ಕೊಪ್ಪಳ : ಸಮುದಾಯ ಬಗ್ಗೆ ನಿಂದನೆ ಮಾಡಿದ್ದಾರೆ ಎಂದು ಮಾಜಿ ಸಂಸದ ರಮೇಶ ಕತ್ತಿ ವಿರುದ್ದ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಸೋಮವಾರ ಕೊಪ್ಪಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭ ಪ್ರಚಾರದ ಭರಾಟೆಯಲ್ಲಿ ವಾಲ್ಮೀಕಿ ನಾಯಕ ಸಮಾಜ ನಿಂದನೆ ಮಾಡಿದ್ದಾರೆ.
ಈ ಹಿಂದೆ ಚುನಾವಣಾ ಭಾಷಣದ ವೇಳೆ ಸಾಮಾನ್ಯ ಚಿಕ್ಕೋಡಿ ಲೋಕಸಭಾ , ಮತ್ತು ಗೋಕಾಕ, ಅತಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬ್ಯಾಡ ಜನಾಂಗದವರು ಸ್ಪರ್ಧೆ ಮಾಡಿದರೆ ನಾವೇನು ಮೀನು ಹಿಡಿಯಲು ಹೋಗಬೇಕಾ ? ಅಂತ ಹೇಳಿ ಸಮಸ್ತ ಮೀನುಗಾರರಿಗೆ ಕೀಳು ಭಾವನೆಯಿಂದ ನಿಂದನೆ ಮಾತಾಡಿದ್ದರು. ಜಾತಿ ವಿಷ ಬೀಜ ಬಿತ್ತಿದರು.
ನಾವು ಸಂವಿಧಾನಕ್ಕೆ ಗೌರವ ಕೊಟ್ಟು ಯಾವುದೇ ಗೊಂದಲ, ಕೋಮು ಸಂಘರ್ಷ ಜಾತಿ ಸಂಘರ್ಷ ಬೇಡ ಎಂದು ತಾಳ್ಮೆಯಿಂದ ಇದ್ದೇವು.
ಈಗ ಮತ್ತೆ ಸಮುದಾಯಕ್ಕೆ ಅವಾಚ್ಯ ಪದ ಬಳಸಿ ನಿಂದನೆ ಮಾಡಿದ್ದಾರೆ. ನಮಗೆ ನಮ್ಮ ಸಮಾಜಕ್ಕೆ ನ್ಯಾಯ ನೀಡುವಂತೆ
ಮುಖಂಡರಾದ ರಾಮಣ್ಣ ಕಲ್ಲನವರ, ಯಮನೂರಪ್ಪ ನಾಯಕ, ಚೆನ್ನಪ್ಪ ಹಂಚಿನಾಳ, ಮಂಜುನಾಥ ಗೊಂಡಬಾಳ ಇತರರು ನಗರ ಠಾಣೆಗೆ ದೂರು ನೀಡಿದ್ದಾರೆ.