ಕೊಪ್ಪಳ : ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ವಕ್ಷೇತ್ರದಲ್ಲಿ ಈ ವರ್ಷದ ಕನಕಗಿರಿ ಉತ್ಸವ ನಡೆಸುವ ದಿನಾಂಕ ವಿವಾದವಾಗಿ ಕನಕಗಿರಿ ಉತ್ಸವವೆ ರದ್ದಾಗಿರುವ ಹೊತ್ತಿನಲ್ಲಿ
ಕಳೆದ ವರ್ಷ ನಡೆದ ಕನಕಗಿರಿ ಉತ್ಸವದಲ್ಲಿ ಹಣ ದುರುಪಯೋಗ ಆಗಿರುವ ಆರೋಪ ಕೇಳಿಬಂದಿದೆ.
ಅಷ್ಟೆ ಅಲ್ಲ ಶಿವರಾಜ ತಂಗಡಗಿ ಅವರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನಕಗಿರಿ , ಆನೆಗೊಂದಿ ಉತ್ಸವದಲ್ಲಿಯೂ ಹಣ ದುರುಪಯೋಗದ ಬಗ್ಗೆ ಕೇಳಿ ಬಂದಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ರವಿ ನಿಂಗಪ್ಪ ಆಗೋಲಿ ಮಂಗಳವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಕನಕಗಿರಿ , ಆನೆಗೊಂದಿ ಉತ್ಸವದ ಜೊತೆ ಕೊಪ್ಪಳ ರಜತ ಮಹೋತ್ಸವದ ಹಣ ಬಳಕೆ ಬಗ್ಗೆ ಸರಿಯಾದ ದಾಖಲೆ ಇಲ್ಲ ಮತ್ತು ಹಣ ಬಳಕೆ ಪ್ರಮಾಣ ಪತ್ರ ಇಲ್ಲ ಹಾಗೂ ಉತ್ಸವದ ಖರ್ಚು ವೆಚ್ಚದ ಆಡಿಟ್ ಇನ್ನೂ ಆಗಿಲ್ಲ ಎಂದು ಆರೋಪಿಸಿದರು.
ಕಳೆದ ಸಾಲಿನಲ್ಲಿ ಕನಕಗಿರಿ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 8 ಕೋಟಿ 23 ಲಕ್ಷ ರೂ ಬಿಡುಗಡೆಯಾಗಿದೆ. ಅದರಲ್ಲಿ ವೇದಿಕೆಗೆ 1 ಕೋಟಿ 99 ಲಕ್ಷ ರೂ. ಖರ್ಚು ಮಾಡಿದ್ದು ಇದನ್ನ ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದಾರೆ. ಹೊರಗಿನಿಂದ ಬಂದ ಕಲಾವಿದರು ಚಲನಚಿತ್ರ ರಂಗದವರಿಗೆ 1 ಕೋಟಿ 70 ಲಕ್ಷ ರೂ. ಖರ್ಚಾಗಿದ್ದರೆ ಸ್ಥಳೀಯ ಕಲಾವಿದರಿಗೆ ಕೇವಲ 55 ಲಕ್ಷ ಹಣ ಖರ್ಚಾಗಿದೆ.
ಕನಕಗಿರಿ ಉತ್ಸವದ ಸರಕು ಸಾಗಾಣಿಕೆ ಟೆಂಡರ್ ಕರೆಯದೆ ಹಣ ಬಳಸಿ ತಪ್ಪು ಮಾಡಿದ್ದಾರೆ ಇದರಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಪೂರ್ಣ ಹೊಣೆಯಾಗಿದೆ. ಕನಕಗಿರಿ ಉತ್ಸವದ ಸಾಮಾಜಿಕ ಜಾಲತಾಣ ಮತ್ತು ವಿಡಿಯೋ ಚಿತ್ರೀಕರಣಕ್ಕೆ 17 ಲಕ್ಷ ಖರ್ಚು ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ
ಮಾಡಿದ್ದಾರೆ ಮತ್ತು ಉತ್ಸವದ ಹಣ ಬಳಕೆಯ ಪ್ರಮಾಣ ಪತ್ರವನ್ನು ಕೇಳಿದರೆ ಮಾಹಿತಿ ಹಕ್ಕುನಲ್ಲಿ ಕೇಳಿದರೆ ಈವರೆಗೂ ಇದರ ಆಡಳಿತ ಆಗಿಲ್ಲ ಎಂದು ತಿಳಿದು ಬಂದಿದ್ದಾರೆ ಇದೆ ಇದರ ಜೊತೆಗೆ ಉತ್ಸವದ ಸರಕು ಸಾಕಾಣಿಕೆಗೆ ಪೆಂಡಲ್ ಕರೆಯದೆ ಬೇಕಾಬಿಟ್ಟಿ ಹಣವನ್ನು ಖರ್ಚು ಮಾಡಲಾಗಿದೆ ಈಗಾಗಲೇ ಇದರಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಂಪೂರ್ಣ ಹೊಣೆ
ಆನೆಗೊಂದಿ ಉತ್ಸವಕ್ಕೆ ಕಳೆದ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 50 ಲಕ್ಷ ರೂ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ಬಿಡುಗಡೆಯಾಗಿದ್ದು ಈವರೆಗೂ ಖರ್ಚು ವೆಚ್ಚದ ಆಡಿಟ್ ಇರುವುದಿಲ್ಲ.
2023 ರಲ್ಲಿ ನಡೆದ ಕೊಪ್ಪಳ ರಜತ ಮಹೋತ್ಸವಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ. ಬಿಡುಗಡೆಯಾಗಿದ್ದರೆ ಡಿಸಿ ನೇತೃತ್ವದಲ್ಲಿ ವಿವಿಧ ಕಾರ್ಖಾನೆಗಳಿಂದ ಸುಮಾರು 60 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಮೂರು ಉತ್ಸವಕ್ಕೆ ಹಣ ಬಳಸುವಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆಯ ಅಧಿನಿಯಮ 1999 ಹಾಗೂ ನಿಯಮಗಳು 2000 ಪಾಲನೆ ಆಗಿಲ್ಲ. ಸರ್ಕಾರದ ಹಣ ಕೆಲವೆಡೆ ಅನಗತ್ಯವಾಗಿ ಬಳಕೆಯಾಗಿದೆ ಅದಕ್ಕಾಗಿ ನಕಲಿ ಬಿಲ್ಲ್ ಸೃಷ್ಟಿಸಿ ಹಣ ದುರುಪಯೋಗ ಮಾಡಿದ್ದಾರೆ.
ಕನಕಗಿರಿ ಉತ್ಸವಕ್ಕೆ ಆಹಾರ ಡ್ರೈ ಫ್ರುಟ್ಸ್ ಸ್ನಾಕ್ಸ್ ನೀರಿನ ಬಾಟಲಿ ಸೇರಿ ವಿವಿಧ ಆಹಾರ ತಿನಿಸು ಸರಬರಾಜು ಮಾಡಲು ಪೂರ್ಣಿಮಾ ಎಂಟರ್ಪ್ರೈಸಸ್ ನವರು ಡಿಸಿ ಕಚೇರಿಗೆ 20.2.2024 ರಂದು ಕೊಟೇಷನ್ ಕೊಟ್ಟರೆ ಅದಕ್ಕೆ ರಿಸೀವ್ ಸೀಲ್ ದಿನಾಂಕ 2.2.2024 ಇದೆ. ಇದು ಅನುಮಾನಕ್ಕೆ ಕಾರಣ.
ಕನಕಗಿರಿಯ ಮೆಹ್ತಾ ಎಂಟರ್ ಪ್ರೈಸಸ್ ಹೆಸರಿನ ಅಂಗಡಿಯಲ್ಲಿ ತರಕಾರಿ ಖರೀದಿಸಿದ ಬಿಲ್ ಅನುಮಾನ ಹುಟ್ಟಿಸಿದೆ. ಅದೇ ಬಿಲ್ ನಲ್ಲಿ ಹೆಚ್ಚುವರಿಯಾಗಿ ಯಾವುದೇ ವಿವರ ಇಲ್ಲದೆ 2 ಲಕ್ಷ ರೂ. ಎಂದು ನಮೂದಿಸಿದ್ದು ಅವ್ಯವಹಾರಕ್ಕೆ ಸಾಕ್ಷಿ.
ಈ ಕುರಿತಂತೆ ತನಿಖೆ ಮಾಡುವಂತೆ ಮಾನ್ಯ ರಾಜ್ಯಪಾಲರು , ಮುಖ್ಯಮಂತ್ರಿಗಳು , ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಾಗೂ ಸಚಿವ ಶಿವರಾಜ ತಂಗಡಗಿ ಅವರ ಬೆಂಗಳೂರು ಕಚೇರಿಗೆ ಮನವಿ ಸಲ್ಲಿಸಿದ್ದೇನೆ. ಸರಕಾರ ಬೇಗ ಇದನ್ನು ತನಿಖೆ ಮಾಡಬೇಕು ಎಂದು ರವಿ ಆಗೊಲಿ ಒತ್ತಾಯಿಸಿದರು.