ಕೊಪ್ಪಳ : ಬಸವ ತತ್ವ ಶರಣ ತತ್ವ ಅವಮಾನಿಸಿರುವ ಕನ್ನೇರಿ ಮಠದ ಅದೃಷ್ಯ ಕಾಡ ಸಿದ್ದೇಶ್ವರ ಸ್ವಾಮಿಜಿ ಅವರನ್ನು ಬಂಧಿಸುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವ ತತ್ವ ಸಂಘಟನೆ ಪ್ರಮುಖರು ಅಶೋಕ ಸರ್ಕಲ್ ನಲ್ಲಿ ಆಗ್ರಹಿಸಿದರು.
ಅ. 9 ರಂದು ಮಹಾರಾಷ್ಟ್ರದ ಜತ್ ತಾಲೂಕು ಬೀರೂರು ಗ್ರಾಮದಲ್ಲಿ ನಡೆದ ಬಸವ ಪರಂಪರೆಯ ವಿರಕ್ತ ಮಠದ ಸಭೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಾಗೂ ಲಿಂಗಾಯತ ಮಠಾಧಿಪತಿಗಳಿಗೆ ಅಶ್ಲೀಲ ಅವಾಚ್ಯ ಭಾಷೆ ಬಳಸಿ ಅಪಮಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾನಹಾನಿಕಾರಕ ಶಬ್ದ ಬಳಸಿ, ಲಿಂಗಾಯತ ಮಠಾಧೀಶರ ಒಕ್ಕೂಟ ಮುಖ್ಯಮಂತ್ರಿಗಳ ಕೃಪಾಪೋಷಿತ ಕಲಾವಿದರು ಎಂದು ಅಪಮಾನಿಸಿದ್ದಾರೆ.
ಶಾಂತಿ ಭಂಗ ಮಾಡುವ, ಕೋಮುಗಲಭೆ ಮಾಡುವ ಜನರ ಮಧ್ಯೆ ವಿಷ ಬೀಜ ಬಿತ್ತುವ ಕನ್ನೇರಿ ಮಠದ ಸ್ವಾಮಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ನಂತರ ಅಶೋಕ ಸರ್ಕಲ್ ನಿಂದ ಪಾದಯಾತ್ರೆ ಮೂಲಕ ತಹಶಿಲ್ದಾರ ಕಚೇರಿಗೆ ತೆರಳಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ ಸಸಿಮಠ, ಯುವಘಟಕದ ಅಧ್ಯಕ್ಷ ಶೇಖರ ಇಂಗಳದಾಳ, ವಿಶ್ವಗುರು ಬಸವೇಶ್ವರ ಟ್ರಸ್ಟನ ಅಧ್ಯಕ್ಷ ಗುಡದಪ್ಪ ಹಡಪದ, ರಾಷ್ಟ್ರೀಯ ಬಸವದಳ ಅಧ್ಯಕ್ಷ ಶಿವಬಸಯ್ಯ ವೀರಾಪೂರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಕುಮಾರ ಕುಕನೂರ, ಕಾರ್ಯದರ್ಶಿ ಸೋಮನಗೌಡ ವಗರನಾಳ, ಗಾಣದ ಕಣ್ಣಪ್ಪ ಶಿವಾನುಭವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ವಣಗೇರಿ, ಕಾರ್ಯದರ್ಶಿ ಶರಣ ಬಸವನಗೌಡ ಪಾಟೀಲ್, ವೀರಭದ್ರಪ್ಪ ನಂದ್ಯಾಳ, ಬಾಪುಗೌಡ ಪಾಟೀಲ್, ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ನಾಲ್ವಾಡ, ತಾಲೂಕ ಬಣಜಿಗ ಮಹಿಳಾ ಘಟಕದ ಅಧ್ಯಕ್ಷೆ ಅಪರ್ಣಾ ಬಳ್ಳೊಳ್ಳಿ, ಮುಖಂಡರಾದ ಮಾರುತಿ ಅಂಗಡಿ, ಮಂಜುನಾಥ ಶೇಡದ, ಮುತ್ತಣ್ಣ ಬೀರಲದಿನ್ನಿ, ಪರಪ್ಪ ಗೊಂದಿಹೊಸಳ್ಳಿ, ಈಶಪ್ಪ ದಿನ್ನಿ, ದೇವೀಶ ಗಬ್ಬೂರ, ಶರಣಬಸವ ಬಳ್ಳಾರಿ, ರೇಣಕಪ್ಪ ಮಂತ್ರಿ, ಮಂಜುನಾಥ ಹಿರೇಮಠ, ಕಳಕಪ್ಪ ವಿವೇಕಿ, ಶಂಕ್ರಪ್ಪ ಟಣಕನಕಲ್, ಸಂಗಮೇಶ ಕಡಗದ, ಮಹಿಳಾ ಮುಖಂಡರಾದ ಈರಮ್ಮ ಕೊಳ್ಳಿ, ಶಿಲ್ಪಾ ಸಸಿಮಠ, ನಿರ್ಮಲಾ, ವಿಶಾಲಾಕ್ಷಿ, ಮಲ್ಲಮ್ಮ ಕಡಗದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.