ಕೊಪ್ಪಳ : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಬೇಕಾಬಿಟ್ಟಿಯಾಗಿ ಅನುಷ್ಠಾನಗೊಳಿಸುತ್ತಿದೆ ತಾನು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜನರಿಗೆ ಮುಟ್ಟಿಸಿ ಎಂದು ಕೊಪ್ಪಳ ಜಿಲ್ಲಾ ಜೆಡಿಎಸ್ ಗುರುವಾರ ಬಸವೇಶ್ವರ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಜೆಡಿ ಎಸ್ ಜಿಲ್ಲಾಧ್ಯಕ್ಷರಾದ ಸುರೇಶ ಭೂಮರಡ್ಡಿಯವರು ಮಾತನಾಡಿ ಚುನಾವಣೆ ಮುಂಚೆ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಹೆಸರಲ್ಲಿ ಪ್ರಚಾರ ಮಾಡಿದ್ದರಿಂದ ಜನ ಅವರಿಗೆ 136 ಸ್ಥಾನಗಳ ಬಹುಮತ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕೊಟ್ಟ ಮಾತಿನಂತೆ ಕೆಲಸ ಮಾಡಿ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜನತೆಗೆ ಮುಟ್ಟಿಸಬೇಕು ಅದು ಬಿಟ್ಟು ಕೇವಲ ಕೇಂದ್ರ ಸರ್ಕಾರವನ್ನು ಟೀಕಿಸಿದರೆ ಯಾವುದೇ ಲಾಭವಿಲ್ಲ. ನೀವೇನು ಮಾಡುತ್ತಿದ್ದೀರಿ ಎಂಬುದನ್ನು ಮೊದಲು ಗಮನಿಸಿಕೊಳ್ಳಿ ಹಣ ಇಲ್ಲದಿದ್ದರೆ ಗ್ಯಾರಂಟಿ ಯೋಜನೆ ಏಕೆ ಘೋಷಣೆ ಮಾಡಿದ್ರಿ ? ರಾಜ್ಯದ ಜನ ಗ್ಯಾರಂಟಿ ಯೋಜನೆಗಳನ್ನು ಕೇಳಿರಲಿಲ್ಲ.
ವಿದ್ಯುತ್ ಸರಬರಾಜು ಸಮರ್ಪಕವಾಗಿಲ್ಲ. ವಿದ್ಯುತ್ ದರ ಏರಿಸಲಾಗಿದೆ. ಚುನಾವಣೆ ಇದ್ದಾಗ ಮಾತ್ರ ನಗದು ವರ್ಗಾವಣೆಯಾಗುತ್ತದೆ. ಸಚಿವರೊಬ್ಬರು ದುಡ್ಡು ಕೊಡಲು ಇದೇನು ವೇತನವಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ ಎಂದು ಸುರೇಶ ಭೂಮರಡ್ಡಿ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಮಾತನಾಡಿ ಮೈಕ್ರೋ ಫೈನಾನ್ಸ್ ಸಾಲ ವಸೂಲಿ ಭಾದೆಯಿಂದ ಲಕ್ಷಾಂತರ ಕುಟುಂಬಗಳು ತುತ್ತಾಗಿವೆ. ಹಾಲಿನ, ದರ, ಬಸ್ ದರ, ವಿದ್ಯುತ್ ದರ ಏರಿಸಿ ಮಧ್ಯಮ ವರ್ಗದವರಿಗೆ ಅನ್ಯಾಯ ಮಾಡಲಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಹ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಂಜುನಾಥ ಸೊರಟೂರು, ಮೂರ್ತಪ್ಪ ಗಿಣಗೇರಿ, ದೇವಪ್ಪ ಹಳ್ಳಿಕೇರಿ, ಶರಣಪ್ಪ ಜಡಿ, ಸೋಮನಗೌಡ ಹೊಗರನಾಳ, ಶಿವಕುಮಾರ ಮಹಾಂತಯ್ಯನಮಠ, ರವಿ ಮಾಗಳ್, ವಿರೇಶಗೌಡ ಚಿಕ್ಕಬಗನಾಳ, ಯಮನಪ್ಪ ಕಟೀಗಿ, ಶಾಂತಕುಮಾರ, ಮಹೇಶ ಕಂದಾರಿ, ಮಾರುತಿ ಪೇರ್ಮೀ, ವಸಂತ ಹಟ್ಟಿ, ಮಂಜುನಾಥ ವದಗನಾಳ, ಧ್ಯಾಮಣ್ಣ ಕಲಕೇರಿ, ಯಂಕಪ್ಪ ಮಣೆಗಾರ, ಲೋಕೇಶ ಬಾರಕೇರ, ರಂಗಪ್ಪ ಬೋವಿ, ರವಿ ಮೇದಾರ, ಮಂಜು ಗಬ್ಬೂರ, ವಿರೇಶ ಮುದ್ದಾಬಳ್ಳಿ, ಅರುಣ ಕುಮಾರ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.