ಕೊಪ್ಪಳ ನಗರದ ಮಧ್ಯ ಭಾಗ ಜವಾಹರ ರಸ್ತೆ ಮತ್ತು ಹಸನ್ ರಸ್ತೆ ಮಧ್ಯೆ ಇರುವ 17 ಪ್ಲಾಟ್ ಗಳು ವಕ್ಫ ಆಸ್ತಿಯಲ್ಲ ಅವು ನಮ್ಮ ಪಾರಂಪರಿಕ ಆಸ್ತಿ ಆಗಿದ್ದು ಏಳು ತಲೆಮಾರುಗಳಿಂದ ನಮ್ಮ ಕುಟುಂಬದ ಆಸ್ತಿಯಾಗಿದೆ ಎಂದು ಎಸ್ಡಿಪಿಐ ಜಿಲ್ಲಾ ಮಾಜಿ ಅಧ್ಯಕ್ಷರಾದ ಹುಜೂರ್ ಅಹ್ಮದ್ ಹೇಳಿದರು.
ಅವರು ಗುರುವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಫೆ. 2 ರಂದು ಸೈ. ಯಾಕೂಬ್ ಹುಸೇನಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದ ಆರೋಪಗಳಿಗೆ ಸ್ಪಷ್ಟನೆ ನೀಡಿದರು.
ನಮ್ಮ ತಾತ ನೂರ್ ಅಹ್ಮದ್ ಅವರ ಹೆಸರಿನಲ್ಲಿ ಈ ಪ್ಲಾಟ್ ಗಳಿಗೆ 1962 ರಲ್ಲಿ ಮ್ಯೂಟೇಶನ್ ನೀಡಲಾಗಿದೆ. ಒಂದು ವೇಳೆ ನಮ್ಮ ಆಸ್ತಿ ವಕ್ಫಗೆ ದಾನ ಮಾಡಿದ್ದರೆ ಈ ಮ್ಯೂಟೇಶನ್ ನಮಗೆ ಸಿಗುತ್ತಿರಲಿಲ್ಲ. ನಮ್ಮ ಒಟ್ಟು ಏಳು ಪ್ಲಾಟ್ ಗಳ ಪೈಕಿ ಒಂದು ಪ್ಲಾಟ್ ನಲ್ಲಿ ಕಬರಸ್ತಾನ್ ಇದೆ. ಅದು ನಮ್ಮ ಪೂರ್ವಜರಿಗಾಗಿ ಮೀಸಲಾಗಿರುವ ಕುಟುಂಬದ ಸ್ಮಶಾನ ಆಗಿದೆ. ಅಲ್ಲಿ ಬೇರೆಯವರ ಸಮಾಧಿ ಇಲ್ಲ.
ನಮ್ಮ ವಿರುದ್ದ ಸುಳ್ಳು ಆರೋಪ ಮಾಡಿದವರ ಸಹೋದರ ನಮ್ಮ ಏರಿಯಾದಲ್ಲಿ ರಸ್ತೆ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸುತ್ತಿದ್ದು ಇದನ್ನು ವಿರೋಧಿಸಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ತಡೆಯಾಜ್ಞೆ ತಂದಿರುವೆ. ಇದಾದ ನಂತರ ನಮ್ಮ ವಿರುದ್ದ ಸುಳ್ಳು ಆರೋಪ , ದೂರು ನೀಡುವುದು ಮಾಡುತ್ತಿದ್ದಾರೆ. ಇವರ ದೂರು ಸುಳ್ಳು ಎಂದು ನಗರಸಭೆ ಸರ್ವೆನಲ್ಲಿ ಸಾಬೀತಾಗಿದೆ ಎಂದು ಹುಜೂರ್ ಅಹ್ಮದ ಹೇಳಿದರು.
ಈ ಸಂದರ್ಭದಲ್ಲಿ ಹುಜೂರ್ ಅವರ ಕುಟುಂಬಸ್ಥರಾದ ಮಹ್ಮದ ಇಸಾಕ್ ಅಹ್ಮದ್, ಎಂ.ಜಿ.ಸಕ್ಲೆನ್, ಶಕೀಲ್ ಅಹ್ಮದ್, ಫರೀದ್ ಅಹ್ಮದ್ ಉಪಸ್ಥಿತರಿದ್ದರು.