ಕೊಪ್ಪಳ : ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( SDPI) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ.ಫೈಜ್ ಅವರ ಬಂಧನ ಖಂಡಿಸಿ ಹಾಗೂ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ SDPI ಕೊಪ್ಪಳ ವಿಧಾನಸಭಾ ಘಟಕ ಮಂಗಳವಾರ ರಾತ್ರಿ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಪಕ್ಷದ ಮಾಜಿ ಅಧ್ಯಕ್ಷರಾದ ಹುಜೂರ್ ಅಹಮದ್ ಮಾತನಾಡಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನ ಮನಿ ಲ್ಯಾಂಡರಿಂಗ್ ಕೇಸಿನಲ್ಲಿ ಇಡಿ ಅರೆಸ್ಟ್ ಮಾಡಿದೆ. ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ಪಕ್ಷ ಸಂಘಟನೆ ಮಾಡುವ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸಾಮಾನ್ಯ ಜನಜೀವನ ನಡೆಸುವವರು ಅಂಥವರನ್ನು ಅರೆಸ್ಟ್ ಮಾಡಲಾಗಿದೆ.
ವಕ್ಫ ತಿದ್ದುಪಡಿ ಕಾಯ್ದೆಯನ್ನು ನಮ್ಮ ಪಕ್ಷ ವಿರೋಧಿಸುತ್ತ ಬಂದಿದ್ದು ದೇಶಾದ್ಯಂತ ನಮ್ಮ ಪಕ್ಷ ಜಾಗೃತಿ ಮೂಡಿಸುತ್ತಿದೆ ಇದಕ್ಕೆ ಬೆದರಿಸುವ ತಂತ್ರವಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನ ಬಂಧಿಸಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
SDPI ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಲಿಂ ಖಾದ್ರಿ ಮಾತನಾಡಿ SDPI ದೇಶದಲ್ಲಿ ಬೆಳೆಯುತ್ತಿರುವ ಪಕ್ಷ ಹಾಗೂ ವಕ್ಫ ತಿದ್ದುಪಡಿ ಕರಾಳ ಕಾಯ್ದೆ ವಿರುದ್ಧ ಸಿಎಎ- ಎನ್ ಆರ್ ಸಿ ಮಾದರಿ ಹೋರಾಟ ರೂಪಿಸಲು ಹೊರಟಿದೆ. ಈಗ ರಾಷ್ಟ್ರೀಯ ಅಧ್ಯಕ್ಷರನ್ನ ಅರೆಸ್ಟ್ ಮಾಡಿ ಆ ಹೋರಾಟ ಹತ್ತಿಕುವ ಕೆಲಸ ಕೈಬಿಡಬೇಕು ಎಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯದರ್ಶಿ ರಜಿ ಉರ್ ರೆಹಮಾನ, ಮೊಹಮ್ಮದ ಸಾದಿಕ್, ಜಿಲ್ಲಾ ಸಮಿತಿ ಸದಸ್ಯ ನಿಜಾಂ ಮಾಳೆಕೊಪ್ಪ , ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಫಾರೂಕ್ ಅತ್ತಾರ್, ಕಾರ್ಯದರ್ಶಿ ಅರ್ಷದ್ ಷೇಕ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.