ಕೊಪ್ಪಳ : ಗೋವುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಲಾರಿ
ಮಗುಚಿ ಬಿದ್ದು ಗೋವುಗಳು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಹಿಟ್ನಾಳ ಹತ್ತಿರ ನಡೆದಿದೆ.
ಹಿಟ್ನಾಳ ಟೋಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದ್ದು ಕಂಟೇನರ್ ಲಾರಿ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಮುಗುಚಿ ಬಿದ್ದಿದೆ ಎನ್ನಲಾಗಿದ್ದು ಕಂಟೇನರ್ ನಲ್ಲಿ 34 ಗೋವುಗಳು ಇದ್ದವು.
ಅಪಘಾತ ಕಾರಣದಿಂದ 6 ಗೋವುಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದ್ದು ಬೆಂಗಳೂರು ನೋಂದಣಿಯ ಈ ಲಾರಿ ಮಹಾರಾಷ್ಟ್ರ ಕಡೆಯಿಂದ ಬೆಂಗಳೂರಿಗೆ ಹೊರಟಿತ್ತು. ಲಾರಿ ಚಾಲಕ ಪರಾರಿಯಾಗಿದ್ದಾನೆ.
ಮುನಿರಾಬಾದ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.