ಕೊಪ್ಪಳ : ಮದುವೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿ ಮನೆ ಪೂರ್ತಿ ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ನಡೆದಿದೆ.
ಈ ದುರ್ಘಟನೆ ತಾಲೂಕಿನ ಬಿಸರಳ್ಳಿಯಲ್ಲಿ ನಡೆದಿದ್ದು ಹಳೆಯ ಸಾಂಪ್ರದಾಯಿಕ ಮಡಗಿ ಮನೆ ಸಂಪೂರ್ಣ ಸುಟ್ಟು ಛತ್ತಿನ ಸಮೇತ ಕುಸಿದಿದೆ.
ಗ್ರಾಮದ ರಾಮಣ್ಣ ದ್ಯಾವಣ್ಣನವರ ಎಂಬುವವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕೂರ್ಟ್ ನಿಂದ ಹೊತ್ತಿದ ಬೆಂಕಿಗೆ ಸಂಪೂರ್ಣ ಮನೆ ಆಹುತಿಯಾಗಿದೆ.
ರಾಮಣ್ಣನ ಮಗಳ ಮದುವೆಗಾಗಿ ಎಲ್ಲ ತಯಾರಿ ಮಾಡಿಕೊಂಡಿದ್ದ ಕುಟುಂಬ ಮದುವೆಗಾಗಿ ಬಂಗಾರ ಆಭರಣ ಮದುವೆ ಬಟ್ಟೆ ಖರೀದಿಸಿದ್ದರು.
ಮನೆ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ
ಬಂಗಾರ ಬಟ್ಟೆ ಸೇರಿ ಆಸ್ತಿ ಪಾಸ್ತಿ ನಾಶವಾಗಿದ್ದು ಯಾವುದೇ ಜೀವ ಹಾನಿಯಾಗಿಲ್ಲ.
ಗ್ರಾಮಸ್ಥರು ಬೆಂಕಿ ನಂದಿಸಲು ಅಪಾರ ಶ್ರಮಪಟ್ಟಿದ್ದು ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿತು.