿ ಜಾಥಾ
Sep 6 2026 7:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಗಲಿದ ರಂಗ ಜಂಗಮರಿಗೆ ನುಡಿ ನಮನ
Sep 6 2026 6:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ
Sep 5 2026 8:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ವಿವಿಧ ಇಲಾಖೆಗಳ ಭ್ರಷ್ಟಾಚಾರ ಬಗ್ಗೆ SIT ತನಿಖೆಯಾಗಲಿ : ಕೊಡ್ಲಿಪೇಟೆ
Sep 4 2026 3:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾಸ್ಪತ್ರೆ ಪಾರ್ಕಿಂಗ್‌ನಿಂದ ಬೈಕ್ ಕಳ್ಳತನ ಕೇಸ್ ನಿಂದ ಪತ್ತೆ
Sep 3 2026 7:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಬ್ಬಿಗೆ ₹5500 ಬೆಂಬಲ ಬೆಲೆ ನೀಡಿ : ರೈತರ ಆಗ್ರಹ
Sep 3 2026 6:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮೊದಲು ಕೆರೆ ಒತ್ತುವರಿ ತೆರವು : ಆಮೇಲೆ ಅಭಿವೃದ್ಧಿ
Sep 2 2026 7:23PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪಿಂಚಣಿ ಸ್ಥಗಿತ ಖಂಡಿಸಿ ಪ್ರತಿಭಟನೆ : ಅರ್ಹರಿಗೆ ಅನ್ಯಾಯ ಬೇಡ
Sep 2 2026 6:01PM | ಜಿಲ್ಲಾ ಸುದ್ದಿಗಳು | ಕೊಪ್ಪಳ KPSC ನೇಮಕಾತಿ ಹಗರಣ ಖಂಡಿಸಿ SFI ಪ್ರತಿಭಟನೆ




Copyright © 2026 Agni Divya. All Rights Reserved.
Designed & Developed by We Make Digitize