ಕೊಪ್ಪಳ : ಗುರುವಾರ ರಾತ್ರಿ ಜಗಳದಲ್ಲಿ ದುಷ್ಕರ್ಮಿಗಳಿಂದ ಕಾಲುವೆಗೆ ನೂಕಲ್ಪಟ್ಟು ಕಾಣೆಯಾಗಿದ್ದ ಒರಿಸ್ಸಾ ಮೂಲದ ಬಿಬಾಸ್ ಮೃತ ದೇಹ ಗಂಗಾವತಿಯ ಮಲ್ಲಾಪುರ ಪವರ್ ಸ್ಟೇಶನ್ ಗೇಟ್ ಹತ್ತಿರ ಪತ್ತೆಯಾಗಿದೆ.
ಗುರುವಾರ ರಾತ್ರಿ ಸಾಣಾಪುರ ಹತ್ತಿರ ರೆಸಾರ್ಟ್ ಮಾಲಿಕ ಮಹಿಳೆ ಹಾಗೂ ಇಬ್ಬರು ವಿದೇಶಿ ಪ್ರಜೆಗಳು ಓರ್ವ ನಾಸಿಕ್ ಮತ್ತು ಓರ್ವ ಒರಿಸ್ಸಾದ ಒಟ್ಟು ಐವರು ಗಿಟಾರ್ ನುಡಿಸುತ್ತ ಕುಳಿತಿದ್ದರು.
ಆಲ್ಲಿಗೆ ಬೈಕ್ ನಲ್ಲಿ ಬಂದ ಮೂವರು ದುಷ್ಟರು ಪೆಟ್ರೋಲ್ ಗೆ ಹಣ ಕೇಳಿದಾಗ ಇವರು 20 ರೂಪಾಯಿ ಕೊಡಲು ಹೋದಾಗ ದುಷ್ಟರು 100 ರೂಪಾಯಿ ಬೇಕು ಎಂದು ವಾಗ್ವಾದ ಮಾಡಿ ಜಗಳ ಆರಂಭಿಸಿದರು. ಆಗ ದುಷ್ಟರು ಮೂವರು ಪುರುಷ ಪ್ರವಾಸಿಗರನ್ನು ಕಾಲುವೆಗೆ ನೂಕಿದ್ದಾರೆ. ಅವರಲ್ಲಿ ಇಬ್ಬರು ಈಜಿಕೊಂಡು ಮೇಲೆ ಬಂದಿದ್ದರೆ ಒರಿಸ್ಸಾ ಮೂಲದ ಬಿಬಾಸ್ ಕಾಣೆಯಾಗಿದ್ದ.
ಶನಿವಾರ ಬೆಳಗ್ಗೆ ಬಿಬಾಸ್ ಶವ ತುಂಗಭದ್ರಾ ಎಡದಂಡೆ ನಾಲೆ ಮಲ್ಲಾಪುರ ಪವರ ಸ್ಟೆಷನ್ ಗೇಟ್ ಬಳಿ ಪತ್ತೆಯಾಗಿದೆ.
ಮೂವರು ದುಷ್ಟರು ಅನ್ಯಾಯವಾಗಿ ಒಬ್ಬನ ಜೀವ ಬಲಿ ಪಡೆದಂತಾಗಿದೆ.