ಕೊಪ್ಪಳ : ಈ ಸಲದ ಬೇಸಿಗೆಯಲ್ಲಿ ಬಿಸಿಲಿನ ತಾಪ ದಿನೇ ದಿನೆ ಹೆಚ್ಚುತ್ತಿದ್ದು ನಗರದ ಟ್ರಾಫಿಕ್ ಸಿಗ್ನಲ್ ನ ನಾಲ್ಕೂ ರಸ್ತೆಗಳಲ್ಲಿ ನೆರಳಿನ ಪರದೆ ಹಾಕುವಂತೆ ಕೊಪ್ಪಳ ಜೆಡಿಎಸ್ ನಗರ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
ವಾಹನಗಳ ದಟ್ಟಣೆ ವಿಪರೀತ ಇರುವ ಕೊಪ್ಪಳದಲ್ಲಿ ಬೇಸಿಗೆಯ ಈ ದಿನದಲ್ಲೂ ಟ್ರಾಫಿಕ್ ಸಿಗ್ನಲ್ ಕಾರ್ಯನಿರ್ವಹಿಸ ಬೇಕಿದೆ. ಈ ಮಾರ್ಚ್, ಏಪ್ರಿಲ್ , ಮೇ ತಿಂಗಳಲ್ಲಿ ಬಿಸಿಲಿನ ತಾಪದಿಂದ ಸಂಚಾರವೆ ಕಷ್ಟ. ಬಿಸಿಲಿನ ಧಗೆ ಹೆಚ್ಚಾಗಿ ಮೈ ಮೇಲಿನ ಚರ್ಮ ಸುಟ್ಟು ಹೋಗುತ್ತಿದೆ. ಸಿಗ್ನಲ್ ನಲ್ಲಿ ಟೂ ವ್ಹಿಲರ್ ಸವಾರರು ಕನಿಷ್ಠ ಒಂದು ನಿಮಿಷ ನಿಲ್ಲಬೇಕಾಗುತ್ತೆ. ಈ ಸಂದರ್ಭದಲ್ಲಿ ಬಿಸಿಲಿನ ಧಗೆ ತಡೆದುಕೊಳ್ಳುವುದು ಅಸಾಧ್ಯ.
ಹಾಗಾಗಿ ಸಿಗ್ನಲ್ ಇರುವ ಸರ್ಕಲ್ ನ ಪ್ರತಿ ರಸ್ತೆಗೆ ಎತ್ತರದಲ್ಲಿ 100 ಮೀಟರ್ ಉದ್ದದಷ್ಟು ನೆರಳಿನ ಪರದೆ ಹಾಕಿದರೆ ಬೈಕ್ ಸವಾರರಿಗೆ ಬಹಳ ಸಹಾಯ ಆಗುತ್ತೆ. ಕೂಡಲೇ ನೆರಳಿನ ಪರದೆ ಅಳವಡಿಸುವಂತೆ ಜೆಡಿಎಸ್ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ( ಸಿ.ವಿ ಚಂದ್ರಶೇಖರ ರಾಜ್ಯ ಕೋರ್ ಸಮಿತಿ ಸದಸ್ಯರು ಇವರ ನಿರ್ದೇಶನದಂತೆ) ಕೊಪ್ಪಳ ಜೆಡಿಎಸ್ ಜಿಲ್ಲಾ ಮುಖಂಡ ಮಂಜುನಾಥ್ ಸೋರಟೂರ, ರಮೇಶ್ ಡಂಬ್ರಳ್ಳಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷರು ಸೋಮನಗೌಡ ಹೊಗರನಾಳ ಮತ್ತು ತಾಲೂಕ ಎಸ್ ಟಿ ವಿಭಾಗದ ಅಧ್ಯಕ್ಷರು ಮಲ್ಲಪ್ಪ ವಾಲ್ಮೀಕಿ, ಜೆಡಿಎಸ್ ಮುಖಂಡ ಸಂಜೀವಗೌಡ ಪೊಲೀಸ್ ಪಾಟೀಲ್, ಮಂಜುನಾಥ್ ಮಾಲಿ ಪಾಟೀಲ್, ಸಿದ್ದನಗೌಡ ಮಾಲಿ ಪಾಟೀಲ್ ಹಾಗೂ ಸಿರಾಜ್ ಕೋಲ್ಕಾರ್ ಉಪಸ್ಥಿತರಿದ್ದರು.